Breaking News

ಕರ್ನಾಟಕ ಬಜೆಟ್​ ಯಾವಾಗ, ಸಮಯ? ಗಾತ್ರ ಎಷ್ಟು? ಎಲ್ಲಿ ಲೈವ್ ವೀಕ್ಷಿಸಬಹುದು? ಇಲ್ಲಿದೆ ವಿವರ

Spread the love

ಬೆಂಗಳೂರು, : ಈಗಾಗಲೇ ಕರ್ನಾಟಕದ 2024-25ನೇ ಸಾಲಿನ ಬಜೆಟ್​ (Karnataka Budget) ಅಧಿವೇಶನ ಪ್ರಾರಂಭವಾಗಿದ್ದು, ಮೊದಲ ದಿನ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರು ವಿಧಾನ ಮಂಡಲದ ಉಭಯ ಸದನಗಳ ಸದಸ್ಯರನ್ನುದ್ದೇಶಿಸಿ ಭಾಷಣ ಮಾಡಿದ್ದಾರೆ. ಇನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaih) ಅವರು ಫೆಬ್ರವರಿ 16ರಂದು 2024-25ನೇ ಸಾಲಿನ ಬಜೆಟ್ ಮಂಡನೆ ಮಾಡಲಿದ್ದಾರೆ. ಲೋಕಸಭೆ ಚುನಾವಣೆಗೆ ಹೊತ್ತಲ್ಲೇ ಬಜೆಟ್ ಮಂಡನೆ ಮಾಡುತ್ತಿರುವುದರಿಂದ ಮಹತ್ವದ ಘೋಷಣೆಗಳು ಮಾಡುವ ನಿರೀಕ್ಷೆಗಳಿವೆ.

ಬಜೆಟ್​ ಯಾವಾಗ? ಯಾವ ಸಮಯಕ್ಕೆ?

ಫೆ.16ರ ಬೆಳಗ್ಗೆ 10.15ಕ್ಕೆ ಸಿದ್ದರಾಮಯ್ಯ ಅವರು ಬಜೆಟ್ ಮಂಡನೆ ಮಾಡಲಿದ್ದಾರೆ. ಬಜೆಟ್​ ನೇರಪ್ರಸಾರವನ್ನು ಟಿವಿ9 ವಾಹಿನಿ ಹಾಗೂ ಟಿವಿ9 ಡಿಜಿಟಲ್​ನಲ್ಲಿ ನೋಡಬಹುದಾಗಿದೆ. ಬಜೆಟ್​​ ಮಂಡನಗೂ ಮುನ್ನ ಸಿದ್ದರಾಮಯ್ಯ ಅವರು ವಿಶೇಷ ಸಂಪುಟ ಸಭೆ ನಡೆಸಲಿದ್ದಾರೆ. ಇನ್ನು ಸಿದ್ದರಾಮಯ್ಯ ಅವರ 15ನೇ ಬಾರಿಯ ಬಜೆಟ್ ಮಂಡಣೆ ಇದಾಗಿರಲಿದ್ದು ಕರ್ನಾಟಕದ ಮಟ್ಟಿಗೆ ಇದೊಂದು ಹೊಸ ದಾಖಲೆಯಾಗಿದೆ.

 

ಈ ಬಾರಿ ಎಷ್ಟು ಗಾತ್ರದ ಬಜೆಟ್?

ಈ ಬಾರಿ ರಾಜ್ಯದ ಬಜೆಟ್ ಗಾತ್ರ 3.80 ಲಕ್ಷ ಕೋಟಿ ರೂ.ಗೆ ಏರಿಕೆಯಾಗಲಿದೆ. ಈವರೆಗೂ ರಾಜ್ಯದ ಬಜೆಟ್ ಗಾತ್ರ 3.27 ಲಕ್ಷ ಕೋಟಿ ರೂ. ದಾಟಿರಲಿಲ್ಲ. ಆದ್ರೆ. ಈ ಬಾರಿ ಸುಮಾರು 50 ಸಾವಿರ ಕೋಟಿ ರೂ.ಹೆಚ್ಚಳವಾಗಲಿದೆ. ಇದರೊಂದಿಗೆ ಈ ಬಾರಿ ಬಜೆಟ್​ ಗಾತ್ರ 3.80 ಲಕ್ಷ ಕೋಟಿ ರೂ.ತಲುಪಲಿದೆ.

ಸಿದ್ದರಾಮಯ್ಯ ಅವರು ಮಂಡಿಸಿದ ಮೊದಲ ಆಯವ್ಯಯದ ಗಾತ್ರ 12,616 ಕೋಟಿ ಆಗಿದ್ದರೆ 13 ನೇ ಆಯವ್ಯಯದ ಗಾತ್ರ 2,09,181 ಕೋಟಿ ಆಗಿತ್ತು. 14 ನೇ ಆಯವ್ಯಯದ ಗಾತ್ರ 3,35,000 ಕೋಟಿ‌ ಆಗಬಹುದು ಎಂದು ಸ್ವತಃ ಮುಖ್ಯಮಂತ್ರಿಗಳೇ ಅಂದಾಜಿಸಿರುವುದನ್ನು ಮಾಧ್ಯಮಗಳು ವರದಿ ಮಾಡಿವೆ.


Spread the love

About Laxminews 24x7

Check Also

ಶ್ರೇಷ್ಠ ಫೌಂಡೇಶನ್ ವತಿಯಿಂದ ಅನ್ನಸಂತರ್ಪಣೆ ಕಾರ್ಯಕ್ರಮ..

Spread the loveಶ್ರೇಷ್ಠ ಫೌಂಡೇಶನ್ ವತಿಯಿಂದ ಅನ್ನಸಂತರ್ಪಣೆ ಕಾರ್ಯಕ್ರಮ.. ಗೋಕಾಕ : ಸೌಭಾಗ್ಯ ಲಕ್ಷ್ಮಿ ಶುಗರ್ಸ್ ಮಾರ್ಗದರ್ಶಕರಾದ ಸಂತೋಷ ಜಾರಕಿಹೊಳಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ