ಗದಗ, ಜನವರಿ 30: ಗದಗ-ಬೆಟಗೇರಿ ಅವಳಿ ನಗರದಲ್ಲಿ ( Gadag Betageri twin city) ಸಂಚಾರ ವ್ಯವಸ್ಥೆ ಸುಧಾರಣೆ ಹಾಗೂ ಜನರ ಸುರಕ್ಷತೆಯ ದೃಷ್ಟಿಯಿಂದ ಥರ್ಟ್ ಐ ಅನುಷ್ಟಾನ ಮಾಡಲಾಗಿದೆ.
ಹೆಜ್ಜೆ ಹೆಜ್ಜೆಗೂ ಹೈಟೆಕ್ ಸಿಸಿ ಕ್ಯಾಮರಾ ಅಳವಡಿಸಲಾಗಿದೆ. ಟ್ರಾಫಿಕ್ ನಿಯಮ ಉಲ್ಲಂಘಿಸಿದರೆ (Traffic Rules Violaton) ನೇರವಾಗಿ ಮನೆಗೆ ದಂಡದ ನೋಟಿಸ್ ಕಳುಹಿಸಲಾಗುತ್ತಿದೆ. ಆದರೆ, 119 ಬೈಕ್ ಸವಾರರು ಪೊಲೀಸರ ನೋಟಿಸ್‌ಗಳಿಗೂ ಕ್ಯಾರೇ ಅನ್ನುತ್ತಿಲ್ಲ. 10 ರಿಂದ 16 ಬಾರಿ ನೋಟಿಸ್ ನೀಡಿದರೂ ಕಿಮ್ಮತ್ತು ನೀಡುತ್ತಾ ಇಲ್ಲ. ಹೀಗಾಗಿ ಕಠಿಣ ಕ್ರಮಕ್ಕೆ ಈಗ ಪೊಲೀಸ್ ಇಲಾಖೆ ಮುಂದಾಗಿದ್ದು, ಬೈಕ್ ಸವಾರರನ್ನು ಅರೆಸ್ಟ್ ಮಾಡಿ ಕೋರ್ಟ್ಗೆ ಹಾಜರುಪಡಿಸಲು ಚಿಂತನೆ ನಡೆಸಿದ್ದಾರೆ.
ಮನೆಗೆ 10-15 ಬಾರಿ ನೋಟಿಸ್ ಕಳುಹಿಸಿದರೂ ಕೇರ್ ಮಾಡದ 119 ಬೈಕ್ ಸವಾರರನ್ನು ಪೊಲೀಸ್ ಇಲಾಖೆ ಪತ್ತೆ ಮಾಡಿದೆ. ಅವರಿಗೆ, ದಂಡವನ್ನು ಕಟ್ಟಬೇಕು ಅಥವಾ ಕಠಿಣ ಕಾನೂನು ಕ್ರಮ ಎದುರಿಸಬೇಕು ಎಂದು ಎಚ್ಚರಿಕೆ ನೀಡಿದೆ. ಬೈಕ್ ಸೀಜ್ ಮಾಡುವುದು, ಬೈಕ್ ಸವಾರರನ್ನು ಅರೆಸ್ಟ್ ಮಾಡಿ ಕೋರ್ಟ್ಗೆ ಹಾಜರುಪಡಿಸುವ ಕ್ರಮ ಕೈಗೊಳ್ಳಲಾಗುವುದು ಎಂದು ಎಸ್ಪಿ ಎಚ್ಚರಿಕೆ ನೀಡಿದ್ದಾರೆ.