Breaking News

806 ಕೋಟಿ ರೂಪಾಯಿ ಬಾಕಿ ಪಾವತಿಸಿ: ಮಹಾರಾಷ್ಟ್ರ ಎಲ್‌ ಐಸಿಗೆ ಜಿಎಸ್‌ ಟಿ ನೋಟಿಸ್

Spread the love

ಮುಂಬೈ: ಸಾರ್ವಜನಿಕ ವಲಯದ ಪ್ರಮುಖ ಇನ್ಸೂರೆನ್ಸ್‌ (ಎಲ್‌ ಐಸಿ) ಕಂಪನಿಗೆ ಸರಕು ಮತ್ತು ಸೇವಾ ತೆರಿಗೆ (GST) ಅಧಿಕಾರಿಗಳು 806 ಕೋಟಿ ರೂಪಾಯಿ ತೆರಿಗೆ ಪಾವತಿಸುವಂತೆ ನೋಟಿಸ್‌ ಜಾರಿಗೊಳಿಸಿರುವುದಾಗಿ ವರದಿ ತಿಳಿಸಿದೆ. ಮಹಾರಾಷ್ಟ್ರದ ಜಿಎಸ್‌ ಟಿ ಅಧಿಕಾರಿಗಳು ಈ ನೋಟಿಸ್‌ ಜಾರಿಗೊಳಿಸಿದ್ದಾರೆ.

 

2017-18ನೇ ಸಾಲಿನ ಜಿಎಸ್‌ ಟಿ ಪಾವತಿಯಲ್ಲಿನ ತೆರಿಗೆ ಪಾವತಿಗೆ ಸಂಬಂಧಿಸಿದ ನೋಟಿಸ್‌ ಅನ್ನು 2024ರ ಜನವರಿ 1ರಂದು ಜಾರಿಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

2017-18ನೇ ಸಾಲಿನ ಬಾಕಿ ಜಿಎಸ್‌ ಟಿ 365 ಕೋಟಿ ರೂಪಾಯಿ, ದಂಡ 404 ಕೋಟಿ ರೂಪಾಯಿ ಹಾಗೂ ಹೆಚ್ಚುವರಿ ಬಡ್ಡಿ 36 ಕೋಟಿ ರೂಪಾಯಿ ಸೇರಿ ಒಟ್ಟು 806 ಕೋಟಿ ರೂಪಾಯಿ ಪಾವತಿಸುವಂತೆ ನೋಟಿಸ್‌ ನೀಡಲಾಗಿದೆ.

ಜಮ್ಮು-ಕಾಶ್ಮೀರ ಎಲ್‌ ಐಸಿಗೆ ದಂಡ, ತೆಲಂಗಾಣಕ್ಕೆ ನೋಟಿಸ್:‌

2023ರ ಅಕ್ಟೋಬರ್‌ ನಲ್ಲಿ ಕಡಿಮೆ ತೆರಿಗೆ ಪಾವತಿಸಿದ್ದಕ್ಕಾಗಿ ಜಮ್ಮು-ಕಾಶ್ಮೀರದ ಜಿಎಸ್‌ ಟಿ ಅಧಿಕಾರಿಗಳು, ಎಲ್‌ ಐಸಿಗೆ 36,844 ರೂಪಾಯಿ ದಂಡ ವಿಧಿಸಿತ್ತು. ಜಮ್ಮು-ಕಾಶ್ಮೀರ ಎಲ್‌ ಐಸಿ ಶೇ.18ರಷ್ಟು ಜಿಎಸ್‌ ಟಿ ಬದಲು ಶೇ.12ರಷ್ಟು ಪಾವತಿಸಿತ್ತು ಎಂದು ಜಿಎಸ್‌ ಟಿ ಅಧಿಕಾರಿಗಳು ದೂರಿದ್ದರು.

2023ರ ಡಿಸೆಂಬರ್‌ ನಲ್ಲಿ ಬಾಕಿ ಉಳಿದ ಜಿಎಸ್‌ ಟಿ, ದಂಡ ಹಾಗೂ ಬಡ್ಡಿ ಸೇರಿದಂತೆ 183 ಕೋಟಿ ರೂಪಾಯಿ ಪಾವತಿಸುವಂತೆ ತೆಲಂಗಾಣ ಜಿಎಸ್‌ ಟಿ ಅಧಿಕಾರಿಗಳು ನೋಟಿಸ್‌ ಜಾರಿಗೊಳಿಸಿದ್ದರು.‌


Spread the love

About Laxminews 24x7

Check Also

ಸರ್ಕಾರಿ ಶಾಲೆಗಳನ್ನು ಉಳಿಸಿ-ಬೆಳೆಸಿ : ಜಿಲ್ಲಾಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ

Spread the love ಸರ್ಕಾರಿ ಶಾಲೆಗಳನ್ನು ಉಳಿಸಿ-ಬೆಳೆಸಿ : ಜಿಲ್ಲಾಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಕೊಳವಿ ಗ್ರಾಮದ ನಮ್ಮೂರ ಸರಕಾರಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ