Breaking News

ತಮಿಳು ಸೂಪರ್ ಸ್ಟಾರ್, ಡಿಎಂಡಿಕೆ ನಾಯಕ ವಿಜಯಕಾಂತ್ ಇನ್ನಿಲ್ಲ

Spread the love

ಮಿಳುನಾಡು: ನಟ ಕಮ್ ರಾಜಕಾರಣಿ ವಿಜಯಕಾಂತ್ ಗುರುವಾರ ನಿಧನರಾಗಿದ್ದಾರೆ. ಅವರಿಗೆ ಕರೊನಾ ಪಾಸಿಟಿವ್ ದೃಢವಾಗಿತ್ತು. ಇದಾದ ಬಳಿಕ ಉಸಿರಾಟದ ತೊಂದರೆಯಿಂದಾಗಿ ಚೆನ್ನೈನ ಆಸ್ಪತ್ರೆಯಲ್ಲಿ ವೆಂಟಿಲೇಟರ್ ಹಾಕಲಾಗಿತ್ತು. ಆಸ್ಪತ್ರೆ ಮೂಲಗಳನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ಪಿಟಿಐ ಈ ಮಾಹಿತಿ ನೀಡಿದೆ.

 

ಡಿಎಂಡಿಕೆ ಪಕ್ಷದ ಸಂಸ್ಥಾಪಕ ವಿಜಯಕಾಂತ್ ಅವರನ್ನು ಚೆನ್ನೈನ ಎಂಐಒಟಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಹೇಳಲಾಗುತ್ತಿದೆ. ಇಲ್ಲಿಯೇ ಅವರು ಕೊನೆಯುಸಿರೆಳೆದರು. ಅವರ ನಿಧನ ಸುದ್ದಿ ತಿಳಿದ ನಂತರ ಆಸ್ಪತ್ರೆಯ ಹೊರಗೆ ಭದ್ರತೆಯನ್ನು ಹೆಚ್ಚಿಸಲಾಗಿದೆ.

2005ರಲ್ಲಿ ಡಿಎಂಡಿಕೆ ರಚನೆ
ನಟ ವಿಜಯಕಾಂತ್ 2005 ರಲ್ಲಿ ದೇಸಿಯ ಮುರ್ಪೊಕ್ಕು ದ್ರಾವಿಡ ಕಳಗಂ ಪಕ್ಷವನ್ನು ಸ್ಥಾಪಿಸಿದರು. 2011ರಿಂದ 2016ರವರೆಗೆ ತಮಿಳುನಾಡಿನಲ್ಲಿ ಡಿಎಂಡಿಕೆ ಪ್ರಮುಖ ವಿರೋಧ ಪಕ್ಷವಾಗಿದ್ದು, ವಿಜಯಕಾಂತ್ ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದರು.
2006 ರಲ್ಲಿ, ವಿಜಯಕಾಂತ್ ಅವರ ಪಕ್ಷ ಡಿಎಂಡಿಕೆ ತಮಿಳುನಾಡಿನ ಎಲ್ಲಾ 234 ಸ್ಥಾನಗಳಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಿತ್ತು. ಆದರೆ ವಿಜಯಕಾಂತ್ ಮಾತ್ರ ಚುನಾವಣೆಯಲ್ಲಿ ಗೆಲ್ಲುವಲ್ಲಿ ಯಶಸ್ವಿಯಾಗಿದ್ದರು. ಉಳಿದ ಎಲ್ಲಾ ಸ್ಥಾನಗಳಲ್ಲಿ ಅವರ ಪಕ್ಷದ ಅಭ್ಯರ್ಥಿಗಳು ಸೋಲನ್ನು ಎದುರಿಸಬೇಕಾಯಿತು. ಆದರೆ, ಈ ಚುನಾವಣೆಯಲ್ಲಿ ಅವರ ಪಕ್ಷ 8.38% ಮತಗಳನ್ನು ಪಡೆದಿತ್ತು.

2009 ರ ಲೋಕಸಭಾ ಚುನಾವಣೆಯಲ್ಲಿಯೂ ವಿಜಯಕಾಂತ್ ಅವರ ಪಕ್ಷಕ್ಕೆ ಇದೇ ರೀತಿಯ ಪರಿಸ್ಥಿತಿ ಸಂಭವಿಸಿತು. ಪಕ್ಷವು ರಾಜ್ಯದ 40 ಲೋಕಸಭಾ ಸ್ಥಾನಗಳಲ್ಲಿ 39 ರಲ್ಲಿ ಸ್ಪರ್ಧಿಸಿತು, ಆದರೆ ಒಂದು ಸ್ಥಾನವನ್ನು ಸಹ ಗೆಲ್ಲಲಿಲ್ಲ. ಈ ಎರಡೂ ಚುನಾವಣೆಗಳಲ್ಲಿ ವಿಜಯಕಾಂತ್ ಪಕ್ಷ ಯಾವುದೇ ಪಕ್ಷದ ಜತೆ ಮೈತ್ರಿ ಮಾಡಿಕೊಂಡಿಲ್ಲ.

2011 ರಲ್ಲಿ ವಿಜಯಕಾಂತ್ ಅವರ ಪಕ್ಷವು 41 ಸ್ಥಾನಗಳಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಿ 29 ಸ್ಥಾನಗಳನ್ನು ಗೆದ್ದುಕೊಂಡಿತು. ಈ ಚುನಾವಣೆಯಲ್ಲಿ ಜಯಲಲಿತಾ ಅವರ ಪಕ್ಷ (ಎಐಎಡಿಎಂಕೆ) ನಂತರ ಡಿಎಂಡಿಕೆ ಎರಡನೇ ಪಕ್ಷವಾಗಿ ಹೊರಹೊಮ್ಮಿತು, ವಿಜಯಕಾಂತ್ ವಿರೋಧ ಪಕ್ಷದ ನಾಯಕರಾದರು. ಆದರೆ, ಇದಾದ ನಂತರ 2016 ಮತ್ತು 2021ರ ವಿಧಾನಸಭೆ ಚುನಾವಣೆಯಲ್ಲಿ ಒಂದೇ ಒಂದು ಸ್ಥಾನವನ್ನೂ ಗೆಲ್ಲಲು ಅವರ ಪಕ್ಷಕ್ಕೆ ಸಾಧ್ಯವಾಗಲಿಲ್ಲ.


Spread the love

About Laxminews 24x7

Check Also

ಜನರಲ್ಲಿ ವೈಚಾರಿಕತೆ, ವೈಜ್ಞಾನಿಕತೆ ಬೆಳೆಯದಿದ್ದರೆ, ಕೇವಲ ಮೌಢ್ಯ ನಿಷೇಧ ಕಾನೂನಿನ ಮೂಲಕ ನಿರೀಕ್ಷಿತ ಬದಲಾವಣೆ ಸಾಧ್ಯವಿಲ್ಲ ಎಂದ ಸಿಎಂ

Spread the loveಬೆಂಗಳೂರು: ”ದ್ವಿಭಾಷಾ ಸೂತ್ರ ನನ್ನ ಅಭಿಪ್ರಾಯವಾಗಿದೆ. ಅದನ್ನು ಸರ್ಕಾರದ ಅಭಿಪ್ರಾಯ ಮಾಡುವ ದಿಕ್ಕಿನಲ್ಲಿ ಪ್ರಯತ್ನಿಸುತ್ತೇನೆ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ