Breaking News

ಕಲಬುರಗಿಯ ಹವಾ ಮಲ್ಲಿನಾಥ ಮುತ್ಯಾಗೆ ನ್ಯಾಯಾಂಗ ಬಂಧನ

Spread the love

ಕಲಬುರಗಿ, ಫೆಬ್ರವರಿ 19: ಕಲಬುರಗಿಯ ಹವಾ ಮಲ್ಲಿನಾಥ ಮುತ್ಯಾ(Mallinath Mutya)ಗೆ 14 ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಕಲಬುರಗಿ 2 ನೇ ಜಿಲ್ಲಾ ಸತ್ರ ನ್ಯಾಯಾಲಯ ಸೋಮವಾರ ಆದೇಶ ಹೊರಡಿಸಿದೆ. ಹವಾ ಮಲ್ಲಿನಾಥ ಮುತ್ಯಾ ಅವರ ಸಂಬಂಧಿ ಪ್ರಕಾಶ್ ಮೇಲೆ ಅಟ್ರಾಸಿಟಿ ಮತ್ತು ಅತ್ಯಾಚಾರ ಪ್ರಕರಣ, ಹವಾ ಮಲ್ಲಿನಾಥ ಮುತ್ಯಾ ವಿರುದ್ಧವೂ ಕುಮ್ಮಕ್ಕು ಆರೋಪ ಹಿನ್ನೆಲೆ 498/A, 506,109, 34 ಅಡಿ 2018 ರಲ್ಲಿ ಕಲಬುರಗಿಯ ಎಂ ಬಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ಕು ವರ್ಷಗಳಿಂದ ಹವಾ ಮಲ್ಲಿನಾಥ್ ಮುತ್ಯಾ ನ್ಯಾಯಾಲಯಕ್ಕೆ ಹಾಜರಾಗಿಲ್ಲ.

 

ಕಲಬುರಗಿಯ ಹವಾ ಮಲ್ಲಿನಾಥ ಮುತ್ಯಾಗೆ ನ್ಯಾಯಾಂಗ ಬಂಧನ

ನ್ಯಾಯಾಲಯ ಬಾಡಿ ವಾರೆಂಟ್ ಮಾಡಿದ ಕಾರಣ ಇಂದು ನ್ಯಾಯಾಲಯದ ಮುಂದೆ ಹವಾ ಮಲ್ಲಿನಾಥ್ ಮುತ್ಯಾ ಶರಣಾಗಿದ್ದರು. ಹವಾ ಮಲ್ಲಿನಾಥ ಮುತ್ಯಾ ಜೈ ಭಾರತ್ ಮಾತಾ ಸೇವಾ ಸಮಿತಿ ಸಂಸ್ಥಾಪಕ ಅಧ್ಯಕ್ಷ, ಕರ್ನಾಟಕ-ಮಹಾರಾಷ್ಟ್ರದಲ್ಲಿ ಭಾರಿ ಪ್ರಭಾವ ಹೊಂದಿದ್ದಾರೆ.

 


Spread the love

About Laxminews 24x7

Check Also

ರವಿವಾರ ಪೇಟದಲ್ಲಿ ತಂಬಾಕು ಮಾರಾಟ ಅಂಗಡಿಗಳಿಗೆ ಜಾಗೃತಿ ತಂಬಾಕು ಮುಕ್ತ ಯುವ ಅಭಿಯಾನ 3.0.

Spread the loveರವಿವಾರ ಪೇಟದಲ್ಲಿ ತಂಬಾಕು ಮಾರಾಟ ಅಂಗಡಿಗಳಿಗೆ ಜಾಗೃತಿ ತಂಬಾಕು ಮುಕ್ತ ಯುವ ಅಭಿಯಾನ 3.0. ಮಾರ್ಕೆಟ್ ಠಾಣಾ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ