ಬೆಳಗಾವಿ ಸುದ್ದಿ : ಬೆಳಗಾವಿ ದಿನಾಂಕ: 03/02/2024 ರಂದು ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ನೋಂದಣಿ ಮತ್ತು ಕುಂದು ಕೊರತೆ ಪರಿಹಾರ ಪ್ರಾಧಿಕಾರದ ಸಮಿತಿಯ ಅಧ್ಯಕ್ಷರಾದ ಶ್ರೀ ನಿತೀಶ್ ಪಾಟೀಲ್ ಮಾನ್ಯ ಜಿಲ್ಲಾಧಿಕಾರಿಗಳು ಬೆಳಗಾವಿ. ಇವರು ಹಾಗೂ ಸದಸ್ಯರ ಒಳಗೊಂಡ ಸಮಿತಿಯು ಕೆಪಿಎಂಇ ಕಾಯ್ದೆ ಉಲ್ಲಂಘಿಸಿದ 5 ಪ್ರಕರಣಗಳ ನ್ಯಾಯಾಂಗ ವಿಚಾರಣೆಯಲ್ಲಿ ಖಾನಾಪುರ್ ತಾಲೂಕಿನ ಒಬ್ಬರಿಗೆ ರೂ. 1.00 ಲಕ್ಷ ಹಾಗೂ ಇನ್ನಿಬ್ಬರಿಗೆ ತಲಾ 50,000/- ಅಂತೆ ದಂಡ ವಿಧಿಸಿರುತ್ತಾರೆ
ಅದರಂತೆ ಸವದತ್ತಿ ತಾಲೂಕಿನ ಯರಗಟ್ಟಿ ಗ್ರಾಮದ ನಕಲಿ ವೈದ್ಯನಿಗೆ ರೂ. 1.00 ಲಕ್ಷ ಇನ್ನೊಬ್ಬರಿಗೆ 50,000/- ಅಂತೆ ದಂಡ ವಿಧಿಸಿ, ಎಚ್ಚರಿಸಿರುತ್ತಾರೆ.
ಅದಲ್ಲದೆ ನೊಂದಣಿ ಹೊಂದದೇ ಹಾಗೂ ನಕಲಿ ವೈದ್ಯ ವೃತ್ತಿ ನಡೆಸುವವರ ಮೇಲೆ ಕಠಿಣ ಕ್ರಮ ಜರುಗಿಸುವುದಾಗಿ ತಿಳಿಸಿದರು,ಸದರಿ ವಿಚಾರಣೆಯಲ್ಲಿ ಡಾ.ಮಹೇಶ್ ಕೋಣಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಬೆಳಗಾವಿ, ಡಾ.ವಿಶ್ವನಾಥ್ ಭೋವಿ, ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿಗಳು ಬೆಳಗಾವಿ, ಡಾ.ಶ್ರೀಕಾಂತ ಸುನದೋಳ್ಳಿ, ಜಿಲ್ಲಾ ಆಯುಷ್ ಅಧಿಕಾರಿಗಳು ಬೆಳಗಾವಿ, ಡಾ.ಸೌಭಾಗ್ಯ ಭಟ್, ಸಮಿತಿ ಸದಸ್ಯರು, ಐ.ಎಂ.ಎ ಸಂಘದ ಪದಾಧಿಕಾರಿಗಳು ತಾಲೂಕು ಆರೋಗ್ಯ ಅಧಿಕಾರಿಗಳು.ಖಾನಾಪುರ್, ಸವದತ್ತಿ ಹಾಗೂ ಶ್ರೀ.ಮಂಜುನಾಥ್ ಬಿಸನಳ್ಳಿ, ಆರೋಗ್ಯ ನಿರೀಕ್ಷಣಾಧಿಕಾರಿಗಳು, ಬೆಳಗಾವಿ, ಶ್ರೀ. ಪ್ರಕಾಶ್ ಅಂದಾನಿ ಕಚೇರಿ ಅಧಿಕ್ಷಕರು, ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.