ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ಡಿ.4ರಿಂದ ನಡೆಯಲಿರುವ ಚಳಿಗಾಲದ ಅಧಿವೇಶನದಲ್ಲಿ ಕಾಂಗ್ರೆಸ್ ವಿರುದ್ಧ ಪಟ್ಟಾಗಿ ಕುಸ್ತಿಗೆ ಇಳಿಯಲು ದೋಸ್ತಿಗಳು ಸಜ್ಜಾಗಿದ್ದಾರೆ.
ರೇಸ್ಕೋರ್ಸ್ ರಸ್ತೆಯಲ್ಲಿನ ಅಪಾರ್ಟ್ವೆುಂಟ್ವೊಂದರಲ್ಲಿ ಬಿಜೆಪಿ, ಜೆಡಿಎಸ್ ನಾಯಕರು ರಹಸ್ಯ ಸಮಾಲೋಚನೆ ನಡೆಸಿ, ಸದನದಲ್ಲಿ ಹೂಡಲಿರುವ ಜಂಟಿ ಸಮರದ ತಂತ್ರಗಳಿಗೆ ಅಂತಿಮ ಸ್ಪರ್ಶ ನೀಡಿದರು.
ರಾಜ್ಯದ ಹಿತ, ರಚನಾತ್ಮಕವಾಗಿ ಜವಾಬ್ದಾರಿ ನಿರ್ವಹಣೆ, ಸದನದ ಅಮೂಲ್ಯ ಸಮಯ ವ್ಯರ್ಥವಾಗದಂತೆ ನೋಡಿಕೊಳ್ಳುವ ವಿಚಾರದಲ್ಲಿ ಉಭಯ ಪಕ್ಷಗಳು ಬದ್ಧವಾಗಿರಲು ಸಮ್ಮತಿಸಿವೆ. ವೈಫಲ್ಯಗಳನ್ನು ಎತ್ತಿ ಹಿಡಿಯುವ, ಕಟ್ಟಿಹಾಕುವ ಕಾರ್ಯ
ತಂತ್ರಗಳನ್ನು ಹಳಿ ತಪ್ಪಿಸಲು ಸರ್ಕಾರವು ಪ್ರಯತ್ನಿಸುವ ಸಾಧ್ಯತೆ ಗಳಿದ್ದು, ಈ ಬಗ್ಗೆ ಎಚ್ಚರಿಕೆಯ ಹೆಜ್ಜೆಯಿಡಬೇಕು. ರಾಜ್ಯದ ಜನತೆಗೆ ಅದರಲ್ಲೂ ಉತ್ತರ ಕರ್ನಾಟಕದ ಜನತೆಗೆ ಪ್ರತಿಪಕ್ಷಗಳ ಒಲವು-
ನಿಲುವಿನ ಬಗ್ಗೆ ಸ್ಪಷ್ಟ ಸಂದೇಶವನ್ನೂ ರವಾನಿಸಬೇಕು ಎಂಬ ನಿಟ್ಟಿನಲ್ಲಿ
ತಂತ್ರ ಹೆಣೆದಿದ್ದಾರೆ. ಗದ್ದಲ, ಕೋಲಾಹಲವೆಬ್ಬಿಸಿ ವಿಷಯಾಂತರಕ್ಕೆ ಕಾರಣವಾಗುವ, ಪ್ರತಿಪಕ್ಷಗಳತ್ತಲೇ ಬೊಟ್ಟು ಮಾಡಿ ತೋರಿಸುವ ಸರ್ಕಾರದ ನುಡಿ-ನುಡಿಯನ್ನೂ ಸೂಕ್ಷ್ಮವಾಗಿ ಗ್ರಹಿಸಬೇಕು ಎಂದು ಉಭಯ ಪಕ್ಷಗಳ ನಾಯಕರು ಮಾತಾಡಿಕೊಂಡಿದ್ದಾರೆ.
ಜಂಟಿ ಹಾಗೂ ಪ್ರತ್ಯೇಕವಾಗಿ ಪ್ರಸ್ತಾಪಿಸಬೇಕಾದ ವಿಷಯಗಳ ಪಟ್ಟಿಯನ್ನು ಮಾಡಿಕೊಂಡಿದ್ದು, ವಿಸõತ ಚರ್ಚೆಗೆ ಅವಕಾಶ ಗಿಟ್ಟಿಸಿಕೊಳ್ಳುವ ರೀತಿಯಲ್ಲಿ ಪ್ರಯತ್ನಗಳಿರಬೇಕು. ಪ್ರತ್ಯೇಕ ವಿಷಯಗಳ ಪಟ್ಟಿಯಲ್ಲಿ ಒಬ್ಬರು ಪ್ರಸ್ತಾಪಿಸಿದರೆ ಮತ್ತೊಬ್ಬರು ಚರ್ಚೆ ಮುಂದುವರಿಸಿ, ಎಲ್ಲ ಆಯಾಮಗಳಿಂದ ಸದನ ‘ಫಲಪ್ರದ’ಗೊಳಿಸುವ ಪ್ರಯತ್ನ ಮುಖ್ಯ ಎನ್ನುವ ಸಂಕಲ್ಪ ಮಾಡಿದ್ದಾರೆ.