Breaking News

ಮಾರಕ ಕೋವಿಡ್-19 ವೈರಸ್ ಹಾವಳಿಯಿಂದ ದೂರವಾಗಿರುವ ಪ್ರವಾಸಿಗರನ್ನು ಸೆಳೆಯಲು ಅನೇಕ ರಾಷ್ಟ್ರಗಳು ಹೊಸ ಹೊಸ ಮಾರ್ಗಗಳನ್ನು ಕಂಡುಕೊಂಡಿವೆ.

Spread the love

ಬುಡಾಪೆಸ್ಟ್, ನ.13- ಮಾರಕ ಕೋವಿಡ್-19 ವೈರಸ್ ಹಾವಳಿಯಿಂದ ದೂರವಾಗಿರುವ ಪ್ರವಾಸಿಗರನ್ನು ಸೆಳೆಯಲು ಅನೇಕ ರಾಷ್ಟ್ರಗಳು ಹೊಸ ಹೊಸ ಮಾರ್ಗಗಳನ್ನು ಕಂಡುಕೊಂಡಿವೆ. ಹಂಗೇರಿಯ ರೆಸ್ಟೋರೆಂಟ್ ಅನುಸರಿಸಿರುವ ನವ ಪರಿಕಲ್ಪನೆ ವಿಶೇಷ ಗಮನ ಸೆಳೆದಿದೆ. ಹಂಗೇರಿ ರಾಜಧಾನಿ ಬುಡಾಪೆಸ್ಟ್‍ನಲ್ಲಿರುವ ಕೊಸ್ಟೆಸ್ ಪ್ರಸಿದ್ಧ ರೆಸ್ಟೋರೆಂಟ್.

ಈ ಹೋಟೆಲ್‍ಗೆ ಮಿಚೆಲಿನ್ ಸ್ಟಾರ್ ಮಾನ್ಯತೆ ಲಭಿಸಿದೆ. ಆದರೆ ಕೊರೊನಾ ಹಾವಳಿಯಿಂದಾಗಿ ಈ ರೆಸ್ಟೋರೆಂಟ್‍ಗೆ ವಿದೇಶಿ ಪ್ರವಾಸಿಗರು ಮತ್ತು ಸ್ಥಳೀಯರು ಸಂಖ್ಯೆ ಕಡಿಮೆಯಾಗಿದೆ ಇದರಿಂದಾಗಿ ಈ ಹೋಟೆಲ್ ಆದಾಯ ಕುಂಠಿತವಾಗಿದೆ. ಈ ನಷ್ಟಭರ್ತಿಗಾಗಿ ಈ ರೆಸ್ಟೋರೆಂಟ್ ಹೊಸ ಪರಿಕಲ್ಪನೆಯ ಸೇವೆಗೆ ಮೊರೆ ಹೋಗಿದೆ.

ಬುಡಾಪೆಸ್ಟ್ ನಗರದಲ್ಲಿರುವ ಪ್ರಮುಖ ಆಕರ್ಷಣೆಯ ತಾಣ ಐ ಪೇರಿಸ್ ಜಾಯಿಂಟ್ ವೀಲ್ಹ್‍ನಲ್ಲಿ ಸ್ಕೈಲೈನ್ ಡೈನಿಂಗ್ ವ್ಯವಸ್ಥೆ ಮಾಡಿ ಜನರನ್ನು ಆಕರ್ಷಿಸುವ ಜೊತೆಗೆ ತನ್ನ ಆದಾಯವನ್ನೂ ಈ ರೆಸ್ಟೋರೆಂಟ್ ವೃದ್ಧಿಸಿಕೊಂಡಿದೆ. ಕೋವಿಡ್-19 ವೈರಸ್ ಸುರಕ್ಷತೆಯೊಂದಿಗೆ ಬೃಹತ್ ಚಕ್ರದಲ್ಲಿ ಪ್ರವಾಸಿಗರಿಗೆ ಊಟೋಪಚಾರದ ಅತಿಥ್ಯ ಸೇವೆ ಒದಗಿಸುತ್ತಿರುವ ಕೊಸ್ಟೆಸ್ ರೆಸ್ಟೋರೆಂಟ್ ದೇಶ-ವಿದೇಶಗಳ ಪ್ರವಾಸಿಗರ ಮೆಚ್ಚುಗೆಗೆ ಪಾತ್ರವಾಗಿದೆ.

ಲಾಕ್‍ಡೌನ್ ನಂತರ ನಮ್ಮ ರೆಸ್ಟೋರೆಂಟ್ ಮರು ಆರಂಭಗೊಂಡಾಗ ಗ್ರಾಹಕರು ಇಲ್ಲದೇ ನಮ್ಮ ಆದಾಯ ನೆಲ ಕಚ್ಚಿತು. ವ್ಯಾಪಾರ ಮತ್ತು ವ್ಯವಹಾರ ಕುದುರಿಸಲು ನಾವು ಹೊಸ ಮಾರ್ಗ ಕಂಡುಕೊಂಡೆವು ಎನ್ನುತ್ತಾರೆ ಹೋಟೆಲ್ ಮಾಲೀಕ ಕಾರ್ಲೆ ಗೆರೆಂಡಾಲ್. ಹೊಟೇಲ್ ಅಥವಾ ಜಾಯಿಂಟ್ ವೀಲ್ಹ್‍ಗೆ ಹೆಚ್ಚಿನ ಸಂಖ್ಯೆ ಜನರು ಬರುತ್ತಿರಲಿಲ್ಲ. ನಾವು ಹೊಸ ಆಲೋಚನೆ ಮೂಲಕ ಜಾಯಿಂಟ್ ವೀಲ್ಹ್‍ನಲ್ಲೇ ಪ್ರವಾಸಿಗರು ಮತ್ತು ಜನರಿಗೆ ಊಟೋಪಚಾರದ ವ್ಯವಸ್ಥೆ ಮಾಡಿ ಎರಡಕ್ಕೂ ಅದಾಯ ಹೆಚ್ಚಾಗುವಂತೆ ಮಾಡಿದ್ದೇವೆ ಎಂದು ಮಾಲೀಕರು ವಿವರಿಸಿದ್ದಾರೆ.

ಕೊರೊನಾ ಪಿಡುಗಿನ ವೇಳೆ ಸುರಕ್ಷತೆ ತುಂಬಾ ಮುಖ್ಯ. ಜಾಯಿಂಟ್ ವೀಲ್ಹ್‍ನಲ್ಲಿ ಪ್ರತ್ಯೇಕ ಕ್ಯಾಬಿನ್‍ಗಳು ಇವೆ. ಸಾಮಾಜಿಕ ಅಂತರದ ಸಮಸ್ಯೆ ಇರುವುದಿಲ್ಲ. ಜನರು ಪ್ರತ್ಯೇಕವಾಗಿ ಕುಳಿತು ಆಹಾರ ಸೇವಿಸುತ್ತಾ ಜಾಯಿಂಟ್ ವೀಲ್ಹ್ ಅನುಭವ ಪಡೆಯಬಹುದಾಗಿದೆ ಎನ್ನುತ್ತಾರೆ ಗೆರೆಂಡಾಲ್.


Spread the love

About Laxminews 24x7

Check Also

ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಮೊದಲ ಬಾರಿಗೆ ಫ್ಯಾಷನ್‌ ಶೋ”

Spread the love    ಬೆಂಗಳೂರು: ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಸೀಸನ್ಸ್‌ ಆಫ್‌ ಸ್ಮೈಲ್‌ನ ಭಾಗವಾಗಿ ಇದೇ ಮೊದಲ ಬಾರಿಗೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ