Breaking News

ಯುವಕನ ಮೇಲೆ ಲಾಠಿಗಳಿಂದ ಹಲ್ಲೆ ನಡೆಸಿದ ಅಪಾರ್ಟ್​ಮೆಂಟ್ ಸೆಕ್ಯುರಿಟಿ ಗಾರ್ಡ್​ಗಳು

Spread the love

ದೇವನಹಳ್ಳಿ, ಫೆ.20: ಸ್ನೇಹಿತನನ್ನ ಡ್ರಾಪ್‌ ಮಾಡಲು ಅಪಾರ್ಟ್​​ಮೆಂಟ್​ಗೆ ಹೋದ ಯುವಕನ ಮೇಲೆ ಸೆಕ್ಯುರಿಟಿ ಗಾರ್ಡ್​ಗಳು ಲಾಠಿಗಳಿಂದಹಲ್ಲೆ (Assault)ನಡೆಸಿದ ಪ್ರಕರಣ ದೊಡ್ಡಬಳ್ಳಾಪುರ (Doddaballapur) ತಾಲೂಕಿನ ಮಾರಸಂದ್ರ ಬಳಿ ನಡೆದಿದೆ. ಲಾಠಿಗಳಿಂದ ಹಲ್ಲೆ ನಡೆಸುವ ದೃಶ್ಯ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಅರ್ಚನ್ (19) ಹಲ್ಲೆಗೊಳಗಾದ ಯುವಕ. ಮಾರಸಂದ್ರ ಬಳಿಯ ಪ್ರಾವಿಡೆಂಟ್ ವೆಲ್ವರ್ಥ ಸಿಟಿ ಅಪಾರ್ಟ್ಮೆಂಟ್​​ನಲ್ಲಿ ಅರ್ಚನ್ ಮೇಲೆ ಭದ್ರತಾ ಸಿಬ್ಬಂದಿಗಳು ಹಲ್ಲೆ ನಡೆಸಿದ್ದಾರೆ. ವಿಚಾರ ತಿಳಿದ ವಿಜಯ ಕರ್ನಾಟಕ ರಕ್ಷಣಾ ವೇದಿಕೆಯು ಯುವಕನ ಮೇಲಿನ ಹಲ್ಲೆಯನ್ನು ಖಂಡಿಸಿದ್ದು, ಅಪಾರ್ಟ್​ಮೆಂಟ್​ ಮುಂದೆ ಜಮಾಯಿಸಿದ ಕಾರ್ಯಕರ್ತರು ಹಲ್ಲೆ ನಡೆಸಿದವರ​ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.ದೊಡ್ಡಬಳ್ಳಾಪುರ: ಯುವಕನ ಮೇಲೆ ಲಾಠಿಗಳಿಂದ ಹಲ್ಲೆ ನಡೆಸಿದ ಅಪಾರ್ಟ್​ಮೆಂಟ್ ಸೆಕ್ಯುರಿಟಿ ಗಾರ್ಡ್​ಗಳು

 

ಅಲ್ಲದೆ, ಯುವಕನ ಮೇಲಿನ ಹಲ್ಲೆಗೆ ನ್ಯಾಯ ಕೊಡಿಸುವಂತೆ ಒತ್ತಾಯಿಸಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಗೆ ಈ ಅಪಾರ್ಟ್​​ಮೆಂಟ್ ಬರುತ್ತದೆ.


Spread the love

About Laxminews 24x7

Check Also

ಫಿನಾಯಿಲ್ ಮಾರಾಟ ಮಾಡುತ್ತ ಚಿನ್ನದಂಗಡಿ ದೋಚಿದ್ದ ರಾಜಸ್ಥಾನಿ ಗ್ಯಾಂಗ್

Spread the loveಬೆಂಗಳೂರು : ಫಿನಾಯಿಲ್ ಸರಬರಾಜು ಮಾಡುತ್ತ ಚಿನ್ನದಂಗಡಿ ದೋಚಿದ್ದ ಐವರು ಆರೋಪಿಗಳನ್ನ ಕೆ. ಆರ್. ಪುರಂ ಠಾಣೆ ಪೊಲೀಸರು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ