ಫೈಟರ್’ನಲ್ಲಿ ವಾಯುಪಡೆ ಸಮವಸ್ತ್ರದಲ್ಲಿ ಚುಂಬನ: ಹೃತಿಕ್, ದೀಪಿಕಾ ಸೇರಿದಂತೆ ನಿರ್ಮಾಪಕರಿಗೆ ಲೀಗಲ್ ನೋಟಿಸ್!
Laxminews 24x7
ಫೆಬ್ರವರಿ 7, 2024
ರಾಜಕೀಯ, ರಾಜ್ಯ
50 Views
ಫೈಟರ್’ನಲ್ಲಿ ವಾಯುಪಡೆ ಸಮವಸ್ತ್ರದಲ್ಲಿ ಚುಂಬನ: ಹೃತಿಕ್, ದೀಪಿಕಾ ಸೇರಿದಂತೆ ನಿರ್ಮಾಪಕರಿಗೆ ಲೀಗಲ್ ನೋಟಿಸ್!
ಸಿದ್ಧಾರ್ಥ್ ಆನಂದ್ ನಿರ್ದೇಶನದ ಫೈಟರ್ ಚಿತ್ರದಲ್ಲಿನ ಚುಂಬನದ ದೃಶ್ಯಕ್ಕೆ ಸಂಬಂಧಿಸಿದಂತೆ ಲೀಗಲ್ ನೋಟಿಸ್ ಕಳುಹಿಸಲಾಗಿದೆ. ಚುಂಬನದ ದೃಶ್ಯವು ಭಾರತೀಯ ವಾಯುಪಡೆಯ ಘನತೆಗೆ ಧಕ್ಕೆ ತರುತ್ತದೆ ಎಂದು ಆರೋಪಿಸಲಾಗಿದೆ. ಏಕೆಂದರೆ ಈ ದೃಶ್ಯವನ್ನು ವಾಯುಪಡೆಯ ಸಮವಸ್ತ್ರದಲ್ಲಿ ಚಿತ್ರೀಕರಿಸಲಾಗಿದೆ. ಸಿದ್ಧಾರ್ಥ್ ಆನಂದ್ ನಿರ್ದೇಶನದ ಫೈಟರ್ ಚಿತ್ರದಲ್ಲಿನ ಚುಂಬನದ ದೃಶ್ಯಕ್ಕೆ ಸಂಬಂಧಿಸಿದಂತೆ ಲೀಗಲ್ ನೋಟಿಸ್ ಕಳುಹಿಸಲಾಗಿದೆ. ಚುಂಬನದ ದೃಶ್ಯವು ಭಾರತೀಯ ವಾಯುಪಡೆಯ ಘನತೆಗೆ ಧಕ್ಕೆ ತರುತ್ತದೆ ಎಂದು ಆರೋಪಿಸಲಾಗಿದೆ.
ಏಕೆಂದರೆ ಈ ದೃಶ್ಯವನ್ನು ವಾಯುಪಡೆಯ ಸಮವಸ್ತ್ರದಲ್ಲಿ ಚಿತ್ರೀಕರಿಸಲಾಗಿದೆ.
ಅಸ್ಸಾಂ ಏರ್ ಫೋರ್ಸ್ ಅಧಿಕಾರಿ ಸೌಮ್ಯ ದೀಪ್ ದಾಸ್ ಅವರು ಸಿದ್ಧಾರ್ಥ್ ಆನಂದ್ ಸೇರಿದಂತೆ ನಿರ್ಮಾಪಕರಿಗೆ ಈ ನೋಟಿಸ್ ಕಳುಹಿಸಿದ್ದಾರೆ.
ಈ ದೃಶ್ಯ ಭಾರತೀಯ ವಾಯುಪಡೆಯ ಘನತೆಗೆ ಧಕ್ಕೆ ತರಲಿದೆ ಮತ್ತು ಅದರ ಗೌರವಕ್ಕೆ ಧಕ್ಕೆ ತರಲಿದೆ ಎಂದು ಅವರು ಅದರಲ್ಲಿ ತಿಳಿಸಿದ್ದಾರೆ. ವಿವಾದವಾಗಿರುವ ದೃಶ್ಯದಲ್ಲಿ ದೀಪಿಕಾ ಪಡುಕೋಣೆ ಮತ್ತು ಹೃತಿಕ್ ರೋಷನ್ ಲಿಪ್ ಲಾಕ್ ಮಾಡಿರುವುದು ಕಂಡುಬಂದಿದೆ. ಇಬ್ಬರೂ ವಾಯುಪಡೆಯ ಸಮವಸ್ತ್ರ ದರಿಸಿದ್ದಾರೆ.
ನಮ್ಮ ಸಮವಸ್ತ್ರವು ಕೇವಲ ಬಟ್ಟೆಯಲ್ಲ. ಅದು ನಮ್ಮ ಕರ್ತವ್ಯ, ನಿಸ್ವಾರ್ಥ ಸೇವೆ ಮತ್ತು ರಾಷ್ಟ್ರೀಯ ಭದ್ರತೆಯ ಕಡೆಗೆ ನಮ್ಮ ಅಚಲ ಬದ್ಧತೆಯ ಪ್ರಬಲ ಸಂಕೇತವಾಗಿದೆ ಎಂದು ಅವರು ಹೇಳಿದ್ದಾರೆ.