ಚಿತಾಗಾರ 10 ದಿನಗಳ ಕಾಲ ಬಂದ್​

Spread the love

ರಾಜರಾಜೇಶ್ವರಿನಗರ ವಲಯ ವ್ಯಾಪ್ತಿಯ ಸುಮ್ಮನಹಳ್ಳಿ ವಿದ್ಯುತ್ ಚಿತಾಗಾರದಲ್ಲಿ ತುರ್ತು ನಿರ್ವಹಣೆ ಕಾಮಗಾರಿಯನ್ನು ಕೈಗೊಳ್ಳಬೇಕಾಗಿರುವುದರಿಂದ ಫೆಬ್ರವರಿ 20 ರಿಂದ ಫೆಬ್ರವರಿ 29ರ ವರೆಗೆ 10 ದಿನಗಳ ಕಾಲ ಬಂದ್​ ಇರಲಿದೆ.ಬೆಂಗಳೂರು, ಫೆಬ್ರವರಿ 19: ತುರ್ತು ನಿರ್ವಹಣೆ ಹಿನ್ನೆಲೆಯಲ್ಲಿ ರಾಜರಾಜೇಶ್ವರಿನಗರ ( Rajrajeshwari Nagar ) ವಲಯ ವ್ಯಾಪ್ತಿಯಲ್ಲಿರುವ ಸುಮನಹಳ್ಳಿ ವಿದ್ಯುತ್​ ಚಿತಾಗಾರ (Sumanahalli Electric Chitagar) ಮಂಗಳವಾರ “ಫೆಬ್ರವರಿ 20 ರಿಂದ ಫೆಬ್ರವರಿ 29ರ ವರೆಗೆ” 10 ದಿನಗಳ ಕಾಲ ಬಂದ್​ ಇರಲಿದೆ.

ಸುಮನಹಳ್ಳಿ ಚಿತಾಗಾರ ಬದಲು, ಕೆಂಗೇರಿ, ಮೇಡಿ ಅಗ್ರಹಾರ, ಪೀಣ್ಯ ಚಿತಾಗಾರ ಬಳಸಿಕೊಳ್ಳುವಂತೆ ಬೃಹತ್​ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮನವಿ ಮಾಡಿದೆ.

ಬೆಂಗಳೂರಿನ ಸುಮನಹಳ್ಳಿ ಚಿತಾಗಾರ 10 ದಿನಗಳ ಕಾಲ ಬಂದ್​

ಬಿಬಿಎಂಪಿ ಪತ್ರದಲ್ಲಿ ಏನಿದೆ?

“ರಾಜರಾಜೇಶ್ವರಿನಗರ ವಲಯ ವ್ಯಾಪ್ತಿಯ ಸುಮ್ಮನಹಳ್ಳಿ ವಿದ್ಯುತ್ ಚಿತಾಗಾರದಲ್ಲಿ ತುರ್ತು ನಿರ್ವಹಣೆ ಕಾಮಗಾರಿಯನ್ನು ಕೈಗೊಳ್ಳಬೇಕಾಗಿರುವುದರಿಂದ ದಿನಾಂಕ: 20/02/2024 ರಿಂದ 29/02/2024 (10 ದಿನಗಳು) ವರೆಗೂ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗುತ್ತಿದ್ದು, ಈ ಚಿತಾಗಾರಕ್ಕೆ ಮೃತ ದೇಹಗಳನ್ನು ದಹನ ಕ್ರಿಯೆಗೆ ತರುವ ಸಾರ್ವಜನಿಕರು ಸಮೀಪದಲ್ಲಿರುವ ಕೆಂಗೇರಿ, ಮೇಡಿ ಅಗ್ರಹಾರ ಅಥವಾ ಪೀಣ್ಯ ವಿದ್ಯುತ್ ಚಿತಾಗಾರವನ್ನು ಉಪಯೋಗಿಸಿಕೊಳ್ಳಬಹುದಾಗಿರುತ್ತದೆ” ಎಂದು ಮನವಿ ಮಾಡಿದೆ.

ಯುವಕರ ಅಪಾಯಕಾರಿ ವೀಲ್ಹಿಂಗ್

ಬೆಂಗಳೂರಿನ ಬಾಬುಸಪಾಳ್ಯದ ಟಿನ್ ಫಾಕ್ಟರಿ ರಿಂಗ್ ರೋಡ್​ನಲ್ಲಿ ಯುವಕ ಅಪಾಯಕಾರಿಯಾಗಿ ವೀಲ್ಹಿಂಗ್ ಮಾಡಿ ಸಾರ್ವಜನಿಕರಿಗೆ ಉಪದ್ರವ ಕೊಡುತ್ತಿದ್ದಾರೆ. ಯುವಕ ದ್ವಿ ಚಕ್ರ ವಾಹನದಲ್ಲಿ ವೀಲ್ಹಿಂಗ್ ಮಾಡಿರುವುದನ್ನು ಸಾರ್ವಜನಿಕರು ಮೊಬೈಲ್​ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದು, ಸಂಚಾರಿ ಪೊಲೀಸರಿಗೆ ಟ್ಯಾಗ್ ಮಾಡಿ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.


Spread the love

About Laxminews 24x7

Check Also

Bigg Boss ಸೀಸನ್​-11ಕ್ಕೆ ಎಂಟ್ರಿ ಪಡೆದ ನಾಲ್ವರು ಸ್ಫರ್ಧಿಗಳು

Spread the love ಬೆಂಗಳೂರು: ಕನ್ನಡದ ಹೆಸರಾಂತ ರಿಯಾಲಿಟಿ ಶೋ ಬಿಗ್​ಬಾಸ್ (Bigg Boss)​ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಈ ಬಾರಿಯೂ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ