Breaking News

ನಿವೃತ್ತ ಅಧಿಕಾರಿಗಳ ಮನೆಯಿಂದ ಸಿಬ್ಬಂದಿ ವಾಪಾಸ್

Spread the love

ಬೆಂಗಳೂರು: ನಿವೃತ್ತ ಐಪಿಎಸ್ (IPS) ಅಧಿಕಾರಿಗಳು ಸೇರಿದಂತೆ ನಿವೃತ್ತ ಅಧಿಕಾರಿಗಳ ಮನೆಯಲ್ಲಿ ಕೆಲಸ‌ ಮಾಡುತ್ತಿದ್ದ ಸಿಬ್ಬಂದಿಯ ವಾಪಸ್​ಗೆ ಸರ್ಕಾರ ಸೂಚನೆ ನೀಡಿದೆ.

ಐಪಿಎಸ್ ಅಧಿಕಾರಿಗಳು ನಿವೃತ್ತಿ ಹೊಂದಿದ್ದರೂ ತಮ್ಮ ಮನೆಯಲ್ಲಿ ಕೆಎಸ್‌ಆರ್​ಪಿ (KSRP) ಸಿಬ್ಬಂದಿಯನ್ನು ಬಳಸಿಕೊಂಡು ಬೇರೆಬೇರೆ ಕೆಲಸಗಳನ್ನು ಮಾಡಿಸುತ್ತಿದ್ದರು.

ಈ ಬಗ್ಗೆ ಸಾಕಷ್ಟು ಆರೋಪಗಳು ಕೇಳಿ ಬಂದಿದ್ದರಿಂದ ಸರ್ಕಾರ ಈ ಸೂಚನೆ ಹೊರಡಿಸಿದೆ.

ತಕ್ಷಣ ಜಾರಿಯಾಗುವಂತೆ ಈ ಆದೇಶ ನೀಡಲಾಗಿದ್ದು ನಿವೃತ್ತ ಐಪಿಎಸ್ ಅಧಿಕಾರಿಗಳ ಮನೆಯಲ್ಲಿ ಕೆಲಸ‌ ಮಾಡುತ್ತಿರುವವರು ತಕ್ಷಣ ವಾಪಸ್ ಬರುವಂತೆ ಸೂಚನೆ ನೀಡಲಾಗಿದೆ.

ನಿವೃತ್ತಿ ಹೊಂದಿರುವ ಅಧಿಕಾರಿಗಳ ಮನೆಯಲ್ಲಿ ಕೆಲಸ ಮಾಡುತ್ತಿರುವ ಪೊಲೀಸ್ ಸಿಬ್ಬಂದಿ ಬಗ್ಗೆ ಡಿಜಿ- ಐಜಿಯವರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವರದಿ ಕೇಳಿದ್ದು, ವಾರದೊಳಗೆ ಮಾಹಿತಿ ನೀಡುವಂತೆ ಸೂಚಿಸಿದ್ದಾರೆ


Spread the love

About Laxminews 24x7

Check Also

ಅಕ್ರಮ ಸಂಬಂಧ : ಮಹಿಳೆಯನ್ನು ಕೊಂದು ಅರ್ಧ ದೇಹವನ್ನ ಫ್ರಿಡ್ಜ್‌ನಲ್ಲಿಟ್ಟಿದ್ದ ನೌಕಾಪಡೆ ಉದ್ಯೋಗಿ…

Spread the loveಹೈದರಾಬಾದ್‌: ವಿವಾಹಿತ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ ನೌಕಾಪಡೆಯ ಉದ್ಯೋಗಿ, ಆಕೆಯನ್ನು ಕೊಂದು, ಮೃತದೇಹವನ್ನು ಫ್ರಿಡ್ಜ್‌ನಲ್ಲಿಟ್ಟಿದ್ದ ಆಘಾತಕಾರಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ