ಧಾರವಾಡ : ಹುಬ್ಬಳ್ಳಿಯ ಗೋಕುಲ್ ರಸ್ತೆಯ ವ್ಯಾಪಾರಿ ಮಹಾಂತೇಶ ಬಾಟ್ಲಿ ಎಂಬುವವರು ಪ್ರತಿಕ್ಷಾ ಇಂಜಿನಿಯರಿಂಗ್ ವಕ್ರ್ಸನ ಮಾಲೀಕರಾಗಿದ್ದಾರೆ. ಅವರು ತಮ್ಮ ಉದ್ಯೋಗಕ್ಕಾಗಿ ಎದುರುದಾರ ಸಿಎನ್‍ಸಿ ಮಶೀನಿನ ಉತ್ಪಾದಕರಾದ ಮಹಾರಾಷ್ಟ್ರ ಸತಾರದ ಅಭಿಜಿತ್ ಇಕ್ವಿಪ್‍ಮೆಂಟ್ಸ್ ಕಂಪನಿಯವರಿಂದ 27/05/2022 ರಂದು ಹೊಸ ಸಿಎನ್‍ಸಿ ಟ್ಯೂನಿಂಗ್ ಮಶೀನ ಖರೀದಿಸಿದ್ದರು.
ಅದರ ಬೆಲೆ ರೂ.11 ಲಕ್ಷ ಇತ್ತು. ಆ ಹಣ ಪಡೆದ ಎದುರುದಾರ ದೂರುದಾರರಿಗೆ ಸಿಎನ್‍ಸಿ ಟ್ಯೂನಿಂಗ್ ಮಶೀನ ಪೂರೈಸಿದ್ದರು.
ಸದರಿ ಮಶೀನ ಇನ್‍ಸ್ಟಾಲ್ ಮಾಡಿದ ನಂತರ ಅದು ಎದುರುದಾರರು ನೀಡಿದ ಭರವಸೆಯಂತೆ ಸರಿಯಾಗಿ ಕಾರ್ಯ ನಿರ್ವಹಿಸಲಿಲ್ಲ. ಈ ಸಂಗತಿಯನ್ನು ಎದುರುದಾರನಿಗೆ ತಿಳಿಸಿದರೂ ಅವರು ಕ್ಯಾರೆಅನ್ನಲಿಲ್ಲ.
ನಂತರ ದೂರುದಾರ ಧಾರವಾಡದ ಯುನೈಟೆದ ಮಶೀನ್ ಟೂನ್ಸ್ ಹಾಗೂ ಹುಬ್ಬಳ್ಳಿಯ ಸಿ.ಎನ್. ಸಿ. ಸರ್ವಿಸ್ ರವರಿಂದ ಆ ಮಶೀನನ್ನ ಪರೀಕ್ಷೆ ಮಾಡಿಸಿದಾಗ ಅದು ದೋಷಪೂರಿತ ಮಶೀನ್ ಅನ್ನುವುದು ಕಂಡುಬಂತು. ದೋಶಪೂರಿತ ಮಶೀನ್ ವಾಪಸ್ಸು ಪಡೆದು ಬೇರೆ ಮಶೀನ್ ಕೊಡುವಂತೆ ಅಥವಾ ರೂ. 11 ಲಕ್ಷ ಹಣ ಹಿಂದಿರುಗಿಸುವಂತೆ ದೂರುದಾರ ಹಲವಾರು ಬಾರಿ ವಿನಂತಿಸಿದರೂ ಎದುರುದಾರ ಅದಕ್ಕೆ ಯಾವುದೇ ಗಮನ ಕೊಡಲಿಲ್ಲ. ಅಂತಹ ಎದುರುದಾರ ನಡಾವಳಿಕೆ ಗ್ರಾಹಕರ ರಕ್ಷಣಾ ಕಾಯಿದೆ ಅಡಿ ಸೇವಾ ನ್ಯೂನ್ಯತೆ ಆಗುತ್ತದೆ ಅಂತಾ ಹೇಳಿ ಎದುರುದಾರರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕೆಂದು ಕೋರಿ ದೂರುದಾರ ಧಾರವಾಡ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದಿ.02/11/2023 ರಂದು ಈ ದೂರು ಸಲ್ಲಿಸಿದ್ದರು.