ಉತ್ತರ ಕನ್ನಡ : ಬಿಜೆಪಿ ಸಂಸದ ಅನಂತಕುಮಾರ್ ಹೆಗಡೆ (Anantkumar Hegde) ಸದಾ ವಿವಾದಾತ್ಮಕ ಹೇಳಿಕೆ ನೀಡಿ ಸುದ್ದಿಯಾಗುತ್ತಾರೆ. ಇದೀಗ ಎಲ್ಲಿಯವರೆಗೆ ಇಸ್ಲಾಂ (Islam) ಇರುತ್ತದೊ ಅಲ್ಲಿವರೆಗೆ ಜಗತ್ತಿಗೆ ನೆಮ್ಮದಿ ಇರುವುದಿಲ್ಲ ಎಂದಿದ್ದಾರೆ. ಅಲ್ಲದೆ, ಬಿಜೆಪಿ (BJP), ಸಂಘಪರಿವಾರ ಇದ್ದಲ್ಲಿ ಮಾತ್ರ ನೆಮ್ಮದಿ ಎಂದಿದ್ದಾರೆ.
ಉತ್ತರ ಕನ್ನಡ (Uttara Kannada) ಜಿಲ್ಲೆಯ ಬನವಾಸಿಯಲ್ಲಿ (Banavasi) ಮಾತನಾಡಿದ ಅನಂತಕುಮಾರ್ ಹೆಗಡೆ, ಇಸ್ಲಾಂ ಇರುವವರೆಗೆ ಜಗತ್ತಿನಲ್ಲಿ ನೆಮ್ಮದಿ ಇರುವುದಿಲ್ಲ. ಇಂತಹ ಕಾಲಘಟ್ಟದಲ್ಲಿ ಹಿಂದೂ ಧರ್ಮ, ದೇಶ ಉಳಿಯಲು ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿ ಆಗಬೇಕಾಗಿದೆ ಎಂದರು.
ಬಿಜೆಪಿ, ಸಂಘ ಪರಿವಾರ ಇದ್ದಲ್ಲಿ ಜಗತ್ತಿಗೆ ನೆಮ್ಮದಿ ಇರಲಿದೆ. ನಾವಿಲ್ಲದಿದ್ದರೆ ಜಗತ್ತಿಗೆ ನೆಮ್ಮದಿ ಇಲ್ಲ, ಹಿಂದುತ್ವವೇ ದೇಶದ ಉಸಿರು ಎಂದ ಅನಂತಕುಮಾರ್ ಹೆಗಡೆ, ಬಿಜೆಪಿ ಉತ್ಸಾಹ ನೋಡಿ ಲೋಕಸಭೆ ಚುನಾವಣೆ ಘೋಷಣೆಗೂ ಮುನ್ನವೇ ಕಾಂಗ್ರೆಸ್ನವರು ಶಸ್ತ್ರ ತ್ಯಜಿಸಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ವೈಚಾರಿಕವಾಗಿ ಗೆದ್ದು ತೋರಿಸಬೇಕಿದೆ ಎಂದರು.