Breaking News

ಪೂನಂ ಪಾಂಡೆ ಸತ್ತಿಲ್ಲ, ಸಾವಿನ ಸುದ್ದಿಗೆ ಹೊಸ ಟ್ವಿಸ್ಟ್..!

Spread the love

ಮುಂಬೈ,ಫೆ.3- ಸ್ವಯಂ ಸಾವಿನ ಸುದ್ದಿ ಹರಿಯಬಿಟ್ಟು ವ್ಯಾಪಕ ಚರ್ಚೆಗೆ ಗ್ರಾಸವಾಗಿದ್ದ ಬಾಲಿವುಡ್ ನಟಿ ಹಾಗೂ ಮಾಡೆಲ್ ಪೂನಂ ಪಾಂಡೆ ಇಂದು ದಿಢೀರ್ ಪ್ರತ್ಯಕ್ಷವಾಗಿ ನಾನು ಬದುಕಿದ್ದೇನೆ ಎಂದು ಹೇಳಿದ್ದಾರೆ. ಜೊತೆಗೆ ಗರ್ಭಕಂಠ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸಲು ಈ ರೀತಿ ಮಾಡಿದ್ದಾಗಿ ಸ್ಪಷ್ಟನೆ ನೀಡಿದ್ದಾರೆ.

 

ನಿನ್ನೆ ಇದ್ದಕ್ಕಿದ್ದಂತೆ ಸುದ್ದಿಯೊಂದು ಹರಿದಾಡಿದ್ದು, ಉತ್ತರಪ್ರದೇಶದಲ್ಲಿ ಪೂನಂ ಪಾಂಡೆ ನಿಧನರಾಗಿದ್ದಾರೆ ಎಂಬ ಮಾಹಿತಿ ತಿಳಿದುಬಂತು. ಹಲವು ಗೊಂದಲಗಳ ನಡುವೆಯೇ ಪೂನಂ ಪಾಂಡೆ ಅವರ ಇನ್‍ಸ್ಟ್ರಾಗ್ರಾಂ ಖಾತೆಯಲ್ಲಿ ಇಂದು ಬೆಳಗ್ಗೆ ಪೂನಂ ಪಾಂಡೆ ನಿಧನರಾಗಿದ್ದಾರೆ. ಅವರ ವೈಯಕ್ತಿಕ ವಿಚಾರಗಳ ಬಗ್ಗೆ ಚರ್ಚೆ ಮಾಡಬಾರದು ಎಂಬ ಪೋಸ್ಟ್ ಕಾಣಿಸಿಕೊಂಡಿತ್ತು. ಮಧ್ಯಾಹ್ನದ ವೇಳೆಗೆ ಪೂನಂ ಪಾಂಡೆ ಅವರ ಖಾತೆಯಲ್ಲಿ ಸಾವಿನ ಸುದ್ದಿಯನ್ನು ತಾವೇ ಪೋಸ್ಟ್ ಮಾಡಿದ್ದಾಗಿ ಆಕೆಯ ಮ್ಯಾನೇಜರ್ ಸ್ಪಷ್ಟನೆ ನೀಡಿದ್ದರು.

 

ಇದನ್ನು ಮಾಧ್ಯಮಗಳು, ಪತ್ರಿಕೆಗಳು ನಂಬಿ ಸುದ್ದಿ ಬಿತ್ತರಿಸಿದ್ದಲ್ಲದೆ ಗರ್ಭಕಂಠ ಕ್ಯಾನ್ಸರ್‍ನ ಲಕ್ಷಣಗಳು, ಅಪಾಯಗಳು ಮತ್ತು ನಿಯಂತ್ರಣದ ಮಾಹಿತಿ ಕುರಿತು ಚರ್ಚೆಯನ್ನು ನಡೆಸಿದ್ದರು. ಇಂದು ಇದ್ದಕ್ಕಿದ್ದಂತೆ ತಮ್ಮ ಇನ್‍ಸ್ಟ್ರಾ ಖಾತೆಯಲ್ಲಿ 12 ಗಂಟೆ ಸುಮಾರಿಗೆ ಕಾಣಿಸಿಕೊಂಡ ಪೂನಂ ಪಾಂಡೆ, ನಾನು ಬದುಕಿದ್ದೇನೆ ಎಂದು ಘೋಷಿಸಿದ್ದಾರೆ.

ಗರ್ಭಕಂಠದ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸಲು ಪೂನಂ ಪಾಂಡೆ ಈ ವಿಭಿನ್ನ ವಿಧಾನವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಪೂನಂ ಪಾಂಡೆ ಮನರಂಜನಾ ಉದ್ಯಮದಲ್ಲಿನ ಕೆಲಸಕ್ಕಾಗಿ ಮಾತ್ರವಲ್ಲದೆ ಸಾಮಾಜಿಕ ಮಾಧ್ಯಮದಲ್ಲಿ ತನ್ನ ರೋಮಾಂಚಕ ಉಪಸ್ಥಿತಿಗಾಗಿಯೂ ಹೆಸರುವಾಸಿಯಾಗಿದ್ದಾಳೆ.


Spread the love

About Laxminews 24x7

Check Also

ಬಿಜೆಪಿ ಮುಖಂಡನ ಪುತ್ರನ ವಿರುದ್ಧ ಅತ್ಯಾಚಾರ ಕೇಸ್: ಮಗುವಿನ ಜನ್ಮ ನೀಡಿದ ಸಂತ್ರಸ್ತೆ

Spread the loveಮಂಗಳೂರು, ): ಪುತ್ತೂರು ಬಿಜೆಪಿ ಮುಖಂಡನ ಪುತ್ರನ (Puttur BJP leader Son )ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ