ಕಲಬುರಗಿ, (ಡಿಸೆಂಬರ್ 24): ಬಿವೈ ವಿಜಯೇಂದ್ರ (BY Vijayendra) ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ಆಯ್ಕೆ ಮಾಡಿದ ಬೆನ್ನಲ್ಲೇ ಇದೀಗ ಕರ್ನಾಟಕ ಬಿಜೆಪಿ(Karnataka BJP) ಪದಾಧಿಕಾರಿಗಳ ನೇಮಕಾತಿ ಸಹ ಆಗಿದೆ. ವಿವಿಧ ಮೋರ್ಚ, ರಾಜ್ಯ ಉಪಾಧ್ಯಕ್ಷ, ರಾಜ್ಯ ಕಾರ್ಯದರ್ಶಿಗಳನ್ನು ನೇಮಕ ಮಾಡಲಾಗಿದೆ. ಇದರಲ್ಲಿ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಮೇಲುಗೈ ಸಾಧಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮತ್ತೊಂದು ಬಣ ಅಸಮಾಧಾನಗೊಂಡಿದೆ. ಅದರಲ್ಲೂ ಮೊದಲಿಗೆ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಇದ್ದು, 2024ರ ವರೆಗೆ ತಡೆಯಿರಿ. ಆಮೇಲೆ ಎಲ್ಲವೂ ಬದಲಾವಣೆಯಾಗುತ್ತೆ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ.
ಕಲಬುರಗಿಯಲ್ಲಿಂದು ಮಾತನಾಡಿದ ಯತ್ನಾಳ್, ಅವರು ದೊಡ್ಡ ದೊಡ್ಡ ಹುದ್ದೆ ತೆಗೆದುಕೊಂಡಿದ್ದಾರೆ. ಉತ್ತರ ಕರ್ನಾಟಕ ಇವು ಆಲ್ತು ಪಾಲ್ತು ನೀಡಿದ್ದಾರೆ. ಪರಿಷತ್ ವಿಪಕ್ಷ ನಾಯಕಸ್ಥಾನವೊಂದು ಎನ್ ರವಿಕುಮಾರ್ ಗೆ ನೀಡುತ್ತಾರೆ. ರವಿಕುಮಾರ್ ಯಡಿಯೂರಪ್ಪ ಶಿಷ್ಯ ಅಲ್ವಾ. ಮತ್ತೊಮ್ಮೆ ಮೋದಿ ಪ್ರಧಾನಿಯಾಗಲಿ ಅವಾಗ ಬದಲಾವಣೆಯಾಗುತ್ತೆ. 28ಕ್ಕೆ 28 ಸ್ಥಾನ ಗೆಲ್ಲುತ್ತೇವೆ ಎಂದಿದ್ದಾರೆ. ಒಂದು ಕಡಿಮೆಯಾದ್ರು ಮುಂದೆ ರಾಜಸ್ಥಾನ, ಮಧ್ಯಪ್ರದೇಶದಲ್ಲಾಗಿಲ್ವಾ ಹಾಗಗುತ್ತೆ. ಎಲ್ಲಾ ಇದು ಮೀಲಾಪಿ ಕುಸ್ತಿಯಿದೆ ಎಂದು ಹೇಳಿದರು.