Breaking News

ವಿಶ್ವ ದಾಖಲೆ ಬರೆದ 14 ತಿಂಗಳ ಪುಟಾಣಿ ಮನಸ್ಮಿತಾ

Spread the love

ಚಿಕ್ಕಮಗಳೂರು, ಫೆ.18- ಪ್ರತಿಭೆಗೆ ವಯಸ್ಸಿನ ಮಿತಿ ಇರುವುದಿಲ್ಲ. ಪ್ರತಿಯೊಬ್ಬರಲ್ಲೂ ತನ್ನದೇ ಆದ ಕೌಶಲ್ಯ, ಗ್ರಹಣ ಶಕ್ತಿ ಇರುತ್ತದೆ. ಇದಕ್ಕೆ ಉದಾಹರಣೆಯಾಗಿ 14 ತಿಂಗಳ ಪುಟಾಣಿ ತನ್ನ ಗ್ರಹಣ ಶಕ್ತಿ ಮೂಲಕ ಕಲಾಂ ವಲ್ರ್ಡ್ ರೆಕಾರ್ಡ್‍ಗೆ ಸೇರ್ಪಡೆಯಾಗಿದ್ದಾಳೆ.

 

ಜಿಲ್ಲೆಯ ಕಂಬಿಹಳ್ಳಿ ನಿವಾಸಿ ಪ್ರಸ್ತುತ ಬೆಂಗಳೂರಿನ ಆರ್‍ಟಿ ನಗರದಲ್ಲಿರುವ ಡಿ.ಎಂ. ಧನಲಕ್ಷ್ಮಿ ಕುಮಾರಿ ಮತ್ತು ಹುಲಿಯಪ್ಪ ಗೌಡ ದಂಪತಿಯ 14 ತಿಂಗಳ ಮಗು ಮನಸ್ಮಿತಾಳನ್ನು ಕಲಾಂ ವರ್ಲ್ಡ್ ರೆಕಾರ್ಡ್ ಅವರು ಅಸಾಧಾರಣ ಗ್ರಹಣ ಶಕ್ತಿ ಪ್ರತಿಭೆ ಎಂದು ಗುರುತಿಸಿ ತಮ್ಮ ಪುಸ್ತಕದಲ್ಲಿ ನೊಂದಾಯಿಸಿದ್ದಾರೆ.

ವಿಶ್ವ ದಾಖಲೆ ಬರೆದ 14 ತಿಂಗಳ ಪುಟಾಣಿ ಮನಸ್ಮಿತಾ

ಮಾ.3ರಂದು ಚೆನ್ನೈನ ಟೀಚ್ ಆಡಿಟೋರಿಯಂನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಮನಸ್ಮಿತಾಗೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದ್ದು, ಈಕೆಯ ದಾಖಲೆಗೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.ಮಗುವಿನ ತಾಯಿ ಡಿ. ಎಂ. ಧನಲಕ್ಷ್ಮಿ ಕುಮಾರಿ ಗೃಹಿಣಿಯಾಗಿದ್ದು, ತಂದೆ ಹುಲಿಯಪ್ಪಗೌಡ ಕೆ. ಅವರು ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ.

ಮನಸ್ಮಿತಾ ಅವರು ಕನ್ನಡ ಮತ್ತು ಇಂಗ್ಲಿಷ್ ಅಕ್ಷರಮಾಲೆ, ಕರ್ನಾಟಕದಲ್ಲಿ 8 ಜ್ಞಾನಪೀಠ ಪ್ರಶಸ್ತಿ ವಿಜೇತರು, ರಾಷ್ಟ್ರೀಯ ಪ್ರಾಣಿ, ಹಣ್ಣು, ಪಕ್ಷಿ, ಧ್ವಜ, ಹೂವು, ಕನ್ನಡ ಮತ್ತು ಇಂಗ್ಲಿಷ್‍ನಲ್ಲಿ ಸಂಖ್ಯೆಗಳು, 17 ಹಣ್ಣುಗಳು ಮತ್ತು 26 ತರಕಾರಿಗಳು, 25 ಪಕ್ಷಿಗಳು, 27 ಪ್ರಾಣಿಗಳು, 12 ಕೀಟಗಳು ಮತ್ತು 5 ಸರಿಸೃಪಗಳು, 10 ಸ್ವಾತಂತ್ರ್ಯ ಹೋರಾಟಗಾರರು, 11 ಸಮುದ್ರ ಜೀವಿಗಳು, 7 ದೇಶದ ಧ್ವಜಗಳು, ಭಾರತದಲ್ಲಿನ 7 ಐತಿಹಾಸಿಕ ಸ್ಥಳ, 10 ಹೂವುಗಳು, 7 ಭಾರತೀಯ ಕರೆನ್ಸಿ, 10 ಬಣ್ಣಗಳು ಮತ್ತು 14 ಆಕಾರಗಳು, 7 ಆಟಿಕೆಗಳ ಹೆಸರುಗಳು, 11 ಸಸ್ಯ ಮತ್ತು 5 ಎಲೆಗಳು, 19 ದೇಹದ ಭಾಗಗಳು 7 ವಿಜ್ಞಾನಿಗಳು, 336 ವಿವಿಧ ವಸ್ತುಗಳು, ಒಟ್ಟು 500 ಪದಗಳನ್ನು ಗುರುತಿಸುತ್ತಾರೆ. ಈ ಹಿನ್ನೆಲೆಯಲ್ಲಿ ಕಲಾಂ ವಲ್ಡರ್ï ರೆಕಾq್ಸರ್ï ಸಂಸ್ಥೆ ಮನಸ್ಮಿತಾ ಅವರನ್ನು ಅಸಾಧಾರಣ ಗ್ರಹಣ ಶಕ್ತಿ ಪ್ರತಿಭೆ ಎಂದು ಗುರುತಿಸಿ ಶ್ಲಾಘಿಸಲಾಗಿದೆ.


Spread the love

About Laxminews 24x7

Check Also

ಇನ್ಮುಂದೆ ಆನ್​ಲೈನ್ ಬೆಟ್ಟಿಂಗ್ ನಿಷೇಧ:

Spread the loveಬೆಂಗಳೂರು: ಆನ್​ಲೈನ್ ಬೆಟ್ಟಿಂಗ್ ಹಾಗೂ ಗ್ಯಾಂಬ್ಲಿಂಗ್​ಗೆ ಅಂಕುಶ ಹಾಕಲು ರಾಜ್ಯ ಸರ್ಕಾರ ಹೊಸ ಮಸೂದೆಯನ್ನು ರೂಪಿಸಿದೆ.‌ ಕರ್ನಾಟಕ ಪೊಲೀಸ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ