ಹಾವೇರಿ, ಜನವರಿ 27: ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್(Jagadish Shettar)ಅವರು ಬಿಜೆಪಿಗೆ ಘರ್ವಾಪ್ಸಿ ಆಗಿದ್ದಾರೆ. ಕಾಂಗ್ರೆಸ್ ಶಾಸಕ ಲಕ್ಷ್ಮಣ ಸವದಿ ಬಿಜೆಪಿ ಸೇರ್ಪಡೆ ಬಗ್ಗೆ ರಾಜ್ಯ ರಾಜಕೀಯದಲ್ಲಿ ಮಾತು ಕೇಳಿಬರುತ್ತಿದೆ.
ಸದ್ಯ ಈ ವಿಚಾರವಾಗಿ ನಗರಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ PWD ಸಚಿವ ಸತೀಶ್ ಜಾರಕಿಹೊಳಿ, ಯಾರು ಹೋಗುತ್ತಾರೋ ಬಿಡುತ್ತಾರೋ ನಮ್ಮ ಕೈಯಲ್ಲಿ ಇಲ್ಲ. ಹೋಗುವ ಮನಸಿದ್ದರೆ ತಡೆಯಲು ಆಗಲ್ಲ. ಮಾಜಿ ಸಿಎಂ ಜಗದೀಶ್ ಶೆಟ್ಟರ್ ಈಗ BJPಗೆ ಹೋಗಿದ್ದಾರೆ. ಮುಂದೆ ಯಾರು ಹೋಗುತ್ತಾರೋ ಗೊತ್ತಿಲ್ಲ ಎಂದು ಹೇಳಿದ್ದಾರೆ.
ಎಲ್ಲರು ಇರುತ್ತಾರೆ ಅನ್ನೋ ಆಶಾಭಾವನೆ ಅಷ್ಟೇ ನಮ್ಮದು. ನಮ್ಮದೇ ಪಕ್ಷವಿದೆ, ನಮ್ಮದೇ ಆದ ವೋಟ್ ಬ್ಯಾಂಕ್ ಇದೆ.
ನಮ್ಮ ಸ್ವಂತ ಶಕ್ತಿಯಿಂದ ರಾಜ್ಯದಲ್ಲಿ ಗೆದ್ದಿದ್ದೇವೆ. ಅವರಿಂದ ಅಧಿಕಾರಕ್ಕೆ ಬಂತು, ಇವರಿಂದ ಬಂತು ಅಂತ ಹೇಳಲಿಕ್ಕೆ ಆಗಲ್ಲ, ಪಕ್ಷದಿಂದ ಗೆದ್ದಿದ್ದೇವೆ ಅಷ್ಟೇ ಎಂದರು.