Breaking News

ಉತಾರ ಪೂರೈಸಲು ಲಂಚ ಪಡೆಯುತ್ತಿದ್ದ ಪಂಚಾಯತ ಅಭಿವೃದ್ಧಿ ಅಧಿಕಾರಿ, ಲೋಕಾಯುಕ್ತಬಲಿಗೆ

Spread the love

ರಾಯಬಾಗ  : ಪಿರ್ಯಾದಿದಾರರಾದ ಶ್ರೀ ಅಪ್ಪಾಸಾಬ @ ಅಪ್ಪಣ್ಣಾ ಹಣಮಂತ ಕೆಂಗನ್ನವರ ಸಾ॥ ನಾಗರಾಳ ತಾ।। ರಾಯಭಾಗ ಇವರು ತಮ್ಮ ತಾಯಿ ಶ್ರೀಮತಿ ಗಂಗವ್ವ ಹಣಮಂತ ಕೆಂಗನ್ನವರ ಇವಳ ಹೆಸರಿನಲ್ಲಿರುವ ನಾಗರಾಳ ಗ್ರಾಮದ ರಿ.ಸ.ನಂ. 1/2 ನಿಡಗುಂದಿ ಗ್ರಾಮ ಪಂಚಾಯತ ವಿಪಿಸಿ ನಂ. 146/1 ನೇದ್ದರ ಮನೆಗೆ ಸಂಬಂಧಿಸಿದ ಇ- ಸ್ವತ್ತು ಆಸ್ತಿ ನಮೂನೆ-9 & 11 ನ್ನು ನೀಡಲು ಶ್ರೀ ಸದಾಶಿವ ಜಯಪ್ಪ ಕರಗಾರ, ಪಂಚಾಯತ ಅಭಿವೃದ್ಧಿ ಅಧಿಕಾರಿ, ನಿಡಗುಂದಿ ಗ್ರಾಮ ಪಂಚಾಯತಿ ತಾ॥ ರಾಯಬಾಗ ಜಿ॥ ಬೆಳಗಾವಿ ಇವರ ಕಛೇರಿಗೆ ಸಲ್ಲಿಸಿದ್ದರು.

ಸದರಿ ಪಿರ್ಯಾದಿದಾರರ ತಾಯಿಯ ಆಸ್ತಿಗೆ ಸಂಬಂಧಿಸಿದ ಇ-ಸ್ವತ್ತು ಆಸ್ತಿ ನಮೂನೆ-9 & 11 ನ್ನು ನೀಡಲು ಶ್ರೀ ಸದಾಶಿವ ಜಯಪ್ಪ ಕರಗಾರ, ಪಂಚಾಯತ ಅಭಿವೃದ್ಧಿ ಅಧಿಕಾರಿ, ನಿಡಗುಂದಿ ಗ್ರಾಮ ಪಂಚಾಯತಿ ತಾ॥ ರಾಯಬಾಗ ಜಿ॥ ಬೆಳಗಾವಿ ರವರು ಫಿರ್ಯಾದಿ ಶ್ರೀ ಅಪ್ಪಾಸಾಬ @ ಅಪ್ಪಣ್ಣಾ ಹಣಮಂತ ಕೆಂಗನ್ನವರ ಸಾ॥ ನಾಗರಾಳ ತಾ॥ ರಾಯಭಾಗ ರವರಿಗೆ ರೂ 5000/- ಲಂಚದ ಹಣಕ್ಕೆ ಬೇಡಿಕೆ ಇಟ್ಟ ಹಿನ್ನೆಲೆಯಲ್ಲಿ ಈ ಬಗ್ಗೆ ಲಂಚ ಕೊಡಲು ಮನಸ್ಸಿಲ್ಲದೇ ಪಿರ್ಯಾದಿದಾರರು ಆಪಾದಿತ ಅಧಿಕಾರಿಯ ಲಂಚಬೇಡಿಕೆಯ ಬಗ್ಗೆ ಲೋಕಾಯುಕ್ತ ಪೊಲೀಸ್ ಠಾಣೆಗೆ ದೂರು ನೀಡಿದ ಹಿನ್ನೆಲೆಯಲ್ಲಿ ಲೋಕಾಯುಕ್ತ ಪೊಲೀಸ್ ಠಾಣೆ ಬೆಳಗಾವಿಯಲ್ಲಿ ಪ್ರಕರಣ ಸಂಖ್ಯೆ 02/2024 ಕಲಂ 7(ಎ) ಪಿಸಿ ಕಾಯ್ದೆ 1988 (ತಿದ್ದುಪಡಿ- 2018) ರಡಿಯಲ್ಲಿ ದಾಖಲಿಸಿಕೊಂಡಿರುತ್ತದೆ.

ಈ ಪ್ರಕರಣದ ಹಿನ್ನೆಲೆಯಲ್ಲಿ ಆಪಾದಿತ ಅಧಿಕಾರಿಯು ದಿನಾಂಕಃ 02.02.2024 ರಂದು ರಾಯಬಾಗ ಪಟ್ಟಣದ ಶ್ರೀ ಸತ್ಯಗೌಡ ಭೈರಪ್ಪ ಕಿತ್ತೂರೆ ಸಾ॥ ಬೊಮ್ಮನಾಳ, ಗುತ್ತಿಗೆದಾರರು ಇವರ ಮನೆಯಲ್ಲಿ ಪಿರ್ಯಾದಿಯಿಂದ ಲಂಚದ ಹಣವನ್ನು ಸ್ವೀಕರಿಸುವ ವೇಳೆ ಯಶಸ್ವಿಯಾಗಿ ಟ್ರ್ಯಾಪ್ ಮಾಡಿ ಸದರಿ ಶ್ರೀ ಸದಾಶಿವ ಜಯಪ್ಪ ಕರಗಾರ, ಪಂಚಾಯತ ಅಭಿವೃದ್ಧಿ ಅಧಿಕಾರಿ, ನಿಡಗುಂದಿ ಗ್ರಾಮ ಪಂಚಾಯತಿ ತಾ॥ ರಾಯಬಾಗ ರವರನ್ನು ಬಂಧಿಸಿ ಸೂಕ್ತ ಕಾನೂನು ಕ್ರಮ ಜರುಗಿಸಲಾಗಿರುತ್ತದೆ. ಸದರಿ ಟ್ರ್ಯಾಪ್ ಕಾರ್ಯಾಚರಣೆಯನ್ನು ಮಾನ್ಯ ಪೊಲೀಸ್ ಅಧೀಕ್ಷಕರಾದ ಶ್ರೀ ಹನಮಂತರಾಯ ಐಪಿಎಸ್ ಕರ್ನಾಟಕ ಲೋಕಾಯುಕ್ತ ಬೆಳಗಾವಿ ರವರ ಮಾರ್ಗದರ್ಶನದಲ್ಲಿ ಶ್ರೀ ಎ. ಆರ್. ಕಲಾದಗಿ ಪೊಲೀಸ್ ಇನ್ಸ್‌ಪೆಕ್ಟರ್ ಲೋಕಾಯುಕ್ತ ಬೆಳಗಾವಿ ಮತ್ತು ತಂಡದವರಿಂದ ಕೈಗೊಳ್ಳಲಾಗಿರುತ್ತದೆ.


Spread the love

About Laxminews 24x7

Check Also

ಬಿಜೆಪಿ ಮುಖಂಡನ ಪುತ್ರನ ವಿರುದ್ಧ ಅತ್ಯಾಚಾರ ಕೇಸ್: ಮಗುವಿನ ಜನ್ಮ ನೀಡಿದ ಸಂತ್ರಸ್ತೆ

Spread the loveಮಂಗಳೂರು, ): ಪುತ್ತೂರು ಬಿಜೆಪಿ ಮುಖಂಡನ ಪುತ್ರನ (Puttur BJP leader Son )ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ