Breaking News

ಪತ್ನಿಯನ್ನ ಹತ್ಯೆಗೈದು ಠಾಣೆಗೆ ಬಂದು ಶರಣಾದ ಪತಿ!

Spread the love

ಕಲಬುರಗಿ, ಡಿ.22: ಜಿಲ್ಲೆಯ ಚಿಂಚೋಳಿ(Chincholi) ತಾಲೂಕಿನ ಅಲ್ಲಾಪುರ ಎಂಬ ಗ್ರಾಮದಲ್ಲಿ ಆರೋಪಿ ಮಾರುತಿ ಈಳಿಗೇರ್ ಎಂಬ ವ್ಯಕ್ತಿ. ತನ್ನ ಜೊತೆ ಹಲವು ವರ್ಷದಿಂದ ಸಂಸಾರ ಮಾಡಿದ್ದ ಪತ್ನಿಯನ್ನು ಕೊಚ್ಚಿ ಕೊಂದಿ(Murder)ದ್ದಾನೆ. ಬಳಿಕ ಸೀದಾ ರಟಕಲ್ ಪೊಲೀಸ್ ಠಾಣೆಗೆ ಹೋಗಿ ಸರೆಂಡರ್ ಆಗಿದ್ದಾನೆ.‌ ಇನ್ನು ಈ ಆಸಾಮಿ, ಈಇಳಿ ವಯಸ್ಸಿನಲ್ಲೂಪತ್ನಿಯ ಮೇಲೆ‌ ಅನುಮಾನ ಪಡುತ್ತಿದ್ದನಂತೆ. ಆ ಕಾರಣಕ್ಕಾಗಿಯೇ ಪ್ರತಿನಿತ್ಯ ಕುಡಿದು ಬಂದು ಜಗಳ ಮಾಡುತ್ತಿದ್ದ ಮಾರುತಿ, ನಿನ್ನೆ(ಡಿ.21) ರಾತ್ರಿಯೂ ಕುಡಿದು ಬಂದು ಜಗಳ ಮಾಡಿದ್ದಾನೆ. ಗಲಾಟೆ ವಿಕೋಪಕ್ಕೆ ತಿರುಗಿ ಬೆಳಿಗ್ಗೆ ಆಗುವುದರೊಳಗೆ ಪತ್ಮಿ ಹೆಣವಾಗಿ ಬಿಟ್ಟಿದ್ದಾಳೆ.

ಇನ್ನು ಮಾರುತಿ ಈಳಿಗೇರ್ ಹಾಗೂ ಕೊಲೆಯಾಗಿರುವ ಕಾಶಮ್ಮಗೆ ಮೂರು ಜನ ಮಕ್ಕಳಿದ್ದು, ಮಗಳು ಮದುವೆ ಮಾಡಿಕೊಂಡು ಗಂಡನ ಮನೆಯಲ್ಲಿದ್ದರೇ, ಇತ್ತ ಇಬ್ಬರು ಪುತ್ರರು ಇವನ ಉಪಟಳ ತಾಳದೇ ಮನೆ ಬಿಟ್ಟು ಬೇರೆ ಕಡೆ ಜೀವನ ನಡೆಸುತ್ತಿದ್ದರು. ಮೊದಲಿನಿಂದಲೂ ಜಗಳ ಮಾಡುತ್ತಿದ್ದ ಹಿನ್ನಲೆ ಇಬ್ಬರು ಇಬ್ಬರು ಮಕ್ಕಳು ಮನೆ ಬಿಟ್ಟು ಹೋಗಿದ್ದರು.‌ ನಾಲ್ಕು ಎಕರೆ ಜಮೀನು ಬಿಟ್ಟು ಕೂಲಿ ನಾಲಿ ಮಾಡಿಕೊಂಡು ಮಕ್ಕಳು ಜೀವನ ಮಾಡುತ್ತಿದ್ದರು. ಆದ್ರೆ, ಇಂದು ಬೆಳಿಗ್ಗೆ ಏಳುತ್ತಿದ್ದಂತೆ ಅಲ್ಲಾಪುರ ಗ್ರಾಮದಿಂದ ಪೋನ್ ಕರೆ ಬಂದಿದೆ. ಮನೆಯಲ್ಲಿ ತಾಯಿ ಹೆಣವಾಗಿದ್ದಾಳೆ ಎಂಬ ಮಾತು ಕೇಳುತ್ತಿದಂತೆ. ಮಕ್ಕಳು, ಸಂಬಂಧಿಕರು ಗ್ರಾಮಕ್ಕೆ ಬಂದಿದ್ದಾರೆ.‌ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ರಟಕಲ್ ಪೊಲೀಸರು, ತನೀಖೆ ನಡೆಸುತ್ತಿದ್ದಾರೆ‌. ಪತ್ನಿ ಕೊಂದಿರುವ ಮಾರುತಿ ಕಂಬಿ ಎಣಿಸುವಂತಾಗಿದ್ದರೆ, ಇತ್ತ ಇಳಿ ವಯಸ್ಸಿನ ಕೊಲೆ ನೋಡಿ ಗ್ರಾಮವೇ ಆತಂಕ ಪಟ್ಟಿದೆ. ಅದು ಏನೇ ಇರಲಿ ಕ್ಷುಲಕ್ಕ ಕಾರಣಕ್ಕಾಗಿ ಇಷ್ಟು ದಿನ ಕಷ್ಟ ಸುಖದಲ್ಲಿ ಸಂಗಾತಿಯಾಗಿದ್ದ ಪತ್ನಿಯನ್ನೇ ಕೊಲೆ ಮಾಡಿದ್ದು ನಿಜಕ್ಕೂ ದುರಂತವೇ ಸರಿ.


Spread the love

About Laxminews 24x7

Check Also

ಡಿಜಿಟಲ್ ಅರೆಸ್ಟ್ ಮೂಲಕ ಮಂಗಳೂರಿನ ಮಹಿಳೆಗೆ 3.15 ಕೋಟಿ ರೂಪಾಯಿ ವಂಚನೆ

Spread the loveಮಂಗಳೂರು: ಮಂಗಳೂರಿನ ಮಹಿಳೆಯೊಬ್ಬರು ಡಿಜಿಟಲ್ ಅರೆಸ್ಟ್ ಎಂಬ ಹೆಸರಿನಲ್ಲಿ ನಡೆದ ಆನ್‌ಲೈನ್ ವಂಚನೆಯಲ್ಲಿ 3 ಕೋಟಿ 15 ಲಕ್ಷ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ