Breaking News

ಶಾಸಕ ದರ್ಶನ್ ಪುಟ್ಟಣ್ಣಯ್ಯ ಕಚೇರಿ ಸೇರಿದಂತೆ 3 ಸರ್ಕಾರಿ ಆಫೀಸ್​​​​​​ಗೆ ವಿದ್ಯುತ್​ ಕಡಿತ

Spread the love

ಮಂಡ್ಯ: ರಾಜ್ಯಕ್ಕೆ ಉಚಿತ ವಿದ್ಯುತ್​ ಕೊಟ್ಟ ಸರ್ಕಾರದ ಶಾಸಕರ ಕಚೇರಿಯೇ ಕತ್ತಲಲ್ಲಿ ಮುಳುಗಿದೆ. ಹೌದು, ಕೆ.ಇ.ಬಿಗೆ ಕರೆಂಟ್​ ಬಿಲ್​ ಪಾವತಿಸದ ಹಿನ್ನೆಲೆ ಮೇಲುಕೋಟೆ ಕ್ಷೇತ್ರದ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರ ಕಚೇರಿಗೆ ವಿದ್ಯುತ್​ ಕಡಿತಗೊಳಿಸಲಾಗಿದೆ. ವಿದ್ಯುತ್​ ಕಡಿತದಿಂದ ಶಾಸಕರ ಕಚೇರಿಯಲ್ಲದೇ ಸರ್ಕಾರಿ ಕಚೇರಿಗಳು ಬೆಳಕಿಲ್ಲದೇ ಕಾರ್ಯ ನಿರ್ವಹಿಸುತ್ತಿವೆ.

ತಹಶೀಲ್ದಾರ್​ ​ ಹೇಳಿದ್ದಿಷ್ಟು: ಮೊದಲು ಈ ಕಟ್ಟಡವನ್ನು ಸೆಂಟ್ರಲ್​​ ಪೊಲೀಸ್​ ಠಾಣೆಗೆ ನೀಡಲಾಗಿತ್ತು. ಪೊಲೀಸ್​ ಠಾಣೆ ಇರುವ ತನಕ ಪೊಲೀಸ್​ ಇಲಾಖೆಯೆ ವಿದ್ಯುತ್​ ಬಿಲ್​ ಕಟ್ಟಿಕೊಂಡು ಬರುತ್ತಿತ್ತು. ಬಳಿಕ ಪೊಲೀಸ್​ ಠಾಣೆ ಸ್ಥಳಾಂತರಗೊಂಡ ಮೇಲೆ ಕಂದಾಯ ಕಚೇರಿಗೆ ನೀಡಲಾಗಿತ್ತು. ಸ್ಥಳಾಂತರಗೊಂಡ ನಂತರ ಕಂದಾಯ​ ಇಲಾಖೆ ಬಿಲ್ ಕಟ್ಟಬೇಕಾಗಿತ್ತು. ಆದರೆ, ವಿದ್ಯುತ್​ ಮೀಟರ್​ ಪೊಲೀಸ್​ ಇಲಾಖೆಯ ಹೆಸರಿನಲ್ಲಿದೆ, ಕಂದಾಯ ಇಲಾಖೆ ಬಿಲ್​ ಕಟ್ಟುವುದು ಸೂಕ್ತವಲ್ಲ. ಹೀಗಾಗಿ ಕರೆಂಟ್​ ಬಿಲ್​ ಪಾವತಿಸಲು ಬಾಕಿಯಾಗಿದ್ದರಂದ ಕೆಇಬಿ ಕರೆಂಟ್​ ಕಡಿತಗೊಳಿಸಿದೆ. ಇನ್ನು 2 ದಿನದಲ್ಲಿ ಮೀಟರ್​ ಹೆಸರನ್ನು ಕಂದಾಯ ಇಲಾಖೆಗೆ ಮಾಡಿ ಬಾಕಿ ಇರುವ ಬಿಲ್​ನ್ನು ಪಾವತಿಸಲಾಗುವುದು. ಅದು ಬಿಟ್ಟರೆ ಬೇರೆ ಏನು ಸಮಸ್ಯೆಯಾಗಿಲ್ಲ ಎಂದು ತಹಶೀಲ್ದಾರ್ಶಿವಕುಮಾರ್​ ಬಿರಾದರ್ ಹೇಳಿದ್ದಾರೆ.

ಕಚೇರಿಯಲ್ಲಿ ಹಿರಿಯರ ನಾಗರಿಕರ ಸಹಾಯವಾಣಿ ಹಾಗೂ ಜನ ಸೇವಾ ಸ್ಪಂದನಾ ಕೇಂದ್ರ ಕೂಡ ಇದೆ. ಕಳೆದ 15 ದಿನಗಳಿಂದ ಇಲ್ಲಿ ಕತ್ತಲು ಆವರಿಸಿದೆ. ಎರಡೂ ಕಚೇರಿಗಳೂ ಕತ್ತಲಲ್ಲೇ ಮುಳುಗಿವೆ. ಕಚೇರಿಗೆ ಬರುವ ವೃದ್ಧರಿಗೆ ಬೆಳಕಿಲ್ಲದೇ ಸಮಸ್ಯೆಯಾಗುತ್ತಿದೆ. ವಿದ್ಯುತ್​ ಇಲ್ಲದೇ ಎಲ್ಲರೂ ಕಾರ್ಯ ನಿರ್ವಹಿಸುತ್ತಿದ್ದಾರೆ. ಎಷ್ಟು ಹಣ ಬಾಕಿ ಎಂಬ ಬಗ್ಗೆ ಮಾಹಿತಿ ಇಲ್ಲ. ಇಲ್ಲಿ ಜನಸ್ಪಂದನಾ, ಶಾಸಕ ದರ್ಶನ್ ಪುಟ್ಟಣ್ಣಯ್ಯ ಕಚೇರಿ, ಹಾಗೇ ಸಹಾಯವಾಣಿ ಇದ್ದು ಮೂರು ಕಚೇರಿಯವರು ನಾವು ಬಿಲ್​ ಕಟ್ಟಲ್ಲ, ನಾವು ಕಟ್ಟಲ್ಲ ಎಂದಿದ್ದರಿಂದ ಈಗ ಕರೆಂಟ್​ ಕಟ್​ ಆಗಿದೆ. ಮೂರೂ ಕಟ್ಟಡಕ್ಕೂ ಒಂದೇ ಮೀಟರ್​ ಇರುವುದು. ನಾವು ಕತ್ತಲ್ಲಲೇ ಕೆಲಸ ಮಾಡುತ್ತಿದ್ದೇವೆ. ಸರ್ಕಾರಿ ಕಚೇರಿಯ ವಿದ್ಯುತ್ ಕಡಿತ ಮಾಡಿದ್ದಾರೆ ಎಂದು ಕಚೇರಿ ನೌಕರ ಸಿಬ್ಬಂದಿ ಅಳಲು ತೋಡಿಕೊಂಡಿದ್ದಾರೆ.

ಹಾಗೇ ಹಿರಿಯ ನಾಗರಿಕರ ಸಹಾಯವಾಣಿ ಕಚೇರಿಯ ನೌಕರಿ ಪಲ್ಲವಿ ಮಾತನಾಡಿ, 15 ದಿನದಿಂದ ವಿದ್ಯುತ್​ ಇಲ್ಲ. 60 ವರ್ಷದ ಮೇಲ್ಪಟ್ಟವರೇ ಹೆಚ್ಚಾಗಿ ಇಲ್ಲಿಗೆ ಬರುತ್ತಾರೆ. ವಯಸ್ಸಾದವರು ಕತ್ತಲು ಕೋಣೆಗೆ ಹೇಗೆ ಬರುವುದು ಎಂದು ನಮ್ಮನ್ನು ಪ್ರಶ್ನಿಸುತ್ತಿದ್ದಾರೆ. ಆದರೆ, ನಮಗೆ ಪ್ರತಿಕ್ರಿಯಿಸಲು ಸಾಧ್ಯವಾಗುತ್ತಿಲ್ಲ. ನಾವು ದರ್ಶನ್ ಪುಟ್ಟಣ್ಣಯ್ಯ ಅವರ ಕಚೇರಿಯಲ್ಲೂ ಮಾತನಾಡಿದ್ದೇವೆ ಎಂದು ಹೇಳಿದ್ದಾರೆ.


Spread the love

About Laxminews 24x7

Check Also

ಶಿವಮೊಗ್ಗ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಇಲ್ಲಿನ ತಾಲೂಕು ಆಡಳಿತಗಳು ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಿವೆ.

Spread the loveಶಿವಮೊಗ್ಗ/ಉತ್ತರಕನ್ನಡ: ರಾಜ್ಯದ ಮಲೆನಾಡು ಭಾಗದ ಹಲವೆಡೆ ಮತ್ತೆ ಮಳೆಯ ಆರ್ಭಟ ಮುಂದುವರೆದಿದೆ. ಭಾರಿ ವರ್ಷಧಾರೆ ಹಿನ್ನೆಲೆಯಲ್ಲಿ ಶಿವಮೊಗ್ಗ ಹಾಗೂ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ