ಗದಗ: ಅಯೋಧ್ಯ ರಾಮನ (aYODHYA rAM) ಪ್ರತಿಷ್ಠಾಪನೆ ಮಾಡಿದ ಪ್ರಧಾನಿ ನರೇಂದ್ರ ಮೋದಿ (PM Narendra Modi) ಕಾಂಗ್ರೆಸ್ ವಾಗ್ದಾಳಿ ಶುರುಮಾಡಿಕೊಂಡಿದ್ದಾರೆ. ಇದೀಗ ಕಾಂಗ್ರೆಸ್ (congress) ಶಾಸಕ ಜಿ.ಎಸ್.ಪಾಟೀಲ್ (GS Patil), ಪ್ರಧಾನಿ ನರೇಂದ್ರ ಮೋದಿ ಹಿಂದೂ ಸಂಪ್ರದಾಯ ಮುರಿದಿದ್ದಾರೆ ಎಂದು ಟೀಕೆ ಮಾಡಿದ್ದಾರೆ.
ಈ ಬಗ್ಗೆ ಗದಗದಲ್ಲಿ (Gadag) ಮಾತನಾಡಿದ ಅವರು, ದೇವರ ಪ್ರತಿಷ್ಠಾಪನೆ ಮಾಡುವಾಗ ಹಿಂದೂ ಸಂಪ್ರದಾಯದಂತೆ ದಂಪತಿ ಸಮೇತ ಪೂಜೆ ಸಲ್ಲಿಸಬೇಕು. ಆದರೆ, ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ವೇಳೆ ಪ್ರಧಾನಿ ಮೋದಿ ಶಿಷ್ಟಾಚಾರ ಮರೆತಿದ್ದಾರೆ. ಪ್ರಧಾನಿ ಮೋದಿ ಸಾರ್ವಭೌಮ, ಒನ್ ಮ್ಯಾನ್ ಆರ್ಮಿ. ಸಂಪುಟದ ಸಹೋದ್ಯೋಗಿಗಳು, ಪಕ್ಷದ ನಾಯಕರು ಬೇಕಾಗಿಲ್ಲ, ಎಲ್ಲಾ ಅವರೇ ಮಾಡಿ ಹಿಂದೂ ಸಂಪ್ರದಾಯ ಮುರಿದಿದ್ದಾರೆ.
ಅವರಿಗೆ ಕುಟುಂಬ ಇಲ್ಲದಿದ್ದರೆ ದಂಪತಿಯನ್ನು ಕೂರಿಸಿ ಪೂಜೆ ಮಾಡಿಸಬೇಕಿತ್ತು. ಸಂಪ್ರದಾಯ ಮುರಿದಾಗ ಕೆಟ್ಟ ಘಟನೆ ಎದುರಿಸಬೇಕಾಗುತ್ತದೆ ಎಂದು ಹೇಳಿದ್ದಾರೆ. ಲೋಕಸಭೆ ಚುನಾವಣೆ ಬಂದಾಗ ಪ್ರಧಾನಿಗಳು ಭಾವನಾತ್ಮಕ ವಿಷಯ ತರುತ್ತಾರೆ. ಭಾವನಾತ್ಮಕ ವಿಷಯದ ಮೂಲಕ ಮತದಾರರನ್ನು ತಮ್ಮ ಕಡೆ ಕೊಂಡೊಯ್ಯುತ್ತಾರೆ. ಇಂತಹ ಅನೇಕ ವಿಚಾರ ದೇಶದಾದ್ಯಂತ ಕಾಣುತ್ತಿದ್ದೇವೆ ಎಂದು ವಾಗ್ದಾಳಿ ನಡೆಸಿದ್ದಾರೆ.