ಬೆಂಗಳೂರು (Bengaluru): ಫೆಬ್ರವರಿ 16 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ (siddaramaiah) ಅವರು ಬಜೆಟ್ (budget) ಮಂಡಿಸಲಿದ್ದು, ಇದು ಅವರ 15 ನೇ ಬಜೆಟ್ ಮಂಡನೆಯಾಗಿದೆ.
ಗ್ಯಾರಂಟಿ ಯೋಜನೆಗಳನ್ನು ನೀಡಿ ನುಡಿದಂತೆ ನಡೆದಿದ್ದೇವೆ ಎಂದು ಬೀಗುತ್ತಿರುವ ಸಿದ್ದರಾಮಯ್ಯ ಅವರು ಮಂಡಿಸಲಿರುವ ಬಜೆಟ್ ನತ್ತ ಇಡೀ ರಾಜ್ಯ ದೃಷ್ಟಿ ನೆಟ್ಟಿದೆ.
ಈ ಬಾರಿಯಾದರೂ ಅಗತ್ಯ ಬೇಡಿಕೆಗಳಿಗೆ ಮನ್ನಣೆ ಸಿಗುತ್ತಾ ಎಂದು ಕುತೂಹಲದಿಂದ ಕಾಯುತ್ತಿದ್ದಾರೆ.
ಲೋಕಸಭಾ ಚುನಾವಣೆ (mp election) ಸಮೀಪದಲ್ಲಿಯೇ ಇರುವುದರಿಂದ ಚುನಾವಣೆಯನ್ನು ದೃಷ್ಟಿಯಿಟ್ಟುಕೊಂಡೇ ಬಜೆಟ್ ಮಂಡನೆಯಾಗುತ್ತದೆ ಎಂಬುದನ್ನು ತಳ್ಳಿಹಾಕಲಾಗದು. ಆದರೂ ಒಂದಷ್ಟು ಬೇಡಿಕೆಗಳನ್ನು ಮುಂದಿಟ್ಟುಕೊಂಡಿರುವ ಜನ ಅದು ಈಡೇರುವ ಕಾಲ ಬರುತ್ತಾ ಎಂದು ಕಾಯುತ್ತಿದ್ದಾರೆ.