ಗದಗ, : ಅಯೋಧ್ಯೆಯಲ್ಲಿ ಭಗವಾನ ಶ್ರೀರಾಮಚಂದ್ರನ ಭವ್ಯ ಮಂದಿರ(Ayodhya Ram Manidr)ನಿರ್ಮಾಣ ಉದ್ಘಾಟನೆಗೆ ಕ್ಷಣಗಣನೆ ಆರಂಭವಾಗಿದೆ. ಈ ಸುವರ್ಣ ಕ್ಷಣ ಸಂಭ್ರಮಕ್ಕೆ ದೇಶದ ಕೋಟ್ಯಂತರ ಹಿಂದೂಗಳು ಸಜ್ಜಾಗಿದ್ದಾರೆ. ಶ್ರೀರಾಮ ಮಂದಿರ ಉದ್ಘಾಟನೆ ದಿನ ಗದಗ (Gadag) ನಗರದಲ್ಲಿ ಶ್ರೀರಾಮಸೇನೆ ಶ್ರೀರಾಮ ಮೂರ್ತಿಯ ಬೃಹತ್ ಶೋಭಾಯಾತ್ರೆ ಹಮ್ಮಿಕೊಳ್ಳಲಾಗಿದೆ. ಆದರೆ, ಶೋಭಾಯಾತ್ರೆಗೆ ಪೊಲೀಸ್ ಇಲಾಖೆ ಅಡ್ಡಿಪಡಿಸುತ್ತಿದ್ದು, ಯಾವುದೇ ಕಾರಣಕ್ಕೂ ಶೋಭಾಯಾತ್ರೆ ಮಾಡುವಂತಿಲ್ಲ ಎಂದಿದೆ. ಪೊಲೀಸರ ವಿರುದ್ಧ ಆಕ್ರೋಶಗೊಂಡಿರುವ ಶ್ರೀರಾಮಸೇನೆ, ಯಾರೇ ಬಂದರೂ ಶೋಭಾಯಾತ್ರೆ ನಿಲ್ಲಲ್ಲ. ನಡೆಸಿಯೇ ತೀರುತ್ತೇವೆ ಅಂತ ಶ್ರೀರಾಮಸೇನೆ ಹೇಳಿದೆ.
ಅಯೋಧ್ಯೆ ಶ್ರೀರಾಮ ಮಂದಿರ ಉದ್ಘಾಟನೆ ಸುವರ್ಣಗಳಿಗೆ ಇಡೀ ದೇಶದ ಜನರು ಕಾತುರದಿಂದ ಕಾಯುತ್ತಿದ್ದಾರೆ. ದೇಶದಲ್ಲಿ ಎಲ್ಲೆಲ್ಲೂ ಸಂಭ್ರಮ ಮನೆ ಮಾಡಿದೆ. ಈ ಸಂಭ್ರಮದ ಕ್ಷಣ ಆಚರಣೆಗೆ ಕೊಟ್ಯಾಂತರ ರಾಮಭಕ್ತರು ತುದಿಗಾಲಲ್ಲಿ ನಿಂತಿದ್ದಾರೆ. ಈ ನಿಟ್ಟಿನಲ್ಲಿ ಗದಗ ನಗರದಲ್ಲಿ ಜನವರಿ 22 ರಂದು ಗದಗ ನಗರದಲ್ಲಿ ಬೃಹತ್ ಶ್ರೀರಾಮ ಶೋಭಾಯತ್ರೆ ಹಮ್ಮಿಕೊಂಡಿದೆ. ಇದಕ್ಕೆ ಇಡೀ ಜಿಲ್ಲೆಯಲ್ಲಿ ಸಾಕಷ್ಟು ಜನಜಾಗೃತಿ ಕೂಡ ಮೂಡಿಸಿದೆ.
ಗಲ್ಲಿ ಗಲ್ಲಿಗಳಲ್ಲಿ ಮನೆಗಳಿಗೆ ತೆರಳಿ ಶ್ರೀರಾಮ ಶೋಭಾಯಾತ್ರೆಯಲ್ಲಿ ಪಾಲ್ಗೊಳ್ಳುವಂತೆ ಕರಪತ್ರ ನೀಡಿ ಮನವಿ ಮಾಡಿದ್ದಾರೆ. ಸಕಲಿ ಸಿದ್ಧತೆ ಕೂಡ ಶ್ರೀರಾಮ ಸೇನೆ ಮಾಡಿಕೊಂಡಿದೆ. ಆದರೆ, ಈಗ ಗದಗ ಪೊಲೀಸ್ ಇಲಾಖೆ ಶ್ರೀರಾಮ ಶೋಭಾಯಾತ್ರೆ ಮಾಡದಂತೆ ಸೂಚಿಸಿದೆಯಂತೆ. ಹೀಗಾಗಿ ಶ್ರೀರಾಮಸೇನೆ ಮುಖಂಡರು ರಾಜ್ಯ ಸರ್ಕಾರ, ಪೊಲೀಸ್ ಇಲಾಖೆ ವಿರುದ್ಧ ಕೆಂಡಕಾರಿದ್ದಾರೆ.