ವಿಜಯನಗರ: ರಾಮ ದೇವರೇ ಅಲ್ಲ (Rama is not god), ಪ್ರಧಾನಿ ನರೇಂದ್ರ ಮೋದಿ (PM Narendra Modi) ರಾಮ ಭಕ್ತನೇ ಅಲ್ಲ ಎಂದು ಕಾಂಗ್ರೆಸ್ ನಾಯಕ ವಿ.ಎಸ್. ಉಗ್ರಪ್ಪ (VS Ugrappa) ಅವರು ವಾಗ್ದಾಳಿ ನಡೆಸಿರುವುದು ಭಾರಿ ಚರ್ಚೆಗೆ ಕಾರಣವಾಗಿದೆ. ಅದರಲ್ಲೂ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಏಕವಚನದಲ್ಲಿ ನಿಂದಿಸಿದ್ದು ಕೆಲವರ ಆಕ್ರೋಶಕ್ಕೆ ಕಾರಣವಾಗಿದೆ.
ಹಿಂದುಗಳು ಶ್ರದ್ಧಾ ಭಕ್ತಿಯಿಂದ ಆರಾಧಿಸುವ, ಪೂಜಿಸುವ ಶ್ರೀರಾಮ ದೇವರಲ್ಲ, ದೇವರಲ್ಲ, ದೇವರಲ್ಲ ಎಂದ ಹಲವು ಬಾರಿ ಒತ್ತಿ ಹೇಳಿದ ಉಗ್ರಪ್ಪ ಆತ ಒಬ್ಬ ಮನುಷ್ಯ ಅಷ್ಟೆ ಎಂದಿದ್ದಾರೆ.
ಹೊಸಪೇಟೆಯಲ್ಲಿ ಮಾಧ್ಯಮ ಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಉಗ್ರಪ್ಪ ಅವರು, ನಿಮಗೇನಾದರೂ ಭಕ್ತಿ ಇದೆಯಾ ಅಂತ ಬಿಜೆಪಿ ನಾಯಕರನ್ನು ಪ್ರಶ್ನಿಸಿದ್ದಲ್ಲದೆ, ರಾಮ ದೇವರಲ್ಲ, ಆತ ಮನುಷ್ಯ. ಆತ ರಾಜ, ರಾಜಕುಮಾರ ಎಂದಿದ್ದಾರೆ. ಆದರೆ, ತನ್ನ ಆದರ್ಶಗಳ ಮೂಲಕ ರಾಮ ದೈವತ್ವವನ್ನು ಪಡೆದಿರುವುದು ನಿಜ ಎಂದು ಉಗ್ರಪ್ಪ ಹೇಳಿದರು.