ಅದು ಭಾರತೀಯ ಜನತಾ ಪಕ್ಷಅಲ್ಲ, ಬ್ರಿಟಿಷ್ ಜನತಾ ಪಕ್ಷ:ಮಧು ಬಂಗಾರಪ್ಪ

Spread the love

ಬೆಂಗಳೂರು, : “ಅದು ಭಾರತೀಯ ಜನತಾ ಪಕ್ಷ (bharatiya janata party) ಅಲ್ಲ, ಬ್ರಿಟಿಷ್ ಜನತಾ ಪಕ್ಷ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದಾರೆ. ದೆಹಲಿಯಲ್ಲಿ ಕೂತು ಅಂಕಿ ಅಂಶಗಳನ್ನು ಹೇಳಿದರೆ ಆಗುವುದಿಲ್ಲ. 4 ಲಕ್ಷ ಚಿಲ್ಲರೆ ಎಲ್ಲಿ, ಇವರು ಕೊಟ್ಟಿರುವ 1 ಲಕ್ಷ ಚಿಲ್ಲರೆ ಎಲ್ಲಿ”? ಎಂದು ಸಚಿವ ಮಧು ಬಂಗಾರಪ್ಪ (Madhu Bangarappa) ವಾಗ್ದಾಳಿ ನಡೆಸಿದರು.

ತೆರಿಗೆ ಹಣದಲ್ಲಿ ಕರ್ನಾಟಕಕ್ಕೆ ಕೇಂದ್ರ ಸರ್ಕಾರ ಅನ್ಯಾಯ ಮಾಡುತ್ತಿದೆ ಎಂದು ಆರೋಪಿಸಿ ರಾಜ್ಯ ಕಾಂಗ್ರೆಸ್ ಸರ್ಕಾರ ದೆಹಲಿಯ ಜಂತರ್ ಮಂತರ್​ನಲ್ಲಿ ಪ್ರತಿಭಟನೆ ಮಾಡಿತು. ಬಳಿಕ ದೆಹಲಿಯಿಂದ ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಬಂದಿಳಿದ ಸಚಿವ ಮಧು ಬಂಗಾರಪ್ಪ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ, “ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ದೆಹಲಿಯಲ್ಲಿ ಕೂತು ಅಂಕಿ ಅಂಶಗಳನ್ನು ಹೇಳಿದರೆ ಆಗುವುದಿಲ್ಲ. 4 ಲಕ್ಷ ಚಿಲ್ಲರೆ ಎಲ್ಲಿ, ಇವರು ಕೊಟ್ಟಿರುವ 1 ಲಕ್ಷ ಚಿಲ್ಲರೆ ಎಲ್ಲಿ” ಎಂದು ತಿರುಗೇಟು ನೀಡಿದರು.


Spread the love

About Laxminews 24x7

Check Also

ದೀಪಾವಳಿ ಬಳಿಕ ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಸಾಧ್ಯತೆ

Spread the love ಮುಂಬೈ: ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ದೀಪಾವಳಿ ಹಬ್ಬದ ಬಳಿಕ ಮತ್ತು ನವೆಂಬರ್‌ 26ರ ಮುನ್ನ ನಡೆಯುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ