ಬೆಂಗಳೂರು: ಸುಧಾಕರ್ ಅವರು ಹತಾಶ ಮನೋಭಾವದಿಂದ ಕ್ಷುಲ್ಲಕ ಹೇಳಿಕೆಗಳನ್ನು ಕೊಡುತ್ತಿದ್ದಾರೆ. ಬಿರಿಯಾನಿ ತಿನ್ನಿಸಿ ಗೆಲ್ಲೋ ವ್ಯಕ್ತಿತ್ವ ನನ್ನದಲ್ಲ ಎಂದು ಎಸ್‌ಆರ್ ವಿಶ್ವನಾಥ್ (SR Vishwanth) ಟಾಂಗ್ ನೀಡಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಎಸ್‌ಆರ್ ವಿಶ್ವನಾಥ್, ಬಿರಿಯಾನಿ ಕೊಟ್ಟ ವಿಚಾರದ ಬಗ್ಗೆ ಸುಧಾಕರ್ ಬಹುಶಃ ತಪ್ಪು ತಿಳಿದುಕೊಂಡಿದ್ದಾರೆ.
ನನ್ನ ಸ್ನೇಹಿತ ಭೈರೇಗೌಡ ಅವರ ಹುಟ್ಟು ಹಬ್ಬ ಜೋರಾಗಿ ಮಾಡುತ್ತಿದ್ದೆವು. ಅವರು ಆಗ ಎಲ್ಲಾ ಪಕ್ಷದವರನ್ನೂ ಕರೆಯುತ್ತಿದ್ದರು. ಆ ಸಂದರ್ಭ ನಾನೂ ಹೋಗಿದ್ದೀನಿ. ಆದರೆ ಬಿರಿಯಾನಿ ತಿನ್ನಿಸಿ ಗೆಲ್ಲೋ ವ್ಯಕ್ತಿತ್ವ ನನ್ನದಲ್ಲ ಎಂದು ವ್ಯಂಗ್ಯವಾಡಿದರು.
ಅವರು ಈ ರೀತಿಯ ಹೇಳಿಕೆ ಯಾಕಾಗಿ ಕೊಟ್ಟಿದ್ದಾರೋ ಗೊತ್ತಿಲ್ಲ. ಅವರು ಹತಾಶಾ ಮನೋಭಾವದಿಂದ ಈ ರೀತಿ ಕ್ಷುಲ್ಲಕ ಹೇಳಿಕೆಗಳನ್ನು ಕೊಡುತ್ತಿದ್ದಾರೆ. ಅವರು ಹಾಗೆ ಯಾಕೆ ಮಾತನಾಡುತ್ತಾರೆ ಅನ್ನೋದು ನನಗೂ ಅರ್ಥ ಆಗ್ತಿಲ್ಲ. ಅವರು ತಮ್ಮ ವರ್ತನೆಯನ್ನು ಸರಿಪಡಿಸಿಕೊಳ್ಳಬೇಕು ಎಂದು ಎಚ್ಚರಿಕೆ ನೀಡಿದರು.
ಅವರು ಎಂಎಲ್‌ಎ ಚುನಾವಣೆಗೆ ನಿಂತಾಗ ಬರೀ ಪಾಂಪ್ಲೆಟ್ ಕೊಟ್ಟುಕೊಂಡು ಬಂದಿದ್ದರು. ಅದಕ್ಕಾಗಿಯೇ ಚುನಾವಣೆಯಲ್ಲಿ ಸೋತರು. ಅವರ ಅನುಭವದ ಮುಂದೆ ನನ್ನ ಅನುಭವ ಸಣ್ಣದು ಅನ್ನಿಸುತ್ತದೆ. ಅವರು ಯಾವ ಕಾರಣದಿಂದ ಬಿರಿಯಾನಿ ಕೊಟ್ಟು ವೋಟ್ ಹಾಕಿಸಿಕೊಂಡ್ರು ಅಂತ ಹೇಳಿಕೆ ಕೊಟ್ಟರೋ ಗೊತ್ತಿಲ್ಲ. ಅಂತಹ ಪ್ರಮೇಯ ಎಂದಿಗೂ ಬರಲ್ಲ ಎಂದರು.