ಮಂಗಳವಾರ : ಆತನ ಅಸ್ಥಿಪಂಜರ (Skeleton) ಪತ್ತೆಯಾಗಿದೆ. ಕೊರ್ತಕುಂದ ಗ್ರಾಮದ ರಸೂಲ್ ಸಾಬ್ (45) ಅನುಮಾನಾಸ್ಪದವಾಗಿ ಮೃತಪಟ್ಟಿರುವ ವ್ಯಕ್ತಿ. 45 ದಿನಗಳ ಹಿಂದೆ ಹೊಲಕ್ಕೆ ಹೋದ ರಸೂಲ್ ಸಾಬ್ ಇದ್ದಕ್ಕಿದಂತೆ ನಾಪತ್ತೆಯಾಗಿದ್ದನು. ರಸೂಲ್ಗಾಗಿ ಕುಟುಂಬಸ್ಥರು 20 ಕ್ಕೂ ಹೆಚ್ಚು ಹಳ್ಳಿಗಳಲ್ಲಿ, ದೇವಸ್ಥಾನ, ದರ್ಗಾಗಳಲ್ಲಿ, ಬಸ್ ನಿಲ್ದಾಣಗಳಲ್ಲಿ ಹುಡುಕಾಡಿದರೂ ರಸೂಲ್ ಸಿಗಲ್ಲಿ. ಕೊನೆಗೆ ಕುಟುಂಬಸ್ಥರು ಕೈಚೆಲ್ಲಿ, ಪೊಲೀಸರಿಗೆ (Police) ದೂರು ನೀಡದೆ ಸುಮ್ಮನಾದರು.
ಇದೆ ಫೆಬ್ರವರಿ 11 ರಂದು ಕೊರ್ತಕುಂದ ಹೊರಭಾಗದ ದರ್ಗಾ ಬಳಿ ತಲೆ ಬುರುಡೆವೊಂದು ಪತ್ತೆಯಾಗಿತ್ತು. ವಿಚಾರ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ದೇಹಕ್ಕಾಗಿ ಹುಡುಕಾಟ ನಡೆಸಿದ್ದರು. ಮಂಗಳವಾರದಂದು ಬೆಟ್ಟದ ಮೇಲೆ ಅಸ್ತಿಪಂಜರ ಪತ್ತೆಯಾಗಿದೆ. ವಿಚಾರ ತಿಳಿದು ಸ್ಥಳಕ್ಕೆ ಆಗಮಿಸಿದ ರುಸೂಲ್ ಕುಟುಂಬಸ್ಥರು, ಚಪ್ಪಲಿ, ಬುರುಡೆ ಮೇಲಿನ ಕೂದಲು ಮತ್ತು ಬಟ್ಟೆಯಿಂದ ಗುರುತು ಪತ್ತೆ ಹಚ್ಚಿದ್ದಾರೆ. ರಸೂಲ್ನನ್ನು ಕೊಲೆ ಮಾಡಲಾಗಿದೆ ಎಂದು ಕುಟುಂಬಸ್ಥರು ಶಂಕೆ ವ್ಯಕ್ತಪಡಿಸಿದ್ದಾರೆ. ಯಾಪಲದಿನ್ನಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.