ರಾಯಚೂರು, : ಮೊನ್ನೆಯಷ್ಟೇ ರಾಯಚೂರು ಹಾಗೂ ತೆಲಂಗಾಣ ಗಡಿ ಭಾಗದ ಕೃಷ್ಣಾ ನದಿ ಒಡಲಿನಲ್ಲಿ ಐತಿಹಾಸಿ ವಿಗ್ರಹಗಳು ಪತ್ತೆಯಾಗಿದ್ದವು. ರಾಯಚೂರು ತಾಲ್ಲೂಕಿನ ದೇವಸುಗುರು(Devarsugur) ಗ್ರಾಮ ಹಾಗೂ ಸುತ್ತಲಿನ ಜನ ಸಖತ್ ಖುಷ್ ಆಗಿದ್ದರು. ಜೊತೆಗೆಐತಿಹಾಸಿಕ ವಿಗ್ರಹಗಳು(Idols) ಸಿಕ್ಕಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದರು. ಈ ಭಾಗದಲ್ಲಿ ಒಂದೊಂದು ರೀತಿಯ ಐತಿಹಾಸಿಕ ವೈಶಿಷ್ಟ್ಯವಿರುವ ಬಗ್ಗೆ ಇತಿಹಾಸ ತಜ್ಞರು ಹೇಳಿದ್ದು, ಈ ವಿಗ್ರಹಗಳು 11 ನೇ ಶತಮಾನದ ಕಲ್ಯಾಣ ಚಾಲುಕ್ಯರಿಗೆ ಸೇರಿದೆ ಎಂದು ಹೇಳಲಾಗಿತ್ತು. ಅಷ್ಟೇ ಅಲ್ಲ, ವಿಗ್ರಹ ಸಿಕ್ಕ ಸ್ಥಳ ಹಾಗೂ ರಾಯಚೂರಿನಲ್ಲಿ ಸುಮಾರು 163 ಯುದ್ಧಗಳು ನಡೆದಿದ್ದವು. ಹೀಗಾಗಿ ಪತ್ತೆಯಾದ ವಿಗ್ರಹಗಳಿಂದ ಮಣ್ಣಲ್ಲಿ ಮಣ್ಣಾಗಿ ಹೋಗಿರುವ ಅದೆಷ್ಟೋ ಇತಿಹಾಸ ಸತ್ಯ ಹೊರಬರಹುದು ಎಂದು ಜನ ನಿರೀಕ್ಷಿಸಿದ್ದರು. ಆದರೆ, ಅಲ್ಲಾಗಿದ್ದೆ ಬೇರೆ, ಪುರಾತತ್ವ ಇಲಾಖೆಯ ದಿವ್ಯ ನಿರ್ಲಕ್ಷಕ್ಕೆ ಪತ್ತೆಯಾದ ಸ್ಥಳದಲ್ಲೇ ವಿಗ್ರಹಗಳು ಅನಾಥವಾಗಿ ಬಿದ್ದಿವೆ. ಇದು ಸಾರ್ವಜನಿಕರು ಕೆರಳುವಂತೆ ಮಾಡಿದೆ.

ಈ ಹಿಂದೆ ಬಹುಮನಿ ಸುಲ್ತಾನರು ಹಿಂದು ದೇವಾಲಯಗಳ ಮೇಲೆ ದಾಳಿ ನಡೆಸಿ ಧ್ವಂಸಗೊಳಿಸಿದ್ದರಂತೆ. ಆಗ ದೇವರ ವಿಗ್ರಹಗಳನ್ನು ಪಕ್ಕದ ಕೃಷ್ಣಾ ನದಿಗೆ ಬೀಸಾಡಿರುವ ಉದಾಹರಣೆಗಳಿವೆಯಂತೆ. ಇದೇ ಕಾರಣಕ್ಕೆ ಕೃಷ್ಣಾ ನದಿಯಲ್ಲಿ ಸಿಕ್ಕ ದಶಾವತಾರದ ವಿಷ್ಣುವಿನ ವಿಗ್ರಹ ಹಾಗೂ ಶಿವಲಿಂಗ ನಮಗೆ ಸೇರಿದ್ದು ಎಂದು ರಾಜ್ಯದ ತೆಲಂಗಾಣ ಗಡಿಯ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದರು. ಈ ಜಟಾಪಟಿ ಮಧ್ಯೆ ದೇವಸುಗೂರು ಗ್ರಾಮಸ್ಥರು ಒಂದು ವಿಷ್ಣುವಿನ ಶಿಲೆಯನ್ನ ತಮ್ಮೂರಿನ ರಾಮಲಿಂಗ ದೇವಾಲಯದಲ್ಲಿರಿಸಿ ಪೂಜೆ ಮಾಡುತ್ತಿದ್ದಾರೆ.
Laxmi News 24×7