Breaking News

ಹಿಂದುತ್ವ ಅಳಿಸಲು ಸಾಧ್ಯವಿಲ್ಲ: ಬಿವೈಆರ್ ಕಿಡಿ

Spread the love

ಶಿವಮೊಗ್ಗ: ಮಂಡ್ಯ ಜಿಲ್ಲೆ ಕೆರಗೋಡು ಗ್ರಾಮದಲ್ಲಿ ಹನುಮಧ್ವಜ ತೆರವು ಮಾಡಿದ ಅಲ್ಲಿನ ಜಿಲ್ಲಾಡಳಿತದ ನಡೆ ದುರುದ್ದೇಶದಿಂದ ಕೂಡಿದೆ. ಸರ್ಕಾರದ ಕಪಿಮುಷ್ಠಿಯಲ್ಲಿನ ಅಧಿಕಾರಿಗಳಿದ್ದಾರೆ. ಸರ್ಕಾರದ ದಬ್ಬಾಳಿಕೆಯಿಂದ ಹಿಂದುತ್ವವನ್ನು ಅಳಿಸುವುದು ಸಾಧ್ಯವಿಲ್ಲ ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಕಿಡಿಕಾರಿದ್ದಾರೆ.

 

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಡೀ ರಾಷ್ಟ್ರವೇ ಇಂದು ಹಿಂದುತ್ವದ ಅಡಿಯಲ್ಲಿ, ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಸಂಘಟಿತವಾಗಿದೆ. ಕಾಂಗ್ರೆಸ್ ತುಷ್ಟೀಕರಣ ನೀತಿಯಿಂದ ಹೊರಬರಬೇಕು. ಇಲ್ಲದೇ ಇದ್ದರೆ ದೇಶ ಕಾಂಗ್ರೆಸ್ಸೇತರವಾಗಲಿದೆ ಎಂದು ಹೇಳಿದರು. ರಾಷ್ಟ್ರಧ್ವಜ ಹಾರಿಸಿರುವುದರ ಬಗ್ಗೆ ಯಾರದ್ದೂ ಆಕ್ಷೇಪವಿಲ್ಲ. ಆದರೆ ಹನುಮಧ್ವಜ ತೆರೆದಿರುವುದಕ್ಕೆ ನಮ್ಮ ಆಕ್ರೋಶವಿದೆ.
ಕಾಂಗ್ರೆಸ್ ಪಕ್ಷವೊಂದು ಬಿಟ್ಟು ಪ್ರತಿಯೊಬ್ಬರೂ ಹಿಂದು ಧರ್ಮವನ್ನು ಬೆಂಬಲಿಸುತ್ತಾರೆ. ಕೆರೆಗೋಡು ಗ್ರಾಮದಲ್ಲಿ ಮುಸ್ಲಿಂರು ಕೂಡಾ ಹಿಂದುಗಳ ಆಶಯಕ್ಕೆ ಸ್ಪಂದಿಸಿದ್ದಾರೆ ಎಂದರು.


Spread the love

About Laxminews 24x7

Check Also

ರವಿವಾರ ಪೇಟದಲ್ಲಿ ತಂಬಾಕು ಮಾರಾಟ ಅಂಗಡಿಗಳಿಗೆ ಜಾಗೃತಿ ತಂಬಾಕು ಮುಕ್ತ ಯುವ ಅಭಿಯಾನ 3.0.

Spread the loveರವಿವಾರ ಪೇಟದಲ್ಲಿ ತಂಬಾಕು ಮಾರಾಟ ಅಂಗಡಿಗಳಿಗೆ ಜಾಗೃತಿ ತಂಬಾಕು ಮುಕ್ತ ಯುವ ಅಭಿಯಾನ 3.0. ಮಾರ್ಕೆಟ್ ಠಾಣಾ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ