ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಗುರುವಾರ ರಾಜ್ಯಮಟ್ಟದ ಜನಸ್ಪಂದನ (Jana Spandana) ಕಾರ್ಯಕ್ರಮ ಆಯೋಜಿಸಿದ್ದರು. ಈ ಕಾರ್ಯಕ್ರಮಕ್ಕೆ ಜನಸಾಗರವೇ ಹರಿದುಬಂದಿತ್ತು. 12,000ಕ್ಕೂ ಹೆಚ್ಚು ಅರ್ಜಿಗಳನ್ನು ಸ್ವೀಕಾರ ಮಾಡಲಾಗಿದೆ. ಈ ಬಗ್ಗೆ ರಾಜ್ಯ ಬಿಜೆಪಿ(BJP) ವ್ಯಂಗ್ಯವಾದಿದ್ದು, ಜನಸ್ಪಂದನೆಗೆ ಜನರ ವೇದನೇಯೇ ಉತ್ತರ ಎಂದು ಹೇಳಿದೆ.
ಈ ಬಗ್ಗೆ ಎಕ್ಸ್ ನಲ್ಲಿ (X) ಟೀಕೆ ಮಾಡಿರುವ ಬಿಜೆಪಿ, “ಕಾಂಗ್ರೆಸ್ಸಿಗರ ಪೊಲಿಟಿಕಲ್ ಸ್ಟಂಟ್ ಜನಸ್ಪಂದನೆಗೆ ಜನರ ವೇದನೆಯೇ ಉತ್ತರ” ಎಂದು ಬರೆದುಕೊಂಡಿದೆ. ಅಲ್ಲದೇ, “ಸಿಎಂ ಸಿದ್ದರಾಮಯ್ಯ ಅವರಿಗೆ ಜನರು, ಅಕ್ಕಿ ಕೊಡ್ತಿಲ್ಲ, ಗೃಹಲಕ್ಷ್ಮಿ ಬಂದಿಲ್ಲ, ಗೃಹಜ್ಯೋತಿ ಕೊಡ್ತಿಲ್ಲ” ಎಂದು ಸರ್ಕಾರ ಮೇಲೆ ಕಿಡಿಕಾರಿರುವ ವ್ಯಂಗ್ಯಚಿತ್ರವೊಂದನ್ನು ಹಂಚಿಕೊಂಡಿದೆ
Laxmi News 24×7