ಕಾರವಾರ, ಜನವರಿ 17: ಗೋವಾದ ಕಾಣಕೋಣ ಸಮೀಪದಲ್ಲಿ ಮೀನುಗಾರಿಕಾ ಬೋಟ್ ಅವಘಡ ಸಂಭವಿಸಿದ್ದು, ಮುಳಗುವ ಹಂತದಲ್ಲಿದ್ದ ಯಾಂತ್ರಿಕ ದೋಣಿ(boat)ಯನ್ನು ಮೀನುಗಾರರು ರಕ್ಷಣೆ ಮಾಡಿದ್ದಾರೆ. 25 ನಾಟಿಕಲ್ ಮೈಲು ದೂರದ ಅರಬ್ಬಿ ಸಮುದ್ರದಲ್ಲಿ ಘಟನೆ ನಡೆದಿದೆ. ಮಂಗಳೂರು ಮೂಲದ ರಾಯಲ್ ಬ್ಲೂ ಹೆಸರಿನ ಬೋಟ್ ಮುಳುಗುವ ಹಂತದಲ್ಲಿದ್ದು, ಬೋಟ್ನಲ್ಲಿದ್ದ ಎಲ್ಲ 7 ಮೀನುಗಾರರು ಸುರಕ್ಷಿತರಾಗಿದ್ದಾರೆ. ಕೋಸ್ಟ್ ಗಾರ್ಡ್, ಕರಾವಳಿ ಕಾವಲು ಪಡೆ ಸಹಾಯ ಮೂಲಕ 6 ಬೋಟ್‌ಗಳ ಸಹಾಯದಿಂದ ಸುರಕ್ಷಿತವಾಗಿ ಮೀನುಗಾರರು ಕಾರವಾರ ಬಂದರಿಗೆ ತಲುಪಿದ್ದಾರೆ.
ಕಚೇರಿ ಹಿಂಭಾಗದಲ್ಲಿ ಕಂಡು ಬಂದ ಬೆಂಕಿ
ಕೋಲಾರ: ಜಿಲ್ಲಾಧಿಕಾರಿ ಕಚೇರಿ ಹಿಂಭಾಗದಲ್ಲಿ ಕಸದ ರಾಶಿ ಹಾಗೂ ಹುಲ್ಲಿಗೆ ಬೆಂಕಿ ಹೊತ್ತಿಕೊಂಡಿದೆ. ಧಗ ಧಗನೆ ಹೊತ್ತಿ ಉರಿದಿದೆ. ಬಿಸಿಲ ಬೇಗೆ ಮಧ್ಯೆ ಬೆಂಕಿ ಹೊತ್ತಿ ಉರಿದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗಿದೆ. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿದ್ದಾರೆ.
ಆಕಸ್ಮಿಕ ಬೆಂಕಿ: ಆರು ಹುಲ್ಲಿನ ಬಣಿವೆ ಮತ್ತು ಒಂದು ಗುಡಿಸಲು ಸುಟ್ಟು ಭಸ್ಮ