ಬೆಂಗಳೂರು, ಫೆ.22: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಬಳಿಯ ಕೆಂಪೇಗೌಡ ಏರ್ಪೋರ್ಟ್ನಲ್ಲಿ (Kempegowda International Airport Bengaluru) 22.5 ಲಕ್ಷ ಮೌಲ್ಯದ ಚಿನ್ನ (Gold Powder) ಜಪ್ತಿ ಮಾಡಲಾಗಿದೆ. ಏರ್ಪೋಟ್ ಕಸ್ಟಮ್ಸ್ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಪ್ಯಾಂಟ್ ಒಳಗಡೆ ಪೌಡರ್ ರೂಪದ ಚಿನ್ನ ಸಾಗಿಸುತ್ತಿದ್ದ ಪ್ರಯಾಣಿಕನಿಂದ ಚಿನ್ನ ಜಪ್ತಿ ಮಾಡಿದ್ದಾರೆ. ಹಾಗೂ ಪ್ರಯಾಣಿಕನನ್ನು ವಶಕ್ಕೆ ಪಡೆಯಲಾಗಿದೆ.
ಶಾರ್ಜಾದಿಂದ ಕೆಐಎಬಿಗೆ ವಿಮಾನದಲ್ಲಿ ಬಂದಿಳಿದಿದ್ದ ಆರೋಪಿ ಕಸ್ಟಮ್ ಅಧಿಕಾರಿಗಳ ಕಣ್ತಪ್ಪಿಸಲು ಡಿಸೈನ್ ಪ್ಯಾಂಟ್ ಮಾಡಿಸಿದ್ದ. ಪ್ಯಾಂಟ್ ಒಳಗಡೆ ಲೇಯರ್ಗಳನ್ನ ಮಾಡಿ ಚಿನ್ನ ಅಡಗಿಸಿಟ್ಟಿದ್ದ. ಪೌಡರ್ ರೂಪದ ಚಿನ್ನವನ್ನ ಅಡಗಿಸಿ ಸಾಗಾಟ ಮಾಡಲು ಯತ್ನಿಸಿದ್ದ. ಸದ್ಯ ಕಸ್ಟಮ್ಸ್ ಅಧಿಕಾರಿಗಳ ಚಾಣಾಕ್ಷತನದಿಂದ 22.5 ಲಕ್ಷ ಮೌಲ್ಯದ 367 ಗ್ರಾಂ ಚಿನ್ನ ಜಪ್ತಿಯಾಗಿದೆ. ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ.