Breaking News

ಬಿಎಸ್‌ವೈ ಸರ್ಕಾರದಲ್ಲಿ ಕೋವಿಡ್‌ ವೇಳೆ ಭಾರಿ ಅವ್ಯವಹಾರ? – ಯತ್ನಾಳ್‌

Spread the love

ವಿಜಯಪುರ : ಕೋವಿಡ್‌ ಮೊದಲ ಅಲೆಯ(Covid first wave) ಸಂದರ್ಭದಲ್ಲಿ ಬಿಎಸ್‌ವೈ(B S Yediyurappa) ಸರ್ಕಾರದ ಅವಧಿಯಲ್ಲಿ ಭಾರಿ ಅವ್ಯವಹಾರ ನಡೆದಿತ್ತು ಈ ಬಗ್ಗೆ ಮಾಜಿ ಸಿಎಂ ಬಿಎಸ್‌ವೈ ಅವರಿಗೆ ಮಾಹಿತಿ ನೀಡಿದ್ದೆ ಎಂದು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್‌ ಗಂಭೀರ ಆರೋಪ ಮಾಡಿದ್ದಾರೆ.

 

ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕೊರೊನಾ ಸಮಯದಲ್ಲಿ 45 ರೂ ಮಾಸ್ಕ್‌ಗೆ 485 ರೂ ನಿಗದಿಪಡಿಸಲಾಗಿತ್ತು . ಕೊರೊನಾ ರೋಗಿ ಹೆಸರಲ್ಲಿ 8-10 ಲಕ್ಷ ರೂಪಾಯಿ ಬಿಲ್ ಮಾಡದ್ದಾರೆ. ಬೆಂಗಳೂರಿನಲ್ಲಿ 10 ಸಾವಿರ ಬೆಡ್‌ ಸಿದ್ದಪಡಿಸಲಾಗಿತ್ತು , 10 ಸಾವಿರ ಬೆಡ್‌ ಬಾಡಿಗೆ ಪಡೆದಿದ್ದರು , ಆ ಹಣದಲ್ಲಿ ಬೆಡ್‌ಗಳನ್ನು ಖರೀದಿಸಬಹುದಿತ್ತು . ನನಗೆ ಕೋವಿಡ್‌ ಪಾಸಿಟ್ ಬಂದಾಗ ಮಣಿಪಾಲ್‌ ಆಸ್ಪತ್ರೆಯಲ್ಲಿ 5 ಲಕ್ಷ 8 ಸಾವಿರ ರೂ ಬಿಲ್‌ ಮಾಡಿದ್ದರು ಬಡವರು ಇಷ್ಟೊಂದು ಹಣವನ್ನು ಎಲ್ಲಿಂದ ಕೊಡಬೇಕು? ಈ ಬಗ್ಗೆ ವಿಧಾನಸೌಧದಲ್ಲಿ ಬಿಎಸ್‌ವೈ ಅವರಿಗೆ ತಿಳಿಸಿದ್ದೆ. ನಮ್ಮದೇ ಸರ್ಕಾರವಿದ್ದರೂ ಕಳ್ಳರು ಕಳ್ಳರೇ ಎಂದು ಬಸನಗೌಡ ಪಾಟೀಲ್ ಯತ್ನಾಳ್‌ ಹೇಳಿದರು.


Spread the love

About Laxminews 24x7

Check Also

ಹಾವೇರಿ: ಶರಣ ಚೌಡಯ್ಯ ಐಕ್ಯ ಮಂಟಪಕ್ಕೆ ಜಲದಿಗ್ಬಂಧನ, ತೆಪ್ಪದಲ್ಲಿ ತೆರಳಿ ಭಕ್ತರಿಂದ ಪೂಜೆ

Spread the loveಹಾವೇರಿ: ಸಂತರ, ಶರಣರ ಮತ್ತು ದಾರ್ಶನಿಕರ ಜಿಲ್ಲೆ ಹಾವೇರಿ. ಇಲ್ಲಿ ಸರ್ವಜ್ಞ, ಅಂಬಿಗರ ಚೌಡಯ್ಯ, ಕನಕದಾಸರು, ಶಿಶುನಾಳ ಶರೀಫರು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ