Breaking News

ಪಟ್ಟಾ ಜಮೀನು ಪರಭಾರೆ ಅವ್ಯವಹಾರ: ತನಿಖೆಗೆ ಸೂಚನೆ

Spread the love

ಲಿಂಗಸುಗೂರು: ಕೃಷ್ಣಾ ನದಿಯ ನಡುಗಡ್ಡೆ ಪ್ರದೇಶದ ಐತಿಹಾಸಿಕ ಜಲದುರ್ಗ ಜಹಗೀರಿ ಪಟ್ಟಾ ಜಮೀನುಗಳಿಗೆ ನಕಲಿ ದಾಖಲೆ ಸೃಷ್ಠಿಸಿ ಪರಭಾರೆ ಮಾಡುತ್ತಿರುವ ಕುರಿತಂತೆ ಪ್ರಜಾವಾಣಿ ಸರಣಿ ವರದಿ ಆಧರಿಸಿ ಅವ್ಯವಹಾರ ತನಿಖೆ ನಡೆಯಿಸಿ ತಿಂಗಳಲ್ಲಿ ವರದಿ ಸಲ್ಲಿಸಲು ಉಪ ವಿಭಾಗಾಧಿಕಾರಿ ಶಿಂಧೆ ಅವಿನಾಶ ಸಂಜೀವನ್‍ ಸೂಚಿಸಿದ್ದಾರೆ.

 

‘ಜಹಗೀರಿ ಜಮೀನಿಗೆ ನಕಲಿ ದಾಖಲೆ ಸೃಷ್ಟಿ’ ಹಾಗೂ ‘ನಕಲಿ ದಾಖಲೆ ಸೃಷ್ಟಿಸಿ ಆಸ್ತಿ ಕಬಳಿಕೆ’ ಶೀರ್ಷಿಕೆಯಡಿ ಪ್ರಜಾವಾಣಿ ವರದಿ ಮಾಡಿತ್ತು. ಇದರಿಂದ ಎಚ್ಚೆತ್ತುಕೊಂಡ ತಾಲ್ಲೂಕು ಆಡಳಿತ ತಹಶೀಲ್ದಾರ್, ಭೂ ದಾಖಲೆಗಳ ಸಹಾಯಕ ನಿರ್ದೇಶಕರು, ಉಪ ನೋಂದಣಾಧಿಕಾರಿ, ಉಪ ತಹಶೀಲ್ದಾರ್, ಕಂದಾಯ ನಿರೀಕ್ಷಕರು ಹಾಗೂ ಗ್ರಾಮ ಆಡಳಿತಾಧಿಕಾರಿ ತುರ್ತು ಸಭೆ ಕರೆದು ಚರ್ಚಿಸಿ 1963 ರಿಂದ 2024 ಫೆಬ್ರುವರಿ ವರೆಗಿನ ಪಹಣಿ ಆಧರಿಸಿ ಸಮಗ್ರ ವರದಿ ಸಲ್ಲಿಸಲು ಸೂಚಿಸಿದ್ದಾರೆ.

1955ರ ಪಹಣಿ ದಾಖಲೆ ಪ್ರಕಾರ ಜಲದುರ್ಗದ 1 ರಿಂದ 15 ಸರ್ವೆ ನಂಬರ್‌ನ 2,263 ಎಕರೆ ಜಮೀನು ಜಹಗೀರದಾರ ಆಗಿದ್ದ ದೇವದೀನ ನಾಥೂರಾಮ್‍ ಕುಟುಂಬದವರ ಹೆಸರಿಗೆ ಸೇರಿತ್ತು. ಬಳಿಕ ಟೋಂಚು, ಟಿಪ್ಪಣಿ, ಆಕಾರಬಂದ್‍, ಖಾಸ್ರಾ ಕಹಣಿ, ಫಾರ್ಮ್‍ ನಂಬರ್‍ ಟೆನ್‍(10) ಸೇರಿದಂತೆ ಯಾವುದೇ ದಾಖಲೆಗಳು ಇಲ್ಲದಿದ್ದರು ಸಹ ನಕಲಿ ದಾಖಲೆ ಸೃಷ್ಟಿಸಿ ಪರಭಾರೆ ಮಾಡುತ್ತಿರುವುದು ದಾಖಲೆಗಳಿಂದ ಸ್ಪಷ್ಟವಾಗುತ್ತಿದೆ ಎಂದು ಸಭೆ ಗಮನ ಸೆಳೆದರು.


Spread the love

About Laxminews 24x7

Check Also

ಫಿನಾಯಿಲ್ ಮಾರಾಟ ಮಾಡುತ್ತ ಚಿನ್ನದಂಗಡಿ ದೋಚಿದ್ದ ರಾಜಸ್ಥಾನಿ ಗ್ಯಾಂಗ್

Spread the loveಬೆಂಗಳೂರು : ಫಿನಾಯಿಲ್ ಸರಬರಾಜು ಮಾಡುತ್ತ ಚಿನ್ನದಂಗಡಿ ದೋಚಿದ್ದ ಐವರು ಆರೋಪಿಗಳನ್ನ ಕೆ. ಆರ್. ಪುರಂ ಠಾಣೆ ಪೊಲೀಸರು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ