ಬೆಂಗಳೂರು: ಸಹಕಾರಿ ಕಾನೂನಿಗೆ ತಿದ್ದುಪಡಿ ಚರ್ಚೆ ವೇಳೆ ದಲಿತ ಸಿಎಂ ಮತ್ತು ಪಿಎಂ ಕೂಗು ಮೊಳಗಿತು.
ಮಳವಳ್ಳಿ ಶಾಸಕ ನಾರಾಯಣಸ್ವಾಮಿ ಮಾತನಾಡುವಾಗ ದಲಿತರು ಮೇಲೆ ಬರಬೇಕು. ಅದಕ್ಕೆ ಮೀಸಲಾತಿ ಪೂರಕ ಎಂದು ವಾದ ಮಂಡಿಸಿದರು.
ಈ ವೇಳೆ ಮಧ್ಯ ಪ್ರವೇಶಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು, ನೀವು ಡಾ.
ಜಿ. ಪರಮೇಶ್ವರ್ ಅವರನ್ನು ಸಿಎಂ ಮಾಡಿದರೆ ತಾವು ಬೆಂಬಲಿಸಿ ಮತ ಹಾಕುವುದಾಗಿ ಯತ್ನಾಳ್ ಅಬ್ಬರಿಸಿದರು.
ಇದಕ್ಕೆ ನಿಮಗೆ ಧಮ್ ಇದಿಯಾ.. ತಾಕತ್ ಇದಿಯಾ.. ಇದ್ದರೆ ದಲಿತ ಸಿಎಂ ಮಾಡಿ ಎಂದು ಸವಾಲು ಎಸೆದರು. ಬರೀ ಮತಕ್ಕಾಗಿ ದಲಿತರಾ? ಅವರಿಗೆ ಉನ್ನತ ಹುದ್ದೆ ಬೇಡವೇ? ಎಂದು ಪ್ರಶ್ನಿಸಿದರು.
ಆಗ ಮಧ್ಯ ಪ್ರವೇಶಿಸಿದ ಲಕ್ಷ್ಮಣ ಸವದಿ ಅವರು, ದಲಿತ ಪಿಎಂ ಮಾಡಿ ಎಂದು ಪ್ರತಿ ಸವಾಲು ಹಾಕಿದರು.
ಈ ವೇಳೆ ಸ್ಪೀಕರ್ ಸ್ಥಾನದ ಬಗ್ಗೆ ಯಾರೂ ಮಾತಾಡಲ್ಲ ಎಂದು ಸ್ಪೀಕರ್ ಖಾದರ್ ಹಾಸ್ಯ ಚಟಾಕಿ ಹಾರಿಸಿದರು
Laxmi News 24×7