Breaking News

ತೇರದಾಳದ ಘಟನೆ ಬಿಜೆಪಿಯ ಸಂಸ್ಕೃತಿಯನ್ನ ತೋರಿಸುತ್ತೆ. ಪೊಲೀಸರ ಸಮ್ಮುಖದಲ್ಲಿ ಹೆಣ್ಣುಮಗಳನ್ನು ಎಳೆದಾಡಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಆಕ್ರೋಶ

Spread the love

ಬೆಂಗಳೂರು: ತೇರದಾಳದ ಘಟನೆ ಬಿಜೆಪಿಯ ಸಂಸ್ಕೃತಿಯನ್ನ ತೋರಿಸುತ್ತೆ. ಪೊಲೀಸರ ಸಮ್ಮುಖದಲ್ಲಿ ಹೆಣ್ಣುಮಗಳನ್ನು ಎಳೆದಾಡಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಂದು ಹೆಣ್ಣು ಮಗಳನ್ನ ಎಳೆದಾಡಿದ್ದಾರೆ. ಈ ಘಟನೆ ಸರಿಯೋ ತಪ್ಪೋ ಅನ್ನೋದನ್ನ ಮುಖ್ಯಮಂತ್ರಿಗಳಿಗೆ ಬಿಟ್ಟು ಬಿಡುತ್ತೇನೆ. ಈ ಪ್ರಕರಣವನ್ನ ಗಂಭೀರವಾಗಿ ನೋಡುತ್ತಿದ್ದೇವೆ ಎಂದು ಹೇಳಿದ್ದಾರೆ.

ಬೇರೆ ಪ್ರಕರಣದಲ್ಲಿ ಪೊಲೀಸರು ಕೇಸ್ ಹಾಕ್ತಾರೆ. ಆದರೆ ಈ ಪ್ರಕರಣದಲ್ಲಿ ಇದುವರೆಗೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಇತ್ತೀಚಿನ ದಿನಗಳಲ್ಲಿ ಯಾರಿಗೆ ಏನು ಬೇಕಾದರೂ ಮಾಡಬಹುದು ಎಂಬುದು ಬಿಜೆಪಿಗೆ ಅಭ್ಯಾಸ ಮತ್ತು ಹವ್ಯಾಸವಾಗಿದೆ. ಲೀಡರ್, ಶಾಸಕರು ಯಾರ ಕಂಟ್ರೋಲ್‍ನಲ್ಲಿ ಇಲ್ಲ ಕಾರ್ಪೋರೇಟ್ ಕೌನ್ಸಿಲರ್ ಎಲ್ಲಾ ಕಡೆ ನಡೆಯುತ್ತದೆ. ಪೊಲೀಸರ ಸಮ್ಮುಖದಲ್ಲೇ ಈ ಘಟನೆ ನಡೆದಿದೆ. ನಾವು ಅದೇನು ಮಾಡುತ್ತಾರೆ ಅನ್ನೋದನ್ನು ನೋಡುತ್ತೇನೆ. ಈ ಕುರಿತಾಗಿ ನಾನು ಹೆಚ್ಚು ಮಾತನಾಡುವುದಿಲ್ಲ. ಅದೇನು ಕ್ರಮ ಕೈಗೊಳ್ಳುತ್ತಾರೆ ಎಂಬುದನ್ನು ನೋಡಿ ಮಾತನಾಡುತ್ತೇನೆ ಎಂದು ಗರಂ ಆದರು.


Spread the love

About Laxminews 24x7

Check Also

ಕ್ಯಾಂಟರ್-ಬೈಕ್ ಡಿಕ್ಕಿ: ಧಾರವಾಡ ಮೂಲದ ಯುವಕನ ದುರ್ಮರಣ

Spread the love ಕ್ಯಾಂಟರ್-ಬೈಕ್ ಡಿಕ್ಕಿ: ಧಾರವಾಡ ಮೂಲದ ಯುವಕನ ದುರ್ಮರಣ ಜಾಂಬೋಟಿ-ಚೋರ್ಲಾ ರಸ್ತೆಯ ಹಬ್ಬನಹಟ್ಟಿ ಕ್ರಾಸ್ ಬಳಿ ಇರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ