ಬೆಂಗಳೂರು, ಜ.30: ಅಯೋಧ್ಯೆ ರಾಮ ಮಂದಿರ ನಿರ್ಮಾಣಕ್ಕೆ ಒಂದು ರೂಪಾಯಿ ಕೊಡಲ್ಲ ಎಂದಿದ್ದ ಮುಖ್ಯಮಂತ್ರಿಸಿದ್ದರಾಮಯ್ಯಅವರು ಇದೀಗ ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ರಾಮ ಜಪ ಮಾಡಲು ಆರಂಭಿಸಿದ್ದಾರೆ. ಬೆಂಗಳೂರಿನಲ್ಲಿ ರಾಮ ಮಂದಿರ ಉದ್ಘಾಟಿಸಿದ್ದ ಸಿದ್ದರಾಮಯ್ಯ (Siddaramaiah) ಅವರು ಜೈ ಶ್ರೀರಾಮ್ ಘೋಷಣೆ ಕೂಗಿದ್ದರು. ಇಲ್ಲಿಂದ ಆರಂಭವಾದ ಸಿದ್ದರಾಮಯ್ಯ ಅವರ ಶ್ರೀರಾಮ (Sri Ram) ಜಪ ಇಂದು ನಡೆದ ಗಾಂಧಿ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲೂ ಮುಂದುವರಿದಿದೆ.
ಗಾಂಧಿ ಪುಣ್ಯಸ್ಮರಣೆ ಹಿನ್ನೆಲೆ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಸಿದ್ದರಾಮಯ್ಯ, ಶ್ರೀರಾಮ ಚಂದ್ರರ ಆದರ್ಶವನ್ನು ಸ್ಮರಿಸಿದರು. ಮಹಾತ್ಮ ಗಾಂಧೀಜಿ ಸಾಯುವಾಗ ಹೇ ರಾಮ್ ಅಂತ ಉಚ್ಚಾರ ಮಾಡಿ ಪ್ರಾಣ ತ್ಯಾಗ ಮಾಡಿದ್ದರು. ಶ್ರೀ ರಾಮಚಂದ್ರನ ಬಗ್ಗೆ ಅಪಾರವಾದ ಭಕ್ತಿ, ನಂಬಿಕೆ ಇಟ್ಟಿದ್ದರು. ಅದಕ್ಕೆ ಅವರು ಯಾವತ್ತೂ ರಘು ಪತಿ ರಾಘವ ರಾಜಾ ರಾಂ ಪತೀತ ಪಾವನ ಸೀತಾ ರಾಂ ಅಂತಿದ್ದರು. ನಾವೂ ಅದನ್ನು ಪ್ರತಿ ಕಾರ್ಯಕ್ರಮಗಲ್ಲೂ ಹೇಳುತ್ತೇವೆ ಎಂದರು.
ಶ್ರೀರಾಮ ಚಂದ್ರ ದಶರಥರಾಜ ಹಾಗೂ ಕೌಶಲ್ಯ ದೇವಿಯ ಮಗ ಆಗಿದ್ದಾರೆ. ದಶರಥ ಮಹಾರಾಜರಿಗೆ ಮೂರು ಜನ ಹೆಂಡತಿಯರು. ಮೂವರ ಪೈಕಿ ಕೌಶಲ್ಯ ದೇವಿಯ ಮಗ ಶ್ರೀರಾಮಚಂದ್ರ. ಶ್ರೀರಾಮಚಂದ್ರ ಪಿತೃ ವಾಕ್ಯ ಪರಿಪಾಲನೆಗಾಗಿ ರಾಜ್ಯಭಸರ ತ್ಯಾಗ ಮಾಡಿ ಸಹೋದರ ಭರತನಿಗೆ ಪಟ್ಟ ಕಟ್ಟಿ ಕಾಡಿಗೆ ಹೋಗುತ್ತಾರೆ. ಪತ್ನಿ ಸೀತೆ, ಸಹೋದರ ಲಕ್ಷ್ಮಣ ಜೊತೆ ಕಾಡಿಗೆ ಹೋಗುತ್ತಾರೆ. 14 ವರ್ಷ ವನವಾಸ ಮಾಡುತ್ತಾರೆ ಎಂದರು.