ಯಾದಗಿರಿ, ಫೆ.08: ಇತ್ತೀಚೆಗಷ್ಟೇ ಕಡಿಮೆ ಅಂಕ ಪಡೆದ ವಿದ್ಯಾರ್ಥಿನಿಯರಿಗೆ ಶಿಕ್ಷಕನೊಬ್ಬ ಥಳಿಸಿದ ಘಟನೆ ನಡೆದಿತ್ತು.ಇದೀಗ ಶಿಕ್ಷಕನೊಬ್ಬ ಕ್ಷೀರಭಾಗ್ಯ ಯೋಜನೆಯ ಹಾಲಿನ ಪುಡಿ ಪ್ಯಾಕೆಟ್ನ್ನು ಕಿರಾಣಿ ಅಂಗಡಿಯೊಂದಕ್ಕೆ ಮಾರಾಟ ಮಾಡಿರುವ ಘಟನೆ ನಡೆದಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆಯಾದಗಿರಿತಾಲೂಕಿನ ಲಿಂಗೇರಿ ತಾಂಡಾದ ಸರ್ಕಾರಿ ಶಾಲೆ ಶಿಕ್ಷಕ ಸೂರ್ಯಕಾಂತ್ ಎಂಬುವವರನ್ನು ಅಮಾನತು ಮಾಡಿ ಯಾದಗಿರಿ ಡಿಡಿಪಿಐ ಮಂಜುನಾಥ್ ಆದೇಶಿಸಿದ್ದಾರೆ.
ಅಷ್ಟೇ ಅಲ್ಲ, ಅಮಾನತು ಜೊತೆಗೆ ಕ್ರಿಮಿನಲ್ ಪ್ರಕರಣವನ್ನು ಪ್ರಕರಣ ಕೂಡ ದಾಖಲಿಸುವಂತೆ ಅಕ್ಷರ ದಾಸೋಹ ಯೋಜನಾಧಿಕಾರಿಗಳಿಗೆ ಸೂಚಿಸಿದ್ದಾರೆ.
Laxmi News 24×7