ಚಾಲೆಂಜಿಂಗ್ ಸ್ಟಾರ್ ದರ್ಶನ್ ವಿರುದ್ಧ ತಗಡೇ ಹಾಗೂ ಗುಮ್ಮಿಸ್ಕೊತ್ತೀಯಾ ಪದ ಬಳಕೆಗೆ ದೂರು ದಾಖಲಾದ ಬೆನ್ನಲ್ಲೇ ಗೌಡತಿಯರ ಸೇನೆಯಿಂದ ನಟ ವಿರುದ್ದ ದೂರು ಸಲ್ಲಿಸಲಾಗಿದೆ. ಈ ಹಿಂದೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ಕೊಟ್ಟಿದ್ದರೆ ಈಗ ಮಹಿಳಾ ಆಯೋಗಕ್ಕೆ ದೂರು ನೀಡಲಾಗಿದೆ.
ಜಯಶ್ರೀ , ರೇಣುಕಾ ನೇತೃತ್ವದಲ್ಲಿ ಮಹಿಳಾ ಆಯೋಗಕ್ಕೆ ದೂರು ಸಲ್ಲಿಸಿದ ಮಹಿಳೆಯರು ನಟ ಮಹಿಳೆಯರ ಕುರಿತು ಮಾಡಿದ ಕಮೆಂಟ್ ಖಂಡಿಸಿದ್ದಾರೆ. ಶ್ರೀರಂಗಪಟ್ಟಣದಲ್ಲಿ ಇತ್ತೀಚೆಗೆ ನಡೆದ ದರ್ಶನ್ 25 ನೇ ಪರ್ವದಲ್ಲಿ ದರ್ಶನ್ ಮಾತಿನ ಭರದಲ್ಲಿ ಹೇಳಿದ ಹೇಳಿಕೆ ಈಗ ವಿವಾದಕ್ಕೆ ದಾರಿ ಮಾಡಿದೆ.
ಒಬ್ಬಳು ಇವತ್ತು ಬರ್ತಾಳೆ , ನಾಳೆ ಅವಳು ಹೋಗ್ತಾಳೆ .ಅವರ ಅಜ್ಜಿನ. ಬಡಿಯಾ ಪದ ಬಳಕೆ ಈಗ ವಿವಾದಕ್ಕೆ ಕಾರಣವಾಗಿದೆ. ಸಾರ್ವಜನಿಕವಾಗಿ ಮಹಿಳೆಯರಿಗೆ ಅವಮಾನ ಮಾಡಿದ್ದಾಗಿ ಮಹಿಳೆಯರು ಆರೋಪಿಸಿದ್ದಾರೆ. ಜವಾಬ್ದಾರಿಯುತ ನಟ ಈತರ ಪದ ಬಳಸೋದು ಎಷ್ಟು ಸರಿ ಎಂದು ಮಹಿಳೆಯರು ಪ್ರಶ್ನಿಸಿದ್ದಾರೆ.
ಈ ದೂರು ಮಾತ್ರವಲ್ಲದೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ವಿರುದ್ಧ ಇನ್ನೊಂದು ದೂರು ಬಂದಿದೆ. ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ದೂರು ದಾಖಲಾಗಿದೆ. ದರ್ಶನ್ ಅವರು ಬಳಸಿರುವ ಪದಕ್ಕೆ ಈಗಾಗಲೇ ಅಕ್ಷೇಪ ಕೂಡಾ ವ್ಯಕ್ತವಾಗಿದೆ. ದರ್ಶನ್ ಪದ ಬಳಕೆಗೆ ಕರ್ನಾಟಕಪ್ರಜಾಪರ ವೇದಿಕೆ ಆಕ್ಷೇಪ ವ್ಯಕ್ತಪಡಿಸಿದೆ.