Breaking News

ಲೋಕಸಭೆನೂ ಗೆಲ್ತಿವಿ ರಾಹುಲ್‌ ಪ್ರಧಾನಿಯಾಗ್ತಾರೆ:ಸಲೀಂ ಅಹಮ್ಮದ್ ಭವಿಷ್ಯ

Spread the love

ದಾವಣಗೆರೆ, ಡಿಸೆಂಬರ್‌ 03: ಪಂಚರಾಜ್ಯ ಚುನಾವಣೆ ಸೆಮಿ ಫೈನಲ್. ಇಲ್ಲಿ ಗೆದ್ದು ಲೋಕಸಭೆನೂ ಗೆಲ್ಲುತ್ತೇವೆ, ನಮ್ಮ ರಾಹುಲ್ ಗಾಂಧಿ ಪ್ರಧಾನಿ ಆಗುತ್ತಾರೆ ಎಂದು ದಾವಣಗೆರೆಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮ್ಮದ್ ಭವಿಷ್ಯ ನುಡಿದಿದ್ದಾರೆ.

ಈ ಕುರಿತು ಮಾಧ್ಯಮಗಳ ಜೊತೆಗೆ ಮಾತನಾಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮ್ಮದ್ , ಕಾಂಗ್ರೆಸ್ ಪಕ್ಷಕ್ಕೆ ಒಳ್ಳೇಯ ದಿನ.

ಐದರಲ್ಲಿ ನಾಲ್ಕು ರಾಜ್ಯಗಳಲ್ಲಿ ಗೆದ್ದೇ ಗೆಲ್ಲುತ್ತೇವೆ. ಎಲ್ಲಾ ಸಮೀಕ್ಷೆಗಳು ಕೂಡ ನಮ್ಮ ಪರವಾಗಿ ಬಂದಿವೆ. ಪಂಚರಾಜ್ಯ ಚುನಾವಣೆ ಫಲಿತಾಂಶ ಮುಂದಿನ ಲೋಕಸಭೆಗೆ ದಿಕ್ಸೂಚಿ. ಬಿಜೆಪಿ ಅಡಳಿತದಿಂದ ಜನರು ರೋಸಿ ಹೋಗಿದ್ದಾರೆ ಎಂದು ಹೇಳಿದರು.

15 ಲಕ್ಷ ಹಣ ಖಾತೆಗೆ ಬಂದಿಲ್ಲ, ಉದ್ಯೋಗ ಸೃಷ್ಠಿಯಾಗಿಲ್ಲ. ಬರೀ ನಮ್ ಕೀ ಬಾತ್ ಮಾಡಿಕೊಂಡು ಕಾಮ್ ಕೀ ಬಾತ್ ಮರ್ತಿದ್ದಾರೆ, ಈ ಬಾರಿ INDIA ಅಧಿಕಾರಕ್ಕೆ ಬರೋದು ಶತಸಿದ್ದ. ಈ ಪಂಚರಾಜ್ಯ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವೇ ಅಧಿಕಾರಕ್ಕೆ ಬರಲಿದೆ, ರಾಜ್ಯದಲ್ಲಿ ಬರ ಇದ್ದರೂ ಕೇಂದ್ರ ದಿಂದ ಮಾತ್ರ ಹಣ ಬಿಡುಗಡೆಯಾಗಿಲ್ಲ. 25 ಜನ ಸಂಸದರು ಐದು ಜನ ಕೇಂದ್ರ ಮಂತ್ರಿಗಳು ಇದ್ದರೂ ಬಿಡುಗಡೆ ಮಾಡಿಲ್ಲ ಎಂದು ಹೇಳಿದರು.

ಕೇಂದ್ರ ಸಚಿವೆ ನಿರ್ಮಲ ಸೀತರಾಮನ್ ಕರ್ನಾಟಕದವರೇ ಆಗಿದ್ದಾರೆ. ಅದರೂ ಕೂಡ ಬರ ಪರಿಹಾರ ಬಿಡುಗಡೆ ಮಾಡಿಸಲು ಆಗುತ್ತಿಲ್ಲ, ರಾಜ್ಯ ಸರ್ಕಾರ ಬರ ನಿರ್ವಹಣೆ ಸರಿಯಾಗಿ ಮಾಡುತ್ತಿದೆ.


Spread the love

About Laxminews 24x7

Check Also

ಧೈರ್ಯ ವಿದ್ದರೆ ಮಾತ್ರ ಯಶಸ್ಸು ಕಾಣಲು ಸಾಧ್ಯವಾಗುತ್ತದೆ ಎಂದು ಉದ್ಯಮಿ ಕಾಂಗ್ರೆಸ್ ಮುಖಂಡ ರವಿ ಕರಾಳೆ ಹೇಳಿದರು.

Spread the loveಧೈರ್ಯ ವಿದ್ದರೆ ಮಾತ್ರ ಯಶಸ್ಸು ಕಾಣಲು ಸಾಧ್ಯವಾಗುತ್ತದೆ ಎಂದು ಉದ್ಯಮಿ ಕಾಂಗ್ರೆಸ್ ಮುಖಂಡ ರವಿ ಕರಾಳೆ ಹೇಳಿದರು. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ