Breaking News

ಹಳ್ಳಿ ಹುಡಗನ ಕೈಚಳಕ: ಜೋಳ, ಅಕ್ಕಿಯಿಂದ ಭವ್ಯ ಶ್ರೀರಾಮಮಂದಿರ ನಿರ್ಮಾಣ

Spread the love

ಗದಗ, ಜನವರಿ 21: ಅಯೋಧ್ಯೆಯಲ್ಲಿ (Ayodhya) ನಾಳೆ (ಜ.22) ರಾಮಲಲ್ಲಾ ಮೂರ್ತಿ ಪ್ರಾಣ ಪ್ರತಿಷ್ಠಾಪನೆಯಾಗಲಿದೆ. ಪ್ರಾಣ ಪ್ರತಿಷ್ಠೆಯನ್ನು ಕಣ್ತುಂಬಿಕೊಳ್ಳಲು ಅಸಂಖ್ಯ ಜನರು ಕಾಯುತ್ತಿದ್ದಾರೆ. ಭಕ್ತರು ವಿವಿಧ ರೂಪದಲ್ಲಿ ಪ್ರಭು ಶ್ರೀರಾಮಚಂದ್ರನಿಗೆ (Sri Ram) ತಮ್ಮ ಭಕ್ತಿಯನ್ನು ಸಮರ್ಪಿಸುತ್ತಿದ್ದಾರೆ.

ಇದೀಗ ಗದಗ ಜಿಲ್ಲೆಯ ಚಿಕ್ಕಹಂದಿಗೋಳ ಗ್ರಾಮದ ಯುವ ಕಲಾವಿದ ನಾಗರಾಜ ಕಮ್ಮಾರ ಅವರು 15 ಕೆಜಿ ಜೋಳ, 2 ಕೆಜಿ ಅಕ್ಕಿಯಲ್ಲಿ 12 ಅಡಿ ಎತ್ತರ, 10 ಅಡಿ ಅಗಲ ವಿಸ್ತೀರ್ಣದಲ್ಲಿ ಶ್ರೀರಾಮಮಂದಿರ ನಿರ್ಮಿಸಿದ್ದಾರೆ.

ಮತ್ತೊಂದು ಕಡೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ನಗರದ‌ ಭಗತ್ ಸಿಂಗ್ ಕ್ರೀಡಾಂಗಣದಲ್ಲಿ ಅಯೋಧ್ಯೆ ರಾಮಮಂದಿರ ಸೆಟ್ ಹಾಕಲಾಗಿದೆ. ರಾಮಮಂದಿರ ಸೆಟ್ ಮುಂದೆ ನಿಂತು ಸಾರ್ವಜನಿಕರು ಸೆಲ್ಫಿ ತೆಗೆದುಕೊಳ್ಳುತ್ತಿದ್ದಾರೆ.


Spread the love

About Laxminews 24x7

Check Also

ಹುಲಿ ಸಾವಿನಲ್ಲಿ ಅಧಿಕಾರಿಗಳ ನಿರ್ಲಕ್ಷ್ಯವಿದ್ದಲ್ಲಿ ಶಿಸ್ತುಕ್ರಮ :ಈಶ್ವರ ಖಂಡ್ರೆ

Spread the loveಚಾಮರಾಜನಗರ: ಹೂಗ್ಯಂ ವಲಯದಲ್ಲಿ 5 ಹುಲಿಗಳ ಅಸಹಜ ಸಾವು ಪ್ರಕರಣದಲ್ಲಿ ಯಾವುದೇ ಅಧಿಕಾರಿಯ ನಿರ್ಲಕ್ಷ್ಯ ಕಂಡುಬಂದಲ್ಲಿ, ಶಿಸ್ತುಕ್ರಮ ಜರುಗಿಸಲಾಗುವುದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ