ಶಿವಮೊಗ್ಗ : ಬಿ ಕೆ ಹರಿಪ್ರಸಾದ್‌ಗೆ(B K hariprasad) ಮಂಪರು ಪರೀಕ್ಷೆ ಮಾಡಸಬೇಕು ಎಂದರೆ ಬಿ ವೈ ವಿಜಯೇಂದ್ರಗೂ(B Y Vijayendra) ಕೋವಿಡ್, ಪಿಎಸ್‌ಐ ಹಗರಣದ ವಿಚಾರದಲ್ಲಿ ಮಂಪರು ಪರೀಕ್ಷೆ ಮಾಡಿಸಬೇಕು ಎಂದು ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ ಹೇಳಿದ್ದಾರೆ.
ನಗರದಲ್ಲಿ ಇಂದು (ಜ.11) ಸುದ್ದಿಗಾರರೊಂದಿಗೆ ಮಾತನಾಡಿದ ಅವರು ವಿಜಯೇಂದ್ರ ತಂದೆಯ ಹೆಸರಲ್ಲಿ ರಾಜ್ಯಾಧ್ಯಕ್ಷ ಪಟ್ಟಕ್ಕೆ ಏರಿದವರು, ಲೋಕಸಭೆಯ ಎಲ್ಲಾ ಸೀಟನ್ನು ಗೆಲ್ಲುತ್ತೇವೆ ಎಂದಿದ್ದಾರೆ. ಒಮ್ಮೆ ಗೆಲ್ಲದಿದ್ರೆ ವಿಜಯೇಂದ್ರ ರಾಜೀನಾಮೆ ಕೊಡುತ್ತಾರಾ? ಎಂದು ಪ್ರಶ್ನಿಸಿದ್ದಾರೆ. ಬಿ ಕೆ ಹರಿಪ್ರಸಾದ್‌ಗೆ ಮಂಪರು ಪರೀಕ್ಷೆ ಮಾಡಿಸಬೇಕು ಎನ್ನುತ್ತಾರೆ, ಕೋವಿಡ್, ಪಿಎಸ್‌ಐ ಹಗರಣದಲ್ಲಿ ಬಿ ವೈ ವಿಜಯೇಂದ್ರ ಅವರನ್ನು ಮಂಪರು ಪರೀಕ್ಷೆಗೆ ಒಳಪಡಿಸಬೇಕು ಎಂದರು. ಬಿಜೆಪಿ ಅವರ ಅಧಿಕಾರಾವಧಿಯಲ್ಲಿ ಪ್ರವಾಹ ಪರಿಹಾರ ಹಣ ಬಂದಿಲ್ಲ , ಈಗ ಕೇಂದ್ರದಿಂದ ಬರ ಪರಿಹಾರಣ ಹಣವನ್ನಾದರೂ ತನ್ನಿ ಎಂದು ಟೀಕಿಸಿದ್ದಾರೆ.
ಯುವನಿಧಿಗೆ ಸಿಎಂ ನಾಳೆ ಚಾಲನೆ : ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆದಿದೆ, ನಾಳೆ ಯುವ ನಿಧಿ ಯೋಜನೆಗೆ ಸಿಎಂ ಚಾಲನೆ ನೀಡಲಿದ್ದು 2.50 ಲಕ್ಷ ಜನ ಸೇರುವ ನಿರೀಕ್ಷೆ ಇದೆ. ನಮ್ಮದು ಜನ ಪರ ಸರ್ಕಾರ, ಕಾಂಗ್ರೆಸ್‌ನ ಗ್ಯಾರೆಂಟಿ ಯೋಜನೆಗಳನ್ನು ಬಿಜೆಪಿ ಟೀಕಿಸಿತ್ತು ಆದರೆ ಈಗ ಮೋದಿ ಅವರೇ ಗ್ಯಾರೆಂಟಿ ಎನ್ನುತ್ತಿದ್ದಾರೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದ್ದಾರೆ.