Breaking News

ರಾಜ್ಯದ 7 ಸ್ಮಾರ್ಟ್‌ಸಿಟಿಗಳಿಗೆ ಇದುವರೆಗೂ ₹4,557 ಕೋಟಿ ಖರ್ಚು: ಸರ್ಕಾರ

Spread the love

ಬೆಂಗಳೂರು: ರಾಜ್ಯದ 7 ಸ್ಮಾರ್ಟ್‌ಸಿಟಿಗಳಿಗೆ ಇದುವರೆಗೂ ₹4,557 ಕೋಟಿ ಖರ್ಚು ಮಾಡಲಾಗಿದೆ. ₹1,726 ಕೋಟಿ ಮೊತ್ತದ ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್‌ ಹೇಳಿದರು.

ಕಾಂಗ್ರೆಸ್‌ನ ಅಬ್ದುಲ್‌ ಜಬ್ಬಾರ್‌ ಪ್ರಶ್ನೆಗೆ ಉತ್ತರಿಸಿದ ಅವರು, ಈಗಾಗಲೇ ಶೇ 90ರಷ್ಟು ಕಾಮಗಾರಿ ಪೂರ್ಣಗೊಂಡಿವೆ.

ಕೇಂದ್ರ ಸರ್ಕಾರ ಕಾಮಗಾರಿಗಳ ಅನುಷ್ಠಾನಕ್ಕೆ ಜೂನ್‌-2024ರವರೆಗೆ ಅವಕಾಶ ನೀಡಿದೆ. ಎಲ್ಲ ಕಾಮಗಾರಿಗಳನ್ನೂ ನಾಲ್ಕು ತಿಂಗಳ ಒಳಗೆ ಅನುಷ್ಠಾನಗೊಳಿಸಲಾಗುವುದು ಎಂದರು.

ರಾಜ್ಯದ 7 ಸ್ಮಾರ್ಟ್‌ಸಿಟಿಗಳಿಗೆ ಇದುವರೆಗೂ ₹4,557 ಕೋಟಿ ಖರ್ಚು: ಸರ್ಕಾರ

ಬರಗಾಲದಿಂದ ರಾಜ್ಯದಲ್ಲಿ 5.11 ಲಕ್ಷ ಎಕರೆ ತೋಟಗಾರಿಕಾ ಬೆಳೆ ಹಾನಿಯಾಗಿದೆ. 30.24 ಲಕ್ಷ ರೈತರಿಗೆ ₹573.28 ಕೋಟಿ ಪರಿಹಾರ ನೀಡಲಾಗಿದೆ ಎಂದು ತೋಟಗಾರಿಕಾ ಸಚಿವ ಎಸ್‌.ಎಸ್‌.ಮಲ್ಲಿಕಾರ್ಜುನ ಹೇಳಿದರು.

ಜೆಡಿಎಸ್‌ನ ಟಿ.ಎ. ಶರವಣ ಪ್ರಶ್ನೆಗೆ ಉತ್ತರಿಸಿದ ಅವರು, ಕೇಂದ್ರದ ನೆರವು ದೊರೆತ ನಂತರ ಮುಂದಿನ ಪರಿಹಾರ ವಿತರಿಸಲಾಗುವುದು ಎಂದರು.

ಕರ್ನಾಟಕ ಗಣಿ ಪರಿಸರ ಪುನಶ್ಚೇತನ ನಿಗಮದ ಬೈ-ಲಾಗಳಿಗೆ ತಿದ್ದುಪಡಿ ತರುವ ಪ್ರಸ್ತಾವ ಸರ್ಕಾರದ ಮುಂದೆ ಇಲ್ಲ ಎಂದು ಸಚಿವ ಮಲ್ಲಿಕಾರ್ಜುನ್‌ ಹೇಳಿದರು.

ಗಣಿಗಾರಿಕೆಯಿಂದ ಬಾಧಿತವಾದ ಬಳ್ಳಾರಿ, ಚಿತ್ರದುರ್ಗ, ತುಮಕೂರು, ವಿಜಯನಗರ ಜಿಲ್ಲೆಗಳ 466 ಗ್ರಾಮಗಳ ಅಭಿವೃದ್ಧಿಗೆ ₹7,634 ಕೋಟಿ ಮೊತ್ತಕ್ಕೆ ಕ್ರಿಯಾಯೋಜನೆ ರೂಪಿಸಲಾಗಿದೆ. ಹೊಸ ಹಳ್ಳಿಗಳ ಸೇರ್ಪಡೆ ಅಥವಾ ಹಣವನ್ನು ಇತರೆ ಭಾಗಕ್ಕೆ ಹಂಚಿಕೆ ಮಾಡಲು ಅವಕಾಶ ಇಲ್ಲ ಎಂದರು.


Spread the love

About Laxminews 24x7

Check Also

ಬಜೆಟ್‌ ಪೂರ್ವಭಾವಿ ಸಭೆ ಆರಂಭಿಸಿದ ಸಿಎಂ ಸಿದ್ದರಾಮಯ್ಯ

Spread the loveಬೆಂಗಳೂರು, ಫೆ.5- ಮುಖ್ಯ ಮಂತ್ರಿ ಸಿದ್ದರಾಮಯ್ಯ ಅಧಿಕೃತವಾಗಿ ಇಂದಿನಿಂದ ಬಜೆಟ್‌ ತಯಾರಿಕೆಯ ಪೂರ್ವಭಾವಿ ಸಭೆಗಳನ್ನು ಆರಂಭಿಸಿದ್ದಾರೆ.ಮಾರ್ಚ್‌ 6ರಂದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ