Breaking News

ಬೆಂಗಳೂರಿನಲ್ಲಿ ಜೋಡಿ ಕೊಲೆ;

Spread the love

ಬೆಂಗಳೂರು,  ರಾಜ್ಯ ರಾಜಧಾನಿಯಲ್ಲಿ ಅಪರಾಧ ಪ್ರಕರಣಗಳು ಹೆಚ್ಚುತ್ತಿದ್ದು, ಪೊಲೀಸರು ಎಷ್ಟೇ ಕಟ್ಟುನಿಟ್ಟಿನ ಕ್ರಮ ಕೈಗೊಂಡರು ಇದಕ್ಕೆ ಬ್ರೇಕ್​ ಹಾಕಲಾಗುತ್ತಿಲ್ಲ. ಇದೀಗಬೆಂಗಳೂರಿನಕುಂಬಾರಪೇಟೆಯ(Kumbarpet) ಹರಿ ಅಂಗಡಿ ಮಳಿಗೆಯಲ್ಲಿ ದುಷ್ಕರ್ಮಿಗಳು ಚಾಕುವಿನಿಂದ ಇರಿದು ಇಬ್ಬರನ್ನು ಬರ್ಬರ ಹತ್ಯೆ ಮಾಡಿದ್ದಾರೆ. ಸುರೇಶ್, ಮಹೇಂದ್ರ ಮೃತ ರ್ದುದೈವಿಗಳು. ಆಸ್ತಿ ವಿಚಾರಕ್ಕೆ ಸಂಬಂಧಿಕರೇ ಕೊಲೆಗೈದಿರುವ ಶಂಕೆ ವ್ಯಕ್ತವಾಗಿದ್ದು, ಸದ್ಯಕ್ಕೆ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.

ಕೇಂದ್ರ ವಿಭಾಗ ಡಿಸಿಪಿ ಹೇಳಿದ್ದಿಷ್ಟು

ಇನ್ನು ಈ ಕುರಿತು ಮಾತನಾಡಿದ ಕೇಂದ್ರ ವಿಭಾಗ ಡಿಸಿಪಿ ಶೇಖರ್ ‘ ಘಟನೆ ಕುರಿತು ಮಾಹಿತಿ ಬಂದ ಕೂಡಲೇ ಸ್ಥಳಕ್ಕೆ ಭೇಟಿ ನೀಡಿದ್ದೀವಿ. ಮೃತ ಸುರೇಶ್ ಮತ್ತು ಮಹೇಂದ್ರ ಇಬ್ಬರು ಅಡುಗೆ ಉಪಕರಣಗಳನ್ನು ಮಾರಾಟ ಮಾಡುತ್ತಿದ್ದರು. . ಮೇಲ್ನೋಟಕ್ಕೆ ಆಸ್ತಿ ವಿಚಾರಕ್ಕೆ ನಡೆದ ಕೊಲೆ ಎನ್ನಲಾಗುತ್ತಿದೆ. ಈ ಕುರಿತು ತನಿಖೆ ನಡೆಸಿದ ಬಳಿಕ ಕೃತ್ಯಕ್ಕೆ ನಿಖರವಾದ ಕಾರಣ ತಿಳಿಸಲಾಗುವುದು ಎಂದರು. ಇನ್ನು ಈ ಕುರಿತು ಹಲಸೂರು ಗೇಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಆರೋಪಿ ಟಾರ್ಗೆಟ್ ಇದ್ದಿದ್ದವನೇ ಬೇರೆ, ಬಿಡಿಸಲು ಹೋದವನು ಆದ ಕೊಲೆ

ಇನ್ನು ಆರೋಪಿ ಟಾರ್ಗೆಟ್ ಇದ್ದಿದ್ದು ಮೃತ ಸುರೇಶ್ ಮಾತ್ರ. ಆದರೆ, ಬಿಡಿಸಲು ಹೋದ ಮಹೇಂದ್ರನನ್ನು ಕೂಡ ಕೊಲೆ ಮಾಡಿದ್ದಾನೆ. ಸುರೇಶ್ ಹಾಗೂ ಮಹೇಂದ್ರ ಇಬ್ಬರು ಸ್ನೇಹಿತರು, ಈ ಹಿನ್ನಲೆ ಸುರೇಶ್ ಭೇಟಿಗೆ ಮಹೇಂದ್ರ ಆಗಮಿಸಿದ್ದ. ಈ ವೇಳೆ ಸುರೇಶ್ ಮೇಲೆ ಇದ್ದಕ್ಕಿದ್ದಂತೆ ಅಟ್ಯಾಕ್ ಮಾಡಿದ ಹಂತಕ, ಬಿಡಿಸಲು ಹೋದ ಮಹೇಂದ್ರನ ಮೇಲೂ ಹಲ್ಲೆ ಮಾಡಿ ಇಬ್ಬರನ್ನು ಹತ್ಯೆಗೈದಿದ್ದಾನೆ. ಸುರೇಶ್ ಅಂಗಡಿ ಒಳಗೆ ಚೇರ್ ಮೇಲೆ ಶವವಾಗಿ ಬಿದ್ದಿದ್ದರೆ, ಇತ್ತ ಮಹೇಂದ್ರ ಅಂಗಡಿ ಹೊರಗೆ ನಿಲ್ಲಿಸಿದ್ದ ಗಾಡಿಯಲ್ಲಿ ಸಾವನ್ನಪ್ಪಿದ್ದಾನೆ.

ತಂದೆ ಬುದ್ಧಿವಾದ ಹೇಳಿದಕ್ಕೆ ಮನನೊಂದು ಮಗ ಆತ್ಮಹತ್ಯೆ

ಧಾರವಾಡ: ತಂದೆ ಓದಿನ ಕಡೆ ಗಮನ ಕೊಡು ಎಂದು ಬುದ್ಧಿವಾದ ಹೇಳಿದಕ್ಕೆ ಮನನೊಂದು ಫುಟ್ಬಾಲ್ ಆಟಗಾರ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಧಾರವಾಡ ನಗರದ ಕೆಲಗೇರಿ ಕೆರೆಯಲ್ಲಿ ನಡೆದಿದೆ. ಸಾದನಕೇರಿ ಬಡಾವಣೆ ನಿವಾಸಿ ಶರಣಪ್ಪ ಕೊಂಡಿಹಾಳ ಎಂಬುವರ ಪುತ್ರ ಮೃತ ಚೇತನ್(23)​​. ತಂದೆ ಬುದ್ದಿ ಹೇಳಿದ ಎರಡು ದಿನಗಳ ಹಿಂದೆ ನಾಪತ್ತೆಯಾಗಿದ್ದ ಚೇತನ್,
ಇಂದು ಕೆರೆಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ. ಈ ಕುರಿತು ಧಾರವಾಡ ಉಪನಗರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.


Spread the love

About Laxminews 24x7

Check Also

ಕರ್ನಾಟಕದಲ್ಲಿ 2305 ಕಿ.ಮೀ.ಹೈವೇ ಯೋಜನೆಗಳು ಅನುಷ್ಠಾನ ಹಂತದಲ್ಲಿವೆ: ನಿತಿನ್ ಗಡ್ಕರಿ

Spread the loveನವದೆಹಲಿ, (ಆಗಸ್ಟ್ 20): ಕರ್ನಾಟಕ ರಾಜ್ಯದಲ್ಲಿ ಸುಮಾರು 48,428 ಕೋಟಿ ರೂಪಾಯಿ ಅಂದಾಜು ವೆಚ್ಚದಲ್ಲಿ ಸುಮಾರು 2,305 ಕಿಲೋ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ