ಬೆಂಗಳೂರು, ಫೆ.12: ಬಾಲಬ್ರೂಹಿ ಗೆಸ್ಟ್ ಹೌಸ್ನಲ್ಲಿ ಶಾಸಕರಿಗಾಗಿ ನಿರ್ಮಿಸಿದ ಕ್ಲಬ್ ವಿಧಾನಮಂಡಲ ಸಂಸ್ಥೆಯನ್ನು ಮುಖ್ಯಮಂತ್ರಿಸಿದ್ದರಾಮಯ್ಯ (Siddaramaiah)ಅವರು ಇಂದು ಉದ್ಘಾಟಿಸಿದರು. ಬಳಿಕ ಮಾತನಾಡಿದ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ (Basavaraj Horatti), ಯಾರ ಯಾರ ಕಾಲಕ್ಕೆ ಆಗಬೇಕು ಅನ್ನೋದು ಬರೆದುಕೊಟ್ಟಿರುತ್ತಾರೆ. 2022ರ ಮಾಡಬೇಕಿತ್ತು, ಕಾಲ ಕೂಡಿ ಬಂದಾಗ ಸಿದ್ದರಾಮಯ್ಯ ಮುಖ್ಯಮಂತ್ರಿ ಆದಾಗ ಉದ್ಘಾಟನೆ ಆಗಿದೆ. ನಾವು ಬೆಂಗಳೂರು ಕ್ಲಬ್ಗೆ ಚಪ್ಪಲಿ ಹಾಕಿಕೊಂಡು ಹೋದಾಗ ಬಿಡಲಿಲ್ಲ. ಪೊಲೀಸರ ಜೊತೆ ಜಗಳ ಮಾಡಿ ಹೋಗಿದ್ದೆವು. ಸಂಸದರು, ಶಾಸಕರು, ಮಾಜಿ ಶಾಸಕರು, ಸಚಿವರು ಎಲ್ಲರೂ ಬಳಸಿಕೊಳ್ಳಬಹುದು. ಇಲ್ಲಿ ಸ್ವಲ್ಪ ಎಣ್ಣೆ ಹಾಕಬಹುದು ತೊಂದರೆ ಇಲ್ಲ ಎಂದು ಹಾಸ್ಯ ಚಟಾಕೆ ಹಾರಿಸಿದರು.
ಕ್ಲಬ್ ಉದ್ಘಾಟಿಸಿದ ನಂತರ ಮಾತನಾಡಿದ ಸಿದ್ದರಾಮಯ್ಯ, ಇವತ್ತು ಕರ್ನಾಟಕ ವಿಧಾನಮಂಡಲ ಸಂಸ್ಥೆಯನ್ನ ಬಾಲಬ್ರೂಹಿನಲ್ಲಿ ಉದ್ಘಾಟನೆ ಮಾಡಿದ್ದೇವೆ. ಕಾನ್ಸ್ಟಿಟ್ಯೂನ್ ಕ್ಲಬ್ ರೀತಿಯಲ್ಲಿ ರಾಜ್ಯದಲ್ಲೂ ಒಂದು ಸಂಸ್ಥೆ ಇರಬೇಕು ಎಂಬುದು ಸಚಿವರು, ಶಾಸಕರು, ಮಾಜಿ ಶಾಸಕರು, ಸ್ಪೀಕರ್ಗಳ 20 ವರ್ಷಕ್ಕಿಂತ ಹೆಚ್ಚಿನ ಬೇಡಿಕೆಯಾಗಿತ್ತು. ಬಾಲಬ್ರೂಹಿನಲ್ಲಿ ಮಾಡೋಣ ಅಂತ ಅಂದುಕೊಂಡಿದ್ದೆವು ಎಂದರು.
ದೆಹಲಿಯ ಕಾನ್ಸ್ಟಿಟ್ಯೂಷನ್ ಕ್ಲಬ್ನಂತೆ ಇಲ್ಲಿನ ಶಾಸಕರಿಗೆ ಕ್ಲಬ್ ಮಾಡಲಾಗಿದೆ. ಇದು ವಿಧಾನಸೌಧ ಮತ್ತು ಶಾಸಕರ ಭವನಕ್ಕೆ ಬಹಳ ಹತ್ತಿರ ಇದೆ. ಕೂತು ಚರ್ಚೆ ಮಾಡಲು ಜಾಗ ಇರಲಿಲ್ಲ. ಸಮಯ ಕಳೆಯಲೂ ಜಾಗ ಇರಲಿಲ್ಲ. ಸಮಯ ಕಳೆಯಲು ಅಂದರೆ ಬೇರೆ ಅರ್ಥ ಕಲ್ಪಿಸಿಕೊಳ್ಳೋದು ಬೇಡ. ಒಳಾಂಗಣ ಕ್ರೀಡೆಗೆ ಅನುಕೂಲ ಆಗಲಿದೆ. ಕರ್ನಾಟಕ ವಿಧಾನ ಮಂಡಲ ಸಂಸ್ಥೆ ಸಭೆ ಕರೆದು ಕ್ಲಬ್ ಮಾಡುವುದಾಗಿ ಚರ್ಚಿಸಿದ್ದರು. ಸರ್ಕಾರ ವಶದಲ್ಲಿದ್ದ ಕಾನ್ಸ್ಟಿಟ್ಯೂಷನ್ ಕ್ಲಬ್ ವಿಧಾನಮಂಡಲಕ್ಕೆ ಕೊಡಲಾಯಿತು. ನಾನು ಮುಖ್ಯಮಂತ್ರಿ ಆಗಿರುವವರೆಗೂ ಇಲ್ಲಿಗೆ ಗೌರವಧ್ಯಕ್ಷನಾಗಿದ್ದೇನೆ. ಎಲ್ಲ ಸದ್ಯದರಿಗೂ ಅಡುಗೆ ರುಚಿಕರವಾಗಿ ಮಾಡಬೇಕು ಅಂತ ಸಲಹೆ ನೀಡಿದರು.