ರಾಜ್ಯ ವಿಧಾನ ಮಂಡಲ ಜಂಟಿ ಅಧಿವೇಶನ: ರಾಜ್ಯಪಾಲರ ಹಿಂದಿ ಭಾಷಣಕ್ಕೆ ವಾಟಾಳ್ ನಾಗರಾಜ್ ವಿರೋಧ

Spread the love

ಬೆಂಗಳೂರು, ಫೆಬ್ರವರಿ 12: ಕನ್ನಡ ಉಳಿಸುವುದಕ್ಕೆ ಬಹಳ ಪ್ರಮುಖವಾದಂತಹ ರಾಜ್ಯದ ಶಾಸನ ಸಭೆಯ ಜಂಟಿ ಅಧಿವೇಶನದಲ್ಲಿ ಕನ್ನಡ ಮಾಯವಾಗಿದೆ. ಹಿಂದಿಯಲ್ಲಿ ಮಾತನಾಡಿರುವುದು ಖಂಡನೆ. ಶಾಸಕರಿಗೆ, ಮಂತ್ರಿಗಳಿಗೆ ಕನ್ನಡ ಬೇಡ್ವಾ ಎಂದು ಹೋರಾಟಗಾರ ವಾಟಾಳ್ ನಾಗರಾಜ್(Vatal Nagaraj)ವಾಗ್ದಾಳಿ ಮಾಡಿದ್ದಾರೆ. ವಿಧಾನಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇವತ್ತು ಕರ್ನಾಟಕ ರಾಜ್ಯದ ವಿಧಾನಮಂಡಲದ ಮೊದಲನೆ ದಿನ. ಇದನ್ನು ಉದ್ದೇಶಿಸಿ ರಾಜ್ಯಪಾಲರು ಹಿಂದೆಯಲ್ಲಿ ಭಾಷಣ ಮಾಡಿದ್ದಾರೆ. ರಾಜ್ಯಪಾಲರ ಬಗ್ಗೆ ನನಗೆ ಗೌರವವಿದೆ. ಆದರೆ ಅವರ ಹಿಂದಿ ಭಾಷಣದ ಬಗ್ಗೆ ವಿರೋಧವಿದೆ. ಶಾಸನ ಸಭೆಯಲ್ಲಿ ಒಬ್ಬ ಶಾಸಕರು, ಎಂಎಲ್​ಸಿ, ಮಂತ್ರಿಗಳು ವಿರೋಧ ಮಾಡಿಲ್ಲ. ರಾಜ್ಯಪಾಲರು ಹಿಂದೆಯಲ್ಲೆ ಕನ್ನಡ ಅಭಿವೃದ್ಧಿ ಮಾಡುತ್ತೇವೆ ಅಂತ ಮಾತಾನಾಡಿದ್ದರು. ನಮ್ಮ ಗೌರವಾನ್ವಿತ ಸದಸ್ಯರನ್ನ ಏನು ಅಂತ ಹೇಳಬೇಕೊ ಗೊತ್ತಿಲ್ಲ. ನಮ್ಮ ಶಾಸಕರು, ಎಂಎಲ್​ಸಿ, ಮಂತ್ರಿಗಳ ಬಗ್ಗೆ ಖಂಡನೆ ಮಾಡುತ್ತೇವೆ ಎಂದು ಹೇಳಿದ್ದಾರೆ.

1967ರ ಅಂದಿನ ರಾಜ್ಯಪಾಲರ ಇಂಗ್ಲೀಷ್ ಭಾಷಣಕ್ಕೆ ಒಪ್ಪಿರಲಿಲ್ಲ. ಜೆಹೆಚ್ ಪಟೇಲ್ ಸಿಎಂ ಆಗಿದ್ದಾಗ ಸಂಪೂರ್ಣ ಭಾಷಣ ವಿರೋಧ ಮಾಡಿದ್ದೆ. ಖುರ್ಷಿದ್ ಅಲಾಂಖಾನ್ ರಾಜ್ಯಪಾಲರ ಭಾಷಣ ಮಾಡುದಕ್ಕೆ ಆಗದೆ ಕನ್ನಡದಲ್ಲಿ ಭಾಷಣ ಮಾಡಬೇಕಂತ ಹಟ ಹಿಡಿದಾಗ ಸದನದಿಂದ ಹೊರ ಹೋದರು. ಇದು ಐತಿಹಾಸಿಕವಾದ ದಿನ.

ಹಿಂದಿಯಲ್ಲಿ ಮಾತನಾಡಿರುವುದು ಅನ್ಯಾಯ

ಇದು ಗಂಭೀರವಾದ ಪರಿಸ್ಥಿತಿ. ರಾಜ್ಯಕ್ಕೆ ಮಾಡಿದ ದ್ರೋಹ. ಬಿಡಿ ಜತ್ತಿ ಅವರ ಮಗ, ನಾನು ಮತ್ತು ಈಗಿನ ರಾಜ್ಯಪಾಲರು ಸೇರಿದ್ದಾಗ ಕನ್ನಡ ಪಂಡಿತರನ್ನ ನೇಮಿಸಿಕೊಂಡು ಕನ್ನಡ ಕಲಿಯಿರಿ ಅಂತ ರಾಜ್ಯಪಾಲರಿಗೆ ಸಭೆಯಲ್ಲಿ ಹೇಳಿದ್ದೆ. ಬಹಿರಂಗವಾಗಿ ಮಾತನಾಡಿದ್ದೆ ಸಂಪೂರ್ಣವಾಗಿ ಕನ್ನಡದ ಭೂಮಿಯಲ್ಲಿ ಕನ್ನಡದ ಜಂಟಿ ಅಧಿವೇಶನದಲ್ಲಿ ಹಿಂದಿಯಲ್ಲಿ ಮಾತನಾಡಿರುವುದು ಅನ್ಯಾಯ.

 

ಫೆ. 24ರ ಒಳಗೆ ಎಲ್ಲೆಲ್ಲೂ ಕನ್ನಡ ನಾಮಫಲಕ ಹಾಕಬೇಕು ಅಂತಾರೆ. ಆದರೆ ಎಲ್ಲೂ ಹಾಕಿಲ್ಲ, ಮಾರ್ವಾಡಿಗರು, ತಮಿಳಿಗರು ತುಂಬಿ ತುಳುಕುತ್ತಿದ್ದಾರೆ. ಫೆ. 24ರ ಒಳಗೆ ಸಂಪೂರ್ಣ ಬದಲಾವಣೆ ಆಗದಿದ್ದರೆ ಸಂಪೂರ್ಣ ಬಂದ್ ಮಾಡುತ್ತೇವೆ. ಸದನದಲ್ಲಿ ಒಪ್ಪಿಗೆ ತಂದು ಜಾರಿಗೆ ಮಾಡಲೇಬೇಕು ಎಂದು ಹೇಳಿದ್ದಾರೆ


Spread the love

About Laxminews 24x7

Check Also

ದೀಪಾವಳಿ ಬಳಿಕ ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಸಾಧ್ಯತೆ

Spread the love ಮುಂಬೈ: ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ದೀಪಾವಳಿ ಹಬ್ಬದ ಬಳಿಕ ಮತ್ತು ನವೆಂಬರ್‌ 26ರ ಮುನ್ನ ನಡೆಯುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ