Breaking News

ಸಂಗ್ರಾಮ ಕಲ್ಲು ಎತ್ತುವ ಸ್ಪರ್ಧೆ ಅಬ್ಜಲಖಾನ ಪ್ರಥಮ

Spread the love

ಕಾಗವಾಡ: ತಾಲ್ಲೂಕಿನ ಐನಾಪುರ ಪಟ್ಟಣದ ಶ್ರೀ ಸಿದ್ಧೇಶ್ವರ ದೇವರ ಜಾತ್ರಾ ಮಹೋತ್ಸವದ ಅಂಗವಾಗಿ ನಡೆಯುತ್ತಿರುವ ಕೃಷಿ ಮೇಳದಲ್ಲಿ ಗುರುವಾರ ದೇಸಿ ಸಂಗ್ರಾಮ ಕಲ್ಲುಗಳು ಹಾಗೂ ಗುಂಡು ಎತ್ತುವ ಸ್ಪರ್ಧೆಗಳು ನೋಡುಗರ ಹುಬ್ಬೇರಿಸುವಂತೆ ಮಾಡಿದವು.

ಜಮಖಂಡಿ, ಅಥಣಿ, ಗೋಕಾಕ ಹಾಗೂ ಮಹಾರಾಷ್ಟ್ರದ ವಿವಿಧ ಭಾಗಗಳಿಂದ ಬಂದ ಬಲಭೀಮರು ಶಕ್ತಿ ಪ್ರದರ್ಶನ ನೀಡಿ ಶಹಬ್ಬಾಸ್ ಎನಿಸಿಕೊಂಡರು.

 

ಸಂಗ್ರಾಮ ಕಲ್ಲು ಎತ್ತುವ ಸ್ಪರ್ಧೆಯಲ್ಲಿ ಮಹಾರಾಷ್ಟ್ರದ ಆಸಂಗಿಯ 26ರ ವಯಸ್ಸಿನ ಅಬ್ಜಲಖಾನ ಮುಜಾವರ (97 ಕೆ.ಜಿ) ಪ್ರಥಮ, ನರಗುಂದ ತಾಲ್ಲೂಕಿನ ಬನಹಟ್ಟಿ ಗ್ರಾಮದ ಮುತ್ತಪ್ಪ ಗಡ್ಡಿ (97 ಕೆ.ಜಿ) ದ್ವೀತಿಯ, ಬಾಗಲಕೋಟೆ ಜಿಲ್ಲೆಯ ಬೀಳಗಿಯ ಸಂಗಪ್ಪ ಬೀಳಗಿ (84 ಕೆ.ಜಿ) ತೃತೀಯ ಸ್ಥಾನ ಪಡೆದರು.

ಗುಂಡು ಎತ್ತುವ ಸ್ಪರ್ಧೆಯಲ್ಲಿ ಭೀರಪ್ಪಾ ಪೂಜಾರಿ 180 ಕೆ.ಜಿ. ಗುಂಡನ್ನು ಎತ್ತುವ ಮೂಲಕ ಪ್ರಥಮ ಸ್ಥಾನ ಪಡೆದರೆ, ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲ್ಲೂಕಿನ ಯಡ್ರಾವಿ ಗ್ರಾಮದ ಕರೇಪ್ಪ ಪೂಜಾರಿ 175 ಕೆ.ಜಿ. ಗುಂಡು ಎತ್ತುವುದರ ಮೂಲಕ ದ್ವೀತಿಯ ಸ್ಥಾನ ಪಡೆದರು. ಮಹಾರಾಷ್ಟ್ರದ ಶೇಡಶಾಳ ಗ್ರಾಮದ ಭೀರಪ್ಪ ಪೂಜಾರಿ 105 ಕೆ.ಜಿ. ಗುಂಡನ್ನು ಎತ್ತಿ ಮೂರನೇ ಸ್ಥಾನ ಪಡೆದರು. ವಿಜೇತ ಪೈಲವಾನರಿಗೆ ಮಾಜಿ ಸಚಿವ ಶ್ರೀಮಂತ ಪಾಟೀಲ ಬಹುಮಾನಗಳನ್ನು ವಿತರಣೆ ಮಾಡಿದರು.

ದಾದಗೌಡ ಪಾಟೀಲ, ಜಾತ್ರಾ ಕಮಿಟಿ ಅಧ್ಯಕ್ಷ ಸುಭಾಷ ಪಾಟೀಲ, ಉಪಾಧ್ಯಕ್ಷ ರಾಜಗೌಡಾ ತಮಣ್ಣಾ ಪಾರಶೇಟಿ, ರತನಗೌಡ ಪಾಟೀಲ, ಸುಭಾಷ ಪಾಟೀಲ, ರಾಜೇಂದ್ರ ಪೋತದಾರ, ಸುರೇಶ ಅಡಿಶೇರಿ, ಅಮಗೊಂಡ ವಡೆಯರ, ಗುರುರಾಜ ಮಡಿವಾಳ, ಸಂಜು ಕುಸನಾಳೆ ಇದ್ದರು.


Spread the love

About Laxminews 24x7

Check Also

ಬಿಜೆಪಿ ಮುಖಂಡನ ಪುತ್ರನ ವಿರುದ್ಧ ಅತ್ಯಾಚಾರ ಕೇಸ್: ಮಗುವಿನ ಜನ್ಮ ನೀಡಿದ ಸಂತ್ರಸ್ತೆ

Spread the loveಮಂಗಳೂರು, ): ಪುತ್ತೂರು ಬಿಜೆಪಿ ಮುಖಂಡನ ಪುತ್ರನ (Puttur BJP leader Son )ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ