ಬೆಂಗಳೂರು, ಫೆಬ್ರವರಿ 03: ನರಬಲಿ (Human sacrifice), ಹೆಣ್ಣು ಮಕ್ಕಳ ಬಲಿ ಈಗಲೂ ಇದೆ. ಕಾಮಾಕ್ಯದಿಂದ ಕೇರಳದವರೆಗೂ (Kerala) ನರಬಲಿ ನಡೆಯುತ್ತದೆ. ಬಡ ಮಕ್ಕಳನ್ನು, ಒಂಟಿ ಹೆಣ್ಣು ಮಕ್ಕಳನ್ನು ಮತ್ತು ಬಿಕ್ಷುಕರನ್ನು ಇದಕ್ಕೆ ಬಳಸಿಕೊಳ್ಳಲಾಗುತ್ತೆ. ಕರ್ನಾಟಕದ ಕೆಲವು ರಾಜಕಾರಣಿಗಳು ಈಗಲೂ ನರಬಲಿ ಕೊಡುತ್ತಾರೆ. ನೇರವಾಗಿ ಅವರು ಇದರಲ್ಲಿ ಭಾಗಿಯಾಗಲ್ಲ. ಆದರೆ ಈ ಕೆಲಸ ಮಾಡಿಸುತ್ತಾರೆ ಎಂದು ನಿರ್ದೇಶಕಅಗ್ನಿ ಶ್ರೀಧರ್(Agni Sreedhar) ಆರೋಪ ಮಾಡಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ದಂಡುಪಾಳ್ಯ ಗ್ಯಾಂಗ್ ಮೇಲೆ ಕೊಲೆ ಆರೋಪ ಹೊರಿಸಿದರು ಎಂದರು.
ಆದರೆ ದಂಡುಪಾಳ್ಯ ಗ್ಯಾಂಗ್ ಆ ಕೊಲೆಗಳನ್ನು ಮಾಡಿರಲಿಲ್ಲ. ದಂಡುಪಾಳ್ಯ ಸಿನಿಮಾದಲ್ಲಿ ತೋರಿಸುವ ಅಂಶಗಳು ನೈಜವಲ್ಲ. ಕ್ರೀಂ ಸಿನಿಮಾದ ಕಥೆ ನರಬಲಿಗೆ ಸಂಬಂಧಿಸಿದೆ ಎಂದು ಹೇಳಿದರು. ಇನ್ನು ಅಗ್ನಿ ಶ್ರೀಧರ ಕ್ರೀಂ ಚಿತ್ರದಲ್ಲಿ ನಟಿಸಿದ್ದಾರೆ.
ಕ್ರೀಂ ಚಿತ್ರದ ವಿಷುಯಲ್ ಟ್ರೇಲರ್ ಬಿಡುಗಡೆ
ಡಿ.ಕೆ.ದೇವೇಂದ್ರ, ನಿರ್ಮಿಸಿರುವ ಈ ಸಿನಿಮಾವನ್ನು ಅಭಿಷೇಕ್ ಬಸಂತ್ ನಿರ್ದೇಶನ ಮಾಡಿದ್ದಾರೆ. ಕಥೆ, ಚಿತ್ರಕಥೆ ಹಾಗೂ ಸಂಭಾಷಣೆಯನ್ನು ಅಗ್ನಿ ಶ್ರೀಧರ್ ಬರೆದಿದ್ದಾರೆ. ಈ ಚಿತ್ರದ ವಿಷುಯಲ್ ಟ್ರೇಲರ್ ಇತ್ತೀಚೆಗೆ ಎ2 ಮ್ಯೂಸಿಕ್ ಮೂಲಕ ಬಿಡುಗಡೆಯಾಯ್ತು. ಲೇಖಕ ಅಗ್ನಿ ಶ್ರೀಧರ್ ಸಿನಿಮಾದ ಟ್ರೇಲರ್ ಬಿಡುಗಡೆ ಮಾಡಿದರು. ಕ್ರೀಂ ಚಿತ್ರದಲ್ಲಿ ‘ಕಿರಿಕ್ ಪಾರ್ಟಿ’ ಚಿತ್ರ ಖ್ಯಾತಿಯ ನಟಿ ಸಂಯುಕ್ತ ಹೆಗಡೆ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಭಾರತದಲ್ಲಿ ಪ್ರತಿವರ್ಷ ಎರಡೂವರೆ ಸಾವಿರ ಮಹಿಳೆಯರು ಒಂದಲ್ಲಾ ಒಂದು ಕಾರಣದಿಂದ ಬಲಿಯಾಗುತ್ತಿದ್ದಾರೆ? ಅದಕ್ಕೆ ಕಾರಣ ಏನು ಎಂಬುದನ್ನು ತಿಳಿಸುವ ಕಥೆ ಕೂಡ ಈ ಚಿತ್ರದಲ್ಲಿದೆ.