Breaking News

ಉಗ್ರರ ವಿರುದ್ಧದ ಕಾರ್ಯಾಚರಣೆಯಲ್ಲಿ ವೀರಮರಣ ಹೊಂದಿದ ಕ್ಯಾ. ಪ್ರಾಂಜಲ್​ ಅವರ ಕುಟುಂಬಕ್ಕೆ ರಾಜ್ಯ ಸರ್ಕಾರ ಸಹಾಯಾರ್ಥವಾಗಿ ಚೆಕ್​ ವಿತರಣೆ

Spread the love

ಆನೇಕಲ್: ದೇಶಕ್ಕಾಗಿ ಉಗ್ರರ ವಿರುದ್ಧದ ಹೋರಾಟದಲ್ಲಿ ವೀರಮರಣ ಹೊಂದಿದ ಕ್ಯಾಪ್ಟನ್ ಪ್ರಾಂಜಲ್ ಕುಟುಂಬಕ್ಕೆ ರಾಜ್ಯ ಸರ್ಕಾರ ಕೊಟ್ಟ ವಾಗ್ದಾನದಂತೆ ಜಿಲ್ಲಾಡಳಿತದ ಮೂಲಕ 50 ಲಕ್ಷ ರೂ.

ಸಹಾಯಾರ್ಥವಾಗಿ ಚೆಕ್ ವಿತರಣೆ ಮಾಡಿದ್ದಾರೆ.

ಕ್ಯಾಪ್ಟನ್ ಪ್ರಾಂಜಲ್ ಅಂತಿಮ ದರ್ಶನ ಪಡೆದ ಸಂದರ್ಭದಲ್ಲಿ ಸಿಎಂ ಸಿದ್ದರಾಮಯ್ಯ ಹುತಾತ್ಮ ವೀರ ಸೇನಾನಿ ಕುಟುಂಬಕ್ಕೆ 50 ಲಕ್ಷ ರಾಜ್ಯ ಸರ್ಕಾರದಿಂದ ಸಹಾಯಾರ್ಥವಾಗಿ ನೀಡುವುದಾಗಿ ಘೋಷಣೆ ಮಾಡಿದ್ದರು. ಕೊಟ್ಟ ಮಾತಿನಂತೆ ಬೆಂಗಳೂರು ನಗರ ಜಿಲ್ಲಾಧಿಕಾರಿ ಕೆ.ಎ ದಯಾನಂದ್, ಬೆಂ.ಗ್ರಾ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ, ಸೈನಿಕ ಕಲ್ಯಾಣ ಪುನರ್ವಸತಿ ಇಲಾಖೆ ನಿರ್ದೆಶಕ ಶಶಿಧರ್ ಸೇರಿದಂತೆ ಹಿರಿಯ ಅಧಿಕಾರಿಗಳು ಆನೇಕಲ್ ತಾಲ್ಲೂಕಿನ ಜಿಗಣಿ ಬಳಿಯ ನಂದನವನ ಬಡಾವಣೆಯಲ್ಲಿರುವ ಹುತಾತ್ಮ ಯೋಧ ಪ್ರಾಂಜಲ್ ನಿವಾಸಕ್ಕೆ ಆಗಮಿಸಿ ರಾಜ್ಯ ಸರ್ಕಾರದ ಪರವಾಗಿ ಚೆಕ್ ಹಸ್ತಾಂತರ ಮಾಡಿದ್ದಾರೆ.

ಪ್ರಾಂಜಲ್ ತಾಯಿ ಅನುರಾಧ ಮತ್ತು ಪತ್ನಿ ಅದಿತಿ ಅವರಿಗೆ ತಲಾ 25 ಲಕ್ಷ ರೂ. ಚೆಕ್ ಹಸ್ತಾಂತರ ಮಾಡಿದ್ದಾರೆ. ಬಳಿಕ ಬೆಂಗಳೂರು ನಗರ ಜಿಲ್ಲಾಧಿಕಾರಿ ದಯಾನಂದ್ ಮಾಧ್ಯಮಗಳೊಂದಿಗೆ ಮಾತನಾಡಿ, ದೇಶಕ್ಕಾಗಿ ವೀರಯೋಧ ಪ್ರಾಂಜಲ್ ಹುತಾತ್ಮರಾಗಿದ್ದಾರೆ. ಸರ್ಕಾರದಿಂದ ಸಹಾಯಾರ್ಥವಾಗಿ 50 ಲಕ್ಷ ಮೌಲ್ಯದ ಚೆಕ್ ವಿತರಣೆಯನ್ನು ಮಾಡಲಾಗಿದೆ. ದೇಶಸೇವೆ ಎನ್ನುವುದು ಅತಿದೊಡ್ಡ ಕಾಯಕವಾಗಿದ್ದು, ಯುವ ಸಮುದಾಯಕ್ಕೆ ಹುತಾತ್ಮ ಯೋಧ ಪ್ರಾಂಜಲ್ ಮಾದರಿಯಾಗಿದ್ದಾರೆ. ನಮ್ಮ ದೇಶ, ನಾಮ್ಮ ನಾಡಿಗೆ ಪ್ರಾಣ ಮುಡಿಪು ಎನ್ನುವಂತಹವರಿಗೆ ಪ್ರಾಂಜಲ್ ಪ್ರೇರಣೆ ಎಂದು ಹೇಳಿಕೆ ನೀಡಿದ್ದಾರೆ.

 


Spread the love

About Laxminews 24x7

Check Also

ಕಾಂಗ್ರೆಸ್ ನಲ್ಲಿ ಸಿದ್ದರಾಮಯ್ಯ ಅವರೇ ಸಿಎಂ ಆಗಿ ಮುಂದುವರೆಯಬೇಕು. ಇಲ್ಲದಿದ್ದರೆ ಸರ್ಕಾರವೇ ಪತನವಾಗುತ್ತದೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟ‌ರ್ ಭವಿಷ್ಯ ನುಡಿದಿದ್ದಾರೆ.

Spread the love ಕಾಂಗ್ರೆಸ್ ನಲ್ಲಿ ಸಿದ್ದರಾಮಯ್ಯ ಅವರೇ ಸಿಎಂ ಆಗಿ ಮುಂದುವರೆಯಬೇಕು. ಇಲ್ಲದಿದ್ದರೆ ಸರ್ಕಾರವೇ ಪತನವಾಗುತ್ತದೆ ಎಂದು ಮಾಜಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ